ರಾಷ್ಟ್ರಪತಿಗೆ ಇಸಿ ಪತ್ರ ಬರೆಯುವ ಮೊದಲೇ ಎನ್‌ಡಿಎ ಸಭೆ ಕರೆದ ಪ್ರಧಾನಿ: ಶಿಷ್ಟಾಚಾರ ಭಂಗ
x

ರಾಷ್ಟ್ರಪತಿಗೆ ಇಸಿ ಪತ್ರ ಬರೆಯುವ ಮೊದಲೇ ಎನ್‌ಡಿಎ ಸಭೆ ಕರೆದ ಪ್ರಧಾನಿ: ಶಿಷ್ಟಾಚಾರ ಭಂಗ


ನರೇಂದ್ರ ಮೋದಿ ಅವರು ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ಒಂದು ದಿನದ ನಂತರ ಬುಧವಾರ (ಜೂನ್ 5) ತಮ್ಮ ನಿವಾಸದಲ್ಲಿ ಎನ್‌ಡಿಎ ಪಾಲುದಾರರ ಸಭೆಯನ್ನು ಕರೆದಿರುವುದು ಪ್ರಮಾಣಿತ ಕಾರ್ಯವಿಧಾನದ ಉಲ್ಲಂಘನೆ ಎಂದು ರಾಜಕೀಯ ತಜ್ಞರು ಹೇಳಿದ್ದಾರೆ.

ಮೋದಿ ಅವರನ್ನು ಎನ್‌ ಡಿಎ ಪಾಲುದಾರರು ಅವಿರೋಧವಾಗಿ ತಮ್ಮ ನಾಯಕನನ್ನಾಗಿ ಆಯ್ಕೆ ಮಾಡಿ, ಸತತ ಮೂರನೇ ಅವಧಿಗೆ ಪ್ರಮಾಣವಚನ ಸ್ವೀಕರಿಸಲು ದಾರಿ ಮಾಡಿಕೊಟ್ಟರು. ರಾಜಕೀಯ ನಿರೂಪಕ ಜಾವೇದ್ ಅನ್ಸಾರಿ ಇದನ್ನು ʻಕುದುರೆ ಮುಂದೆ ಬಂಡಿ ಇಡುವುದುʼ ಎಂದು ಕರೆದಿದ್ದಾರೆ.

ಪ್ರಮಾಣಿತ ಕಾರ್ಯವಿಧಾನ: ದ ಫೆಡರಲ್‌ ಜೊತೆ ಮಾತನಾಡಿದ ಅನ್ಸಾರಿ, ʻಅನುಸರಿಸಬೇಕಾದ ಪ್ರಕ್ರಿಯೆಯನ್ನು ನಿಯಮದ ಪುಸ್ತಕದಲ್ಲಿ ನಮೂದಿಸಲಾಗಿದೆ. ಮತಗಳ ಎಣಿಕೆ ಮುಗಿದ ನಂತರ, ʻಗೆಲ್ಲುವ ಅಭ್ಯರ್ಥಿಗೆ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಇಬ್ಬರು ಚುನಾವಣೆ ಆಯುಕ್ತರಿಗೆ ರಾಷ್ಟ್ರಪತಿ ಬಳಿ ಭೇಟಿಗೆ ಸಮಯ ಕೇಳುತ್ತಾರೆ. ರಾಷ್ಟ್ರಪತಿ ಅವರು ಹಿಂದಿನ ಲೋಕಸಭೆಯನ್ನು ವಿಸರ್ಜಿಸುತ್ತಾರೆ,ʼ ಎಂದು ಹೇಳಿದರು.

ʻಆನಂತರ ರಾಷ್ಟ್ರಪತಿ ಅವರು ಏಕೈಕ ದೊಡ್ಡ ಪಕ್ಷ ಅಥವಾ ಮೈತ್ರಿಕೂಟದ ನಾಯಕನನ್ನು ಆಹ್ವಾನಿಸುತ್ತಾರೆ. ಸಂಖ್ಯಾಬಲ ಕೇಳುತ್ತಾರೆ. ಸಂಖ್ಯಾಬಲ ಇದೆ ಎಂದು ಖಾತ್ರಿಯಾದರೆ, ಸದನದಲ್ಲಿ ಬಹುಮತವನ್ನು ಸಾಬೀತುಪಡಿಸಲು ಆಡಳಿತ ಪಕ್ಷದ ನಾಯಕನಿಗೆ ದಿನಾಂಕ ನೀಡಲಾಗುತ್ತದೆ, ʼಎಂದು ಅನ್ಸಾರಿ ಹೇಳಿದರು.

ಚುನಾವಣೆ ಆಯೋಗ ರಾಷ್ಟ್ರಪತಿಯನ್ನು ಇನ್ನೂ ಭೇಟಿ ಆಗಿಲ್ಲ: ಜೊತೆಗೆ, ʻಸರ್ಕಾರದ ನೇತೃತ್ವ ವಹಿಸುವವರು ಪಕ್ಷದ ಸಂಸದೀಯ ನಾಯಕರಾಗಿ ಆಯ್ಕೆಯಾಗಬೇಕಾಗುತ್ತದೆ. ಆನಂತರ ಮಿತ್ರಪಕ್ಷಗಳು ಸಭೆಯಲ್ಲಿ ಸರ್ಕಾರದ ನೇತೃತ್ವ ವಹಿಸಲು ನಾಯಕನನ್ನು ಆಯ್ಕೆ ಮಾಡಬೇಕು. ಪಕ್ಷ ಮತ್ತು ಮಿತ್ರಪಕ್ಷಗಳ ಬೆಂಬಲ ಪತ್ರದೊಂದಿಗೆ ರಾಷ್ಟ್ರಪತಿ ಅವರನ್ನು ಬೇಟಿಯಾಗಿ, 272 ಕ್ಕಿಂತ ಹೆಚ್ಚು ಬಹುಮತವಿದೆ ಎಂದು ತೋರಿಸಬೇಕು. ಆನಂತರ ರಾಷ್ಟ್ರಪತಿ ಅವರು ನಾಯಕರನ್ನು ಸರ್ಕಾರ ರಚಿಸಲು ಆಹ್ವಾನಿಸುತ್ತಾರೆ,ʼ ಎಂದು ಅನ್ಸಾರಿ ಹೇಳಿದರು. ಆದರೆ, ಮುಖ್ಯ ಚುನಾವಣೆ ಆಯುಕ್ತರು ರಾಷ್ಟ್ರಪತಿಯನ್ನು ಭೇಟಿಯಾಗಿ, ಸಂಸದರ ಪಟ್ಟಿಯನ್ನು ನೀಡಿಲ್ಲ. ಅದಕ್ಕೆ ಮೊದಲೇ ಮಿತ್ರಪಕ್ಷ ಗಳು ಮೋದಿ ಅವರನ್ನು ಸರ್ಕಾರದ ನೇತೃತ್ವ ವಹಿಸಲು ಆರಿಸಿಕೊಂಡಿವೆ. ಚುನಾವಣೆ ಆಯೋಗ ಪತ್ರವನ್ನು ಸಲ್ಲಿಸುವವರೆಗೆ ರಾಷ್ಟ್ರಪತಿ ಯಾರನ್ನೂ ಆಹ್ವಾನಿಸುವಂತಿಲ್ಲ,ʼ ಎಂದು ಹೇಳಿದರು.

ಮೋದಿ ದುಡುಕಿದರೇ?: ಇದೆಲ್ಲಕ್ಕಿಂತ ಮೊದಲೇ ನಾಯಕನ ಆಯ್ಕೆ ʻಅನುಚಿತʼ ಎಂದಿರುವ ಅನ್ಸಾರಿ, ಮೋದಿ ಅವರು ಆರ್‌ಎಸ್‌ಎಸ್‌ ಅಥವಾ ಬಿಜೆಪಿಯೊಳಗಿನ ಗುಂಪಿನಿಂದ ಸವಾಲನ್ನು ಎದುರಿಸಬಹುದು ಎಂಬ ಆತಂಕದಲ್ಲಿದ್ದಾರೆಯೇ ಎಂದು ಆಶ್ಚರ್ಯ ವ್ಯಕ್ತಪಡಿಸಿದರು.

ಬಿಜೆಪಿ ಮತ್ತು ಆರೆಸ್ಸೆಸ್ ನಡುವೆ ವೈಮನಸ್ಸನ್ನು ಇದು ತೋರಿಸುತ್ತದೆ. ಬಿಜೆಪಿ ಮುಖ್ಯಸ್ಥ ಜೆ.ಪಿ. ನಡ್ಡಾ ಚುನಾವಣೆ ಮಧ್ಯದಲ್ಲಿ (ಮೇ 18 ರಂದು) ಬಿಜೆಪಿ ಈಗ ʻಸ್ವಯಂ ಚಲಿಸುತ್ತದೆʼ. ಇನ್ನು ಮುಂದೆ ಆರ್‌ಎಸ್‌ಎಸ್ ಅಗತ್ಯವಿಲ್ಲ. ಅದು ಕೇವಲ ಸೈದ್ಧಾಂತಿಕ ಮುಖವಾಗಿರಲಿದೆ ಎಂದು ಹೇಳಿದ್ದರು.

Read More
Next Story