ಮೋದಿ 3.0: ಸಚಿವರ ಸಂಪೂರ್ಣ ಪಟ್ಟಿ
x
ರಾಷ್ಟ್ರಪತಿ ಭವನದಲ್ಲಿ ನಡೆದ ಸಚಿಪ ಸಂಪುಟದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಸಚಿವರೊಂದಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಉಪ ರಾಷ್ಟ್ರಪತಿ ಜಗದೀಪ್ ಧನಕರ್

ಮೋದಿ 3.0: ಸಚಿವರ ಸಂಪೂರ್ಣ ಪಟ್ಟಿ


ರಾಷ್ಟ್ರಪತಿ ಭವನದ ಮುಂಭಾಗದಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಭಾನುವಾರ (ಜೂನ್ 9) ದಾಖಲೆಯ ಮೂರನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.ನಿರಂತರತೆ, ಯುವಜನರು ಮತ್ತು ಅನುಭವಕ್ಕೆ ಮನ್ನಣೆ ನೀಡಿರುವುದಲ್ಲದೆ, ಎನ್ಡಿಎ ಪಾಲುದಾರರನ್ನು‌ ಒಳಗೊಂಡ 72 ಸದಸ್ಯರ ಸಚಿವ ಸಂಪುಟವನ್ನು ಅವರು ಮುನ್ನಡೆಸಲಿದ್ದಾರೆ.

ಮೋದಿ 2.0 ಸಂಪುಟದ ಸಚಿವರಾದ ರಾಜನಾಥ್ ಸಿಂಗ್, ಅಮಿತ್ ಶಾ, ನಿತಿನ್ ಗಡ್ಕರಿ, ನಿರ್ಮಲಾ ಸೀತಾರಾಮನ್ ಮತ್ತು ಎಸ್.ಜೈಶಂಕರ್ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರು ರಾಷ್ಟ್ರಪತಿ ಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಮೋದಿ ಅವರು ಹಿಂದಿನ ಸಚಿವ ಸಂಪುಟದಿಂದ 34 ಸಚಿವರನ್ನು ಉಳಿಸಿಕೊಂಡಿದ್ದಾರೆ.

ಸಂಜೆ 7.15ಕ್ಕೆ ಆರಂಭವಾಗಿ 155 ನಿಮಿಷ ನಡೆದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಸುಮಾರು 9,000 ಜನರು ಉಪಸ್ಥಿತರಿದ್ದರು ಎಂದು ಅಂದಾಜಿಸಲಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಧಾನಿ, 30 ಕ್ಯಾಬಿನೆಟ್ ಸಚಿವರು, ಐವರು ಸ್ವತಂತ್ರ ಉಸ್ತುವಾರಿ ಹೊಂದಿರುವ ರಾಜ್ಯ ಸಚಿವರು ಮತ್ತು 36 ರಾಜ್ಯ ಸಚಿವರಿಗೆ ಗೌಪ್ಯತೆ ಮತ್ತು ಅಧಿಕಾರದ ಪ್ರಮಾಣ ವಚನ ಬೋಧಿಸಿದರು. ನೂತನ ಸಚಿವರ ಖಾತೆಗಳು ಇನ್ನಷ್ಟೇ ಪ್ರಕಟವಾಗಬೇಕಿದೆ.

ಪ್ರಮಾಣವಚನ ಸ್ವೀಕರಿಸಿದ ಸಚಿವರ ಸಂಪೂರ್ಣ ಪಟ್ಟಿ ಇಲ್ಲಿದೆ:

ಪ್ರಧಾನ ಮಂತ್ರಿ: ನರೇಂದ್ರ ಮೋದಿ

ಕ್ಯಾಬಿನೆಟ್ ಮಂತ್ರಿಗಳು:

1.ರಾಜನಾಥ್ ಸಿಂಗ್

2. ಅಮಿತ್ ಶಾ

3. ನಿತಿನ್ ಗಡ್ಕರಿ

4. ಜೆಪಿ ನಡ್ಡಾ

5. ಶಿವರಾಜ್ ಸಿಂಗ್ ಚೌಹಾಣ್

6. ನಿರ್ಮಲಾ ಸೀತಾರಾಮನ್

7. ಎಸ್. ಜೈಶಂಕರ್

8. ಎಂ.ಎಲ್. ಖಟ್ಟರ್

9. ಎಚ್. ಡಿ. ಕುಮಾರಸ್ವಾಮಿ

10. ಪಿಯೂಷ್ ಗೋಯಲ್

11. ಧರ್ಮೇಂದ್ರ ಪ್ರಧಾನ್

12. ಜಿತನ್ ರಾಮ್ ಮಾಂಝಿ

13.ರಾಜೀವ್ ರಂಜನ್ ಸಿಂಗ್

14. ಸರ್ಬಾನಂದ ಸೋನೋವಾಲ್

15. ವೀರೇಂದ್ರ ಕುಮಾರ್

16.ಕೆ. ರಾಮ್ ಮೋಹನ್ ನಾಯ್ಡು

17. ಪ್ರಲ್ಹಾದ್ ಜೋಶಿ

18. ಜುಯಲ್ ಒರಮ್

19. ಗಿರಿರಾಜ್ ಸಿಂಗ್

20. ಅಶ್ವಿನಿ ವೈಷ್ಣವ್

21. ಜ್ಯೋತಿರಾದಿತ್ಯ ಸಿಂಧಿಯಾ

22. ಭೂಪೇಂದರ್ ಯಾದವ್

23. ಗಜೇಂದ್ರ ಸಿಂಗ್ ಶೇಖಾವತ್

24. ಅನ್ನಪೂರ್ಣ ದೇವಿ

25. ಕಿರೆನ್ ರಿಜಿಜು

26. ಹರ್ದೀಪ್ ಸಿಂಗ್ ಪುರಿ

27. ಮನ್ಸುಖ್ ಮಾಂಡವಿಯ

28. ಜಿ ಕಿಶನ್ ರೆಡ್ಡಿ

29.ಚಿರಾಗ್ ಪಾಸ್ವಾನ್

30. ಸಿ.ಆರ್. ಪಾಟೀಲ್

ರಾಜ್ಯ ಸಚಿವರು (ಸ್ವತಂತ್ರ ಉಸ್ತುವಾರಿ):

1. ರಾವ್ ಇಂದರ್‌ಜಿತ್ ಸಿಂಗ್

2. ಜಿತೇಂದ್ರ ಸಿಂಗ್

3. ಅರ್ಜುನ್ ರಾಮ್ ಮೇಘವಾಲ್

4. ಪ್ರತಾಪ್‌ ರಾವ್ ಜಾಧವ್

5. ಜಯಂತ್ ಚೌಧರಿ

ರಾಜ್ಯ ಮಂತ್ರಿಗಳು(ಎಂಒಎಸ್):

1. ಜಿತಿನ್ ಪ್ರಸಾದ

2. ಶ್ರೀಪಾದ್ ನಾಯ್ಕ್

3. ಪಂಕಜ್ ಚೌಧರಿ

4. ಕ್ರಿಶನ್ ಪಾಲ್ ಗುರ್ಜರ್

5. ರಾಮದಾಸ್ ಅಠವಳೆ

6. ರಾಮ್ ನಾಥ್ ಠಾಕೂರ್

7. ನಿತ್ಯಾನಂದ ರೈ

8. ಅನುಪ್ರಿಯಾ ಪಟೇಲ್

9.ವಿ ಸೋಮಣ್ಣ

10. ಪೆಮ್ಮಸಾನಿ ಚಂದ್ರಶೇಖರ್

11. ಎಸ್.ಪಿ. ಸಿಂಗ್ ಬಘೇಲ್

12. ಶೋಭಾ ಕರಂದ್ಲಾಜೆ

13.ಕೀರ್ತಿ ವರ್ಧನ್ ಸಿಂಗ್

14. ಬಿ.ಎಲ್. ವರ್ಮಾ

15. ಶಂತನು ಠಾಕೂರ್

16. ಸುರೇಶ್ ಗೋಪಿ

17. ಎಲ್. ಮುರುಗನ್

18. ಅಜಯ್ ತಮ್ತಾ

19. ಬಂಡಿ ಸಂಜಯ್ ಕುಮಾರ್

20. ಕಮಲೇಶ್ ಪಾಸ್ವಾನ್

21. ಭಗೀರಥ ಚೌಧರಿ

22. ಸತೀಶ್ ದುಬೆ

23. ಸಂಜಯ್ ಸೇಠ್

24. ರವನೀತ್ ಸಿಂಗ್ ಬಿಟ್ಟು

25. ದುರ್ಗಾ ದಾಸ್ ಉಕೆ

26. ರಕ್ಷಾ ಖಡ್ಸೆ

27. ಸುಕಾಂತ ಮಜುಂದಾರ್

28. ಸಾವಿತ್ರಿ ಠಾಕೂರ್

29. ತೋಖಾನ್ ಸಾಹು

30. ರಾಜಭೂಷಣ ಚೌಧರಿ

31. ಭೂಪತಿ ರಾಜು ಶ್ರೀನಿವಾಸ ವರ್ಮ

32. ಹರ್ಷ್ ಮಲ್ಹೋತ್ರಾ

33. ನಿಮುಬೆನ್ ಭಾಮಾರಿಯಾ

34. ಮುರಳೀಧರ್ ಮೊಹೋಲ್

35. ಜಾರ್ಜ್ ಕುರಿಯನ್

36. ಪಬಿತ್ರಾ ಮಾರ್ಗರಿಟಾ

Read More
Next Story