ಗೋವು  ಕಳ್ಳಸಾಗಣೆದಾರನೆಂದು ಶಂಕೆ: ವಿದ್ಯಾರ್ಥಿ ಬೆನ್ನಟ್ಟಿ ಹತ್ಯೆ
x

ಗೋವು ಕಳ್ಳಸಾಗಣೆದಾರನೆಂದು ಶಂಕೆ: ವಿದ್ಯಾರ್ಥಿ ಬೆನ್ನಟ್ಟಿ ಹತ್ಯೆ

ವಿದ್ಯಾರ್ಥಿಯ ಸ್ನೇಹಿತೆ ಕಾರ್‌ ನಿಲ್ಲಿಸದ ಕಾರಣ, ಆರೋಪಿಗಳು 25 ಕಿಮೀ ಬೆನ್ನಟ್ಟಿ ಗುಂಡು ಹಾರಿಸಿದರು. ಗುಂಡು ಪ್ರಯಾಣಿಕರ ಸೀಟಿನಲ್ಲಿದ್ದ ಆರ್ಯನ್ ಅವರ ಕುತ್ತಿಗೆಗೆ ತಗುಲಿ, ಗಂಭೀರವಾಗಿ ಗಾಯಗೊಂಡರು.


ಹರ್ಯಾಣದ ಫರೀದಾಬಾದ್‌ನಲ್ಲಿ 19 ವರ್ಷ ವಯಸ್ಸಿನ 12 ನೇ ತರಗತಿ ವಿದ್ಯಾರ್ಥಿಯನ್ನು ದನ ಕಳ್ಳಸಾಗಣೆದಾರ ಎಂದು ತಪ್ಪಾಗಿ ಭಾವಿಸಿ, ಆತನ ಕಾರನ್ನು 25 ಕಿಲೋಮೀಟರ್ ಹಿಂಬಾಲಿಸಿ ಹತ್ಯೆ ಮಾಡಲಾಗಿದೆ.

ಘಟನೆ ಆಗಸ್ಟ್ 23 ರಂದು ನಡೆದಿದ್ದು, ಅನಿಲ್ ಕೌಶಿಕ್, ವರುಣ್, ಕೃಷ್ಣ, ಆದೇಶ್ ಮತ್ತು ಸೌರಭ್ ಎಂಬುವರನ್ನು ಬಂಧಿಸಲಾಗಿದೆ.

ಹತ್ಯೆಯಾದ ಆರ್ಯನ್ ಮಿಶ್ರಾ, ಸ್ನೇಹಿತೆಯರಾದ ಶಾಂಕಿ ಮತ್ತು ಹರ್ಷಿತ್ ಜೊತೆಗೆ ನೂಡಲ್ಸ್ ಸೇವಿಸಲು ಹೋಗಿದ್ದರು. ಅವರನ್ನು ಜಾನುವಾರು ಕಳ್ಳಸಾಗಣೆದಾರರು ಎಂದುಕೊಂಡು, ದೆಹಲಿ-ಆಗ್ರಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಹರಿಯಾಣದ ಗಧ್‌ಪುರಿ ಬಳಿ ಸುಮಾರು 25 ಕಿಮೀ ಅವರ ಕಾರನ್ನು ಆರೋಪಿಗಳು ಹಿಂಬಾಲಿಸಿದ್ದಾರೆ.

ರೆನಾಲ್ಟ್ ಡಸ್ಟರ್ ಮತ್ತು ಟೊಯೊಟಾ ಫಾರ್ಚೂನರ್ ಕಾರುಗಳಲ್ಲಿ ಕೆಲವರು ದನಗಳನ್ನು ಸಾಗಣೆ ಮಾಡುತ್ತಿದ್ದಾರೆ ಎಂದು ವದಂತಿ ಹರ ಡಿತ್ತು. ಪಟೇಲ್ ಚೌಕದಲ್ಲಿ ಡಸ್ಟರ್ ಕಾರ್‌ ನೋಡಿದ ಆರೋಪಿಗಳು, ನಿಲ್ಲಿಸುವಂತೆ ಚಾಲಕ ಹರ್ಷಿತ್ ಗೆ ಹೇಳಿದರು. ಶಾಂಕಿ ಕೆಲವರೊಟ್ಟಿಗೆ ಮನಸ್ತಾಪ ಕಟ್ಟಿಗೊಂಡಿದ್ದು, ತನ್ನನ್ನು ಕೊಲ್ಲಲು ಗೂಂಡಾಗಳನ್ನು ಕಳುಹಿಸಿದ್ದಾರೆ ಎಂದು ಭಾವಿಸಿ ಕಾರ್‌ ನಿಲ್ಲಿಸಲಿಲ್ಲ. ಹೀಗಾಗಿ, ಆರೋಪಿ ಗಳು ಕಾರಿನತ್ತ ಗುಂಡು ಹಾರಿಸಿದ್ದು, ಪ್ರಯಾಣಿಕರ ಸೀಟಿನಲ್ಲಿದ್ದ ಆರ್ಯನ್ ಕುತ್ತಿಗೆಗೆ ತಗುಲಿತು. ಕಾರು ನಿಲ್ಲಿಸಿದಾಗ, ಆರೋಪಿಗಳು ಮತ್ತೆ ಗುಂಡು ಹಾರಿಸಿದರು.

ಆದರೆ, ಕಾರಿನಲ್ಲಿ ಇಬ್ಬರು ಮಹಿಳೆಯರನ್ನು ನೋಡಿದ ಆರೋಪಿಗಳು ತಮ್ಮಿಂದ ತಪ್ಪಾಗಿದೆ ಎಂದು ಗೊತ್ತಾಗಿ ಸ್ಥಳದಿಂದ ಪರಾರಿಯಾದರು. ಆರ್ಯನ್ ಅವರನ್ನು ಆಸ್ಪತ್ರೆಗೆ ಸಾಗಿಸಿದ್ದು, ಒಂದು ದಿನದ ನಂತರ ನಿಧನರಾದರು. ಘಟನೆಯಲ್ಲಿ ಬಳಸಿದ ಆಯುಧಕ್ಕೆ ಪರವಾನಗಿ ಇರಲಿಲ್ಲ ಎಂದು ಮೂಲಗಳು ತಿಳಿಸಿವೆ.

ಆರೋಪಿಗಳು ಪೊಲೀಸ್ ವಶದಲ್ಲಿದ್ದು, ತನಿಖೆ ನಡೆಯುತ್ತಿದೆ.

Read More
Next Story