![Rape on Minor girl | ಮಧ್ಯಪ್ರದೇಶದಲ್ಲಿ ಧಾರುಣ ಕೃತ್ಯ ; ಮೂಕ ಬಾಲಕಿ ಮೇಲೆ ಅತ್ಯಾಚಾರ, ಆಸ್ಪತ್ರೆಯಲ್ಲಿ ಸಾವು Rape on Minor girl | ಮಧ್ಯಪ್ರದೇಶದಲ್ಲಿ ಧಾರುಣ ಕೃತ್ಯ ; ಮೂಕ ಬಾಲಕಿ ಮೇಲೆ ಅತ್ಯಾಚಾರ, ಆಸ್ಪತ್ರೆಯಲ್ಲಿ ಸಾವು](https://karnataka.thefederal.com/h-upload/2025/02/09/511700-img-20250209-wa0219.webp)
Rape on Minor girl | ಮಧ್ಯಪ್ರದೇಶದಲ್ಲಿ ಧಾರುಣ ಕೃತ್ಯ ; ಮೂಕ ಬಾಲಕಿ ಮೇಲೆ ಅತ್ಯಾಚಾರ, ಆಸ್ಪತ್ರೆಯಲ್ಲಿ ಸಾವು
ಅತ್ಯಾಚಾರ ಆರೋಪಿಗಳ ಪತ್ತೆಗಾಗಿ 20 ಮಂದಿ ಪೋಲೀಸರ ವಿಶೇಷ ತನಿಖಾ ತಂಡ ರಚಿಸಲಾಗಿದೆ. ಜೊತೆಗೆ ಸೈಬರ್ ತಜ್ಞರನ್ನು ನೆರವಿಗೆ ಪಡೆಯಲಾಗಿದೆ.
ಅಪರಿಚಿತ ವ್ಯಕ್ತಿಯಿಂದ ಅತ್ಯಾಚಾರಕ್ಕೆ ಒಳಗಾಗಿ ಸಾವು ಬದುಕಿನ ಹೋರಾಟ ನಡೆಸುತ್ತಿದ್ದ ವಾಕ್ ಮತ್ತು ಶ್ರವಣ ದೋಷವುಳ್ಳ ಅಪ್ರಾಪ್ತ ಬಾಲಕಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದ ರಾಜ್‌ಗಢ ಜಿಲ್ಲೆಯಲ್ಲಿ ನಡೆದಿದೆ.
ಸರ್ಕಾರಿ ಅತಿಥಿ ಗೃಹವೊಂದರ ಹಿಂಭಾಗದ ಗುಡಿಸಲಿನಲ್ಲಿ ವಾಸವಾಗಿದ್ದ 11 ವರ್ಷದ ಬಾಲಕಿ ಫೆ. 1 ರಂದು ದಿಢೀರ್ ನಾಪತ್ತೆಯಾಗಿದ್ದಳು. ಮರುದಿನ ಅರಣ್ಯದಲ್ಲಿ ತೀವ್ರ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ರಕ್ತಸ್ರಾವದಿಂದ ನರಳುತ್ತಿದ್ದ ಅಪ್ರಾಪ್ತ ಬಾಲಕಿಯನ್ನು ಅಂಗನವಾಡಿ ಕಾರ್ಯಕರ್ತೆ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಪೊಲೀಸರು ನರಸಿಂಗ್‌ಗಢದ ಸಿವಿಲ್ ಆಸ್ಪತ್ರೆಗೆ ಬಾಲಕಿಯನ್ನು ದಾಖಲಿಸಿ, ಫೆಬ್ರವರಿ 2 ರಂದು ಹೆಚ್ಚಿನ ಚಿಕಿತ್ಸೆಗಾಗಿ ಭೋಪಾಲ್‌ನ ಹಮಿಡಿಯಾ ಆಸ್ಪತ್ರೆಗೆ ದಾಖಲಿಸಿದರು. ತೀವ್ರ ರಕ್ತಸ್ರಾವದಿಂದ ಬಲಳುತ್ತಿದ್ದ ಬಾಲಕಿಗೆ ಎರಡು ಶಸ್ತ್ರಚಿಕಿತ್ಸೆಗಳನ್ನು ಮಾಡಲಾಯಿತು. ವೆಂಟಿಲೇಟರ್ ವ್ಯವಸ್ಥೆ ಮಾಡಿದ್ದರೂ ಆಕೆಯ ಸ್ಥಿತಿ ಗಂಭೀರವಾಗಿತ್ತು. ಕಳೆದ ಶುಕ್ರವಾರ ರಾತ್ರಿ 10 ಗಂಟೆಗೆ ಬಾಲಕಿ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದ ಬಾಲಕಿ
ಅತ್ಯಾಚಾರಿಯನ್ನು ಗುರುತಿಸಲು ನೇರವಾಗುವಂತೆ ಪೊಲೀಸರು ಸಂಜ್ಞೆ ಭಾಷಾ ತಜ್ಞರನ್ನು ಕರೆಸಿ ಬಾಲಕಿಯೊಂದಿಗೆ ಸಂವಹನ ನಡೆಸುವ ಪ್ರಯತ್ನ ನಡೆಸಿದ್ದರು. ಆದರೆ ಗಂಭೀರ ಆಂತರಿಕ ಗಾಯಗಳಿಂದಾಗಿ ಬಾಲಕಿ ಪ್ರಜ್ಞಾಹೀನಳಾಗಿದ್ದಳು.
ಫೆ. 3ರಂದು ಘಟನೆ ಗಮನಕ್ಕೆ ಬರುವವರಿಗೂ ಬಾಲಕಿಯ ಪೋಷಕರು ಯಾವುದೇ ದೂರು ದಾಖಲಿಸಿರಲಿಲ್ಲ.
ವಿಶೇಷ ತನಿಖಾ ತಂಡ ರಚನೆ
ಅತ್ಯಾಚಾರ ಆರೋಪಿಗಳ ಪತ್ತೆಗಾಗಿ 20 ಮಂದಿ ಪೋಲೀಸರ ವಿಶೇಷ ತನಿಖಾ ತಂಡ ರಚಿಸಲಾಗಿದೆ. ಜೊತೆಗೆ ಸೈಬರ್ ತಜ್ಞರನ್ನು ನೆರವಿಗೆ ಪಡೆಯಲಾಗಿದೆ.
ವಾಕ್ ಹಾಗೂ ಶ್ರವಣ ದೋಷವುಳ್ಳ ಬಾಲಕಿಯ ಮೇಲೆ ಅತ್ಯಾಚಾರದಿಂದ ಆಕೆಯ ಸ್ಥಿತಿ ತೀವ್ರ ಗಂಭೀರ ಸ್ಥಿತಿಗೆ ತಲುಪಿತ್ತು. ಆಕೆಯನ್ನು ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಪಟ್ಟರೂ ಸಾಧ್ಯವಾಗಿಲ್ಲ. ದೈಹಿಕವಾಗಿ ಬಾಲಕಿ ಬೆಳವಣಿಗೆ ಆಗಿರಲಿಲ್ಲ. ಹಾಗಾಗಿ ಆಕೆ ಬದುಕುಳಿಯುವುದು ಕಷ್ಟವಾಯಿತು ಎಂದು ರಾಜ್ ಗಢ ಎಸ್ ಪಿ ಆದಿಯಾ ಮಿಶ್ರಾ ತಿಳಿಸಿದ್ದಾರೆ.