Stock Market: ಮಾರುಕಟ್ಟೆಗಳು ಆರಂಭಿಕ ವಹಿವಾಟಿನಲ್ಲಿ ಕುಸಿತ; ಹಿಂದಿನ ಏರಿಕೆಯ ನಂತರ ಲಾಭ ಗಳಿಕೆ
x

Stock Market: ಮಾರುಕಟ್ಟೆಗಳು ಆರಂಭಿಕ ವಹಿವಾಟಿನಲ್ಲಿ ಕುಸಿತ; ಹಿಂದಿನ ಏರಿಕೆಯ ನಂತರ ಲಾಭ ಗಳಿಕೆ

ಇನ್ಫೋಸಿಸ್, ಎಟರ್ನಲ್, ಪವರ್ ಗ್ರಿಡ್, ಕೋಟಕ್ ಮಹೀಂದ್ರ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಎಚ್‌ಸಿಎಲ್ ಟೆಕ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಮತ್ತು ನೆಸ್ಲೆ ಷೇರುಗಳು ಗಣನೀಯವಾಗಿ ಕುಸಿದವು.


ಶೇರು ಮಾರುಕಟ್ಟೆಯಲ್ಲಿ ಸೋಮವಾರ ತೀವ್ರ ಏರಿಕೆ ಉಂಟಾಗಿರುವ ಹಿನ್ನೆಲೆಯಲ್ಲಿ ಹೂಡಿಕೆದಾರರು ಲಾಭ ಗಳಿಕೆಗೆ ಮುಂದಾಗಿದ್ದರು. ಆದರೆ, ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಭಾರೀ ಕುಸಿದವು.

ಆರಂಭಿಕ ವಹಿವಾಟಿನಲ್ಲಿ 497.5 ಅಂಕಗಳ ಕುಸಿತದೊಂದಿಗೆ 81,932.40 ತಲುಪಿದ ಸೆನ್ಸೆಕ್ಸ್ ನಂತರ ಮತ್ತಷ್ಟು ಕುಸಿದು 788.62 ಅಂಕಗಳ ನಷ್ಟದೊಂದಿಗೆ 81,641.28 ರಲ್ಲಿ ವಹಿವಾಟು ನಡೆಸಿತು. ಅದೇ ರೀತಿ, ನಿಫ್ಟಿ ಕೂಡ 117.2 ಅಂಕಗಳ ಕುಸಿತದೊಂದಿಗೆ 24,807.50 ಕ್ಕೆ ಇಳಿದ ನಂತರ 209.90 ಅಂಕಗಳ ನಷ್ಟದೊಂದಿಗೆ 24,714.80 ಕ್ಕೆ ತಲುಪಿತು.

ಕುಸಿದ ಮತ್ತು ಏರಿದ ಷೇರುಗಳು:

ಸೆನ್ಸೆಕ್ಸ್‌ನಲ್ಲಿ ಇನ್ಫೋಸಿಸ್, ಎಟರ್ನಲ್, ಪವರ್ ಗ್ರಿಡ್, ಕೋಟಕ್ ಮಹೀಂದ್ರ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಎಚ್‌ಸಿಎಲ್ ಟೆಕ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಮತ್ತು ನೆಸ್ಲೆ ಷೇರುಗಳು ಗಣನೀಯವಾಗಿ ಕುಸಿದವು. ಇದಕ್ಕೆ ವ್ಯತಿರಿಕ್ತವಾಗಿ, ಸನ್ ಫಾರ್ಮಾ, ಇಂಡಸ್‌ಇಂಡ್ ಬ್ಯಾಂಕ್, ಬಜಾಜ್ ಫೈನಾನ್ಸ್ ಮತ್ತು ಟಾಟಾ ಸ್ಟೀಲ್ ಷೇರುಗಳು ಲಾಭ ಗಳಿಸಿದವು.

ಜಾಗತಿಕ ಮಾರುಕಟ್ಟೆಗಳ ಪ್ರಭಾವ

ಏಷ್ಯಾದ ಮಾರುಕಟ್ಟೆಗಳಲ್ಲಿ ದಕ್ಷಿಣ ಕೊರಿಯಾದ ಕೊಸ್ಪಿ, ಜಪಾನ್‌ನ ನಿಕ್ಕಿ 225 ಮತ್ತು ಶಾಂಘೈನ ಎಸ್‌ಎಸ್‌ಇ ಕಾಂಪೋಸಿಟ್ ಧನಾತ್ಮಕವಾಗಿ ವಹಿವಾಟು ನಡೆಸುತ್ತಿದ್ದರೂ, ಹಾಂಗ್ ಕಾಂಗ್‌ನ ಹ್ಯಾಂಗ್ ಸೆಂಗ್ ಕುಸಿತ ಕಂಡಿತು. ಸೋಮವಾರ ಯುಎಸ್ ಮಾರುಕಟ್ಟೆಗಳು ಭಾರಿ ಏರಿಕೆ ಕಂಡಿದ್ದವು.

ಜಾಗತಿಕ ತೈಲ ಮಾನದಂಡ ಬ್ರೆಂಟ್ ಕಚ್ಚಾ ತೈಲವು 0.23% ರಷ್ಟು ಕುಸಿದು ಬ್ಯಾರೆಲ್‌ಗೆ 64.81 ಯುಎಸ್ ಡಾಲರ್‌ ತಲುಪಿತು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಸೋಮವಾರ 1,246.48 ಕೋಟಿ ರೂಪಾಯಿಗಳ ಷೇರುಗಳನ್ನು ಖರೀದಿಸಿದ್ದಾರೆ.

Read More
Next Story