ಮಣಿಪುರ ಹಿಂಸಾಚಾರ: ಡ್ರೋನ್ ಬಾಂಬ್‌, ಆರ್‌ಪಿಜಿ ಬಳಕೆ; 2 ಸಾವು
x

ಮಣಿಪುರ ಹಿಂಸಾಚಾರ: ಡ್ರೋನ್ ಬಾಂಬ್‌, ಆರ್‌ಪಿಜಿ ಬಳಕೆ; 2 ಸಾವು

ಯುದ್ಧಗಳಲ್ಲಿ ಬಳಕೆಯಾಗುವ ಡ್ರೋನ್ ಬಾಂಬ್‌ಗಳನ್ನು ಭದ್ರತಾ ಪಡೆಗಳು ಮತ್ತು ನಾಗರಿಕರ ವಿರುದ್ಧ ಬಳಸಿರುವುದು ಸಂಘರ್ಷದ ತೀವ್ರತೆಯನ್ನು ಸೂಚಿಸುತ್ತದೆ.


ಮಣಿಪುರದ ಇಂಫಾಲ್ ಪಶ್ಚಿಮ ಜಿಲ್ಲೆಯಲ್ಲಿ ನಡೆದ ದಾಳಿಯಲ್ಲಿ ಶಂಕಿತ ಕುಕಿ ಉಗ್ರಗಾಮಿಗಳು ರಾಕೆಟ್ ಚಾಲಿತ ಗ್ರೆನೇಡ್‌(ಆರ್‌ಪಿಜಿ) ಮತ್ತು ಡ್ರೋನ್ ಬಾಂಬ್‌ಗಳನ್ನು ಇದೇ ಮೊದಲ ಬಾರಿಗೆ ಬಳಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜಧಾನಿ ಇಂಫಾಲ್‌ನಿಂದ 18 ಕಿಮೀ ದೂರದಲ್ಲಿರುವ ಕೌತ್ರುಕ್ ಮೇಲೆ ಭಾನುವಾರ (ಸೆಪ್ಟೆಂಬರ್ 1) ತಡರಾತ್ರಿ ನಡೆದ ದಾಳಿಯಲ್ಲಿ ಮಹಿಳೆ ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಒಂಬತ್ತು ಮಂದಿ ಗಾಯಗೊಂಡಿದ್ದಾರೆ. ಐದು ಮನೆಗಳನ್ನು ಸುಟ್ಟು ಹಾಕಲಾಗಿದೆ. ಕೌತ್ರುಕ್ ಮತ್ತು ನೆರೆಯ ಕಡಂಗ್‌ಬಂಡ್‌ ಗ್ರಾಮಗಳ ಮೇಲೆ ಗುಂಡಿನ ದಾಳಿ ನಡೆಸಿದ ಉಗ್ರರನ್ನು ಭದ್ರತಾ ಪಡೆಗಳು ಓಡಿಸಿವೆ ಎಂದು ವರದಿಯಾಗಿದೆ.

ಅಭೂತಪೂರ್ವ ದಾಳಿ: ಮಣಿಪುರ ಪೊಲೀಸರು ಆರ್‌ಪಿಜಿ-ಡ್ರೋನ್ ದಾಳಿಯನ್ನು ʻಹಿಂದೆಂದೂ ನಡೆಯದ ಘಟನೆʼ ಎಂದು ಕರೆದಿದ್ದಾರೆ.

ʻಯುದ್ಧಗಳಲ್ಲಿ ಬಳಕೆಯಾಗುವ ಡ್ರೋನ್ ಬಾಂಬ್‌ಗಳನ್ನು ಭದ್ರತಾ ಪಡೆಗಳು ಮತ್ತು ನಾಗರಿಕರ ವಿರುದ್ಧ ಬಳಸಿರುವುದು ಸಂಘರ್ಷ ಹೆಚ್ಚ ಳವನ್ನು ಸೂಚಿಸುತ್ತದೆ. ತರಬೇತಿ ಪಡೆದ ವೃತ್ತಿಪರರ ಒಳಗೊಳ್ಳುವಿಕೆಯನ್ನು ತಳ್ಳಿಹಾಕಲು ಆಗುವುದಿಲ್ಲ. ಅಧಿಕಾರಿಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಮತ್ತು ಸ್ಪಂದಿಸಲು ಸಿದ್ಧವಾಗಿದ್ದಾರೆ, ʼ ಎಂದು ಪೊಲೀಸರು ಎಕ್ಸ್‌ನಲ್ಲಿ ಹೇಳಿದ್ದಾರೆ.

ಜನರ ಪಲಾಯನ: ಸಾರ್ವಜನಿಕರು ಶಾಂತಿಯನ್ನು ಕಾಯ್ದುಕೊಳ್ಳುವಂತೆ ಮತ್ತು ಯಾವುದೇ ಸಮಾಜವಿರೋಧಿಗಳನ್ನು ತೊಡೆಯಲು ಕಾರ್ಯಾಚರಣೆ ನಡೆಯುತ್ತಿದೆ ಎಂದು ಹೇಳಿದರು. ಎರಡು ಗ್ರಾಮಗಳ ಮೇಲೆ ಭಾನುವಾರ ಮಧ್ಯಾಹ್ನ 2.30ಕ್ಕೆ ಪ್ರಾರಂಭವಾದ ಬಂದೂಕು ಮತ್ತು ಬಾಂಬ್ ದಾಳಿ ನಂತರ ಮಹಿಳೆಯರು, ಮಕ್ಕಳು ಮತ್ತು ಹಿರಿಯ ನಾಗರಿಕರು ಮನೆಗಳನ್ನು ತೊರೆದಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

2023ರ ಮೇನಲ್ಲಿ ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದ ನಂತರ, ಕೌತ್ರುಕ್ ಹಲವು ದಾಳಿಗಳಿಗೆ ಸಾಕ್ಷಿಯಾಗಿದೆ.

Read More
Next Story