
ಮಂಗಳಸೂತ್ರ, ಜನಿವಾರಕ್ಕೆ ಅನುಮತಿ; ರೈಲ್ವೆ ನೇಮಕ ಪರೀಕ್ಷಾ ನಿಯಮಗಳ ಪರಿಷ್ಕರಣೆ
ಪರಿಷ್ಕೃತ ನಿಯಮದ ಪ್ರಕಾರ, ಮೊಬೈಲ್ ಫೋನ್‌ಗಳು, ಪೇಜರ್, ಗಡಿಯಾರಗಳು, ಇಯರ್‌ಫೋನ್‌ಗಳು, ಬ್ಲೂಟೂತ್ ಸಾಧನಗಳು, ಮೈಕ್ರೊಫೋನ್‌ಗಳು, ಕ್ಯಾಲ್ಕುಲೇಟರ್‌ಗಳು, ಪುಸ್ತಕಗಳು, ಪೆನ್‌ಗಳು, ಕ್ಯಾಮೆರಾ, ಪೆನ್ಸಿಲ್, ಇರೇಸರ್, ಪೌಚ್‌ಗಳು, ಸ್ಕ್ಯಾನಿಂಗ್ ಸಾಧನಗಳು ಮತ್ತು ಇತರ ವಸ್ತುಗಳನ್ನು ಪರೀಕ್ಷಾ ಕೇಂದ್ರದ ಒಳಗೆ ತರುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ.
2025ರಲ್ಲಿ ನಡೆಸುವ ರೈಲ್ವೇ ನೇಮಕ ಪರೀಕ್ಷಾ ಕೇಂದ್ರಗಳ ಪ್ರವೇಶಕ್ಕೆ ಸಂಬಂಧಿಸಿದ ನಿಯಮಗಳನ್ನು ರೈಲ್ವೆ ನೇಮಕಾತಿ ಮಂಡಳಿ (ಆರ್‌ಆರ್‌ಬಿ) ಪರಿಷ್ಕರಿಸಿವೆ. ಮಂಗಳಸೂತ್ರಕ್ಕೆ ಅನುಮತಿ ಇಲ್ಲ ಎಂಬ ಈ ಹಿಂದಿನ ಆದೇಶಕ್ಕೆ ವಿರೋಧ ವ್ಯಕ್ತಗೊಂಡ ಬಳಿಕ ಹೊಸ ಸೂಚನೆ ಹೊರಡಿಸಿದೆ. ಏಪ್ರಿಲ್ 28ರಂದು ಬಿಡುಗಡೆ ಮಾಡಿರುವ ಮತ್ತೊಂದು ಸುತ್ತೋಲೆಯಲ್ಲಿ ಜನಿವಾರ, ಮಂಗಳಸೂತ್ರದಂಥ ಧಾರ್ಮಿಕ ಭಾವನೆಗಳಿಗೆ ಪೂರಕವಾಗಿರುವ ವಸ್ತುಗಳಿಗೆ ಅನುಮತಿ ನೀಡಿದೆ.
ಪರಿಷ್ಕೃತ ನಿಯಮದ ಪ್ರಕಾರ, ಮೊಬೈಲ್ ಫೋನ್‌ಗಳು, ಪೇಜರ್, ಗಡಿಯಾರಗಳು, ಇಯರ್‌ಫೋನ್‌ಗಳು, ಬ್ಲೂಟೂತ್ ಸಾಧನಗಳು, ಮೈಕ್ರೊಫೋನ್‌ಗಳು, ಕ್ಯಾಲ್ಕುಲೇಟರ್‌ಗಳು, ಪುಸ್ತಕಗಳು, ಪೆನ್‌ಗಳು, ಕ್ಯಾಮೆರಾ, ಪೆನ್ಸಿಲ್, ಇರೇಸರ್, ಪೌಚ್‌ಗಳು, ಸ್ಕ್ಯಾನಿಂಗ್ ಸಾಧನಗಳು ಮತ್ತು ಇತರ ವಸ್ತುಗಳನ್ನು ಪರೀಕ್ಷಾ ಕೇಂದ್ರದ ಒಳಗೆ ತರುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ. ಅಭ್ಯರ್ಥಿಗಳಿಗೆ ಪರೀಕ್ಷಾ ಕೇಂದ್ರದಲ್ಲಿ ಪೆನ್ ಅಗತ್ಯವಿದ್ದರೆ ಅದನ್ನು ಸ್ಥಳದಲ್ಲೇ ಒದಗಿಸಲಾಗುತ್ತದೆ. ಇ-ಕಾಲ್ ಲೆಟರ್ ಮಾತ್ರವೇ ಪರೀಕ್ಷಾ ಕೇಂದ್ರದ ಒಳಗೆ ತರಲು ಅವಕಾಶವಿದೆ. ಆದರೆ, ಬಯೋಮೆಟ್ರಿಕ್ ವ್ಯವಸ್ಥೆಗೆ ಅಡಚಣೆಯಾಗದಂತೆ ಅಭ್ಯರ್ಥಿಗಳು ತಮ್ಮ ಕೈಗಳಿಗೆ ಮೆಹೆಂದಿ ಹಚ್ಚಿಕೊಳ್ಳಬಾರದು ಎಂದು ಸೂಚಿಸಲಾಗಿದೆ.
ಧಾರ್ಮಿಕ ಸಂಕೇತಗಳಿಗೆ ಅನುಮತಿ
ಪರೀಕ್ಷಾ ಸಮಯದಲ್ಲಿ ಮಂಗಲಸೂತ್ರ, ಕಿವಿಯೋಲೆಗಳು, ಲೋಹದ ಆಭರಣಗಳು, ಧಾರ್ಮಿಕ ಚಿಹ್ನೆಗಳು, ಬಳೆಗಳು ಮತ್ತು ಇತರ ಆಭರಣಗಳನ್ನು ಧರಿಸುವುದಕ್ಕೆ ಅನುಮತಿ ನೀಡಲಾಗಿದ್ದರೂ ಪರೀಕ್ಷಾ ಕೇಂದ್ರದಲ್ಲಿನ ಸಿಬ್ಬಂದಿ ಹೆಚ್ಚುವರಿ ಪರಿಶೀಲನೆ ನಡೆಸಲಿದ್ದಾರೆ ಎಂದು ಹೊಸ ಸೂಚನೆಯಲ್ಲಿ ತಿಳಿಸಲಾಗಿದೆ.