ಪುಣೆಯಲ್ಲಿ ಕೊರಿಯರ್ ಡೆಲಿವರಿ ಸೋಗಿನಲ್ಲಿ ಯುವತಿ ಮೇಲೆ ಅತ್ಯಾಚಾರ
x

ಸಾಂದರ್ಭಿಕ ಚಿತ್ರ

ಪುಣೆಯಲ್ಲಿ ಕೊರಿಯರ್ ಡೆಲಿವರಿ ಸೋಗಿನಲ್ಲಿ ಯುವತಿ ಮೇಲೆ ಅತ್ಯಾಚಾರ

ವ್ಯಕ್ತಿ ಕೊರಿಯರ್ ವಿತರಣಾ ಏಜೆಂಟ್ ಎಂದು ನಟಿಸಿ ಆಕೆಯ ಮನೆಗೆ ಬಂದಿದ್ದನು. ಸಹಿ ಮಾಡಲು ಪೆನ್ನು ಕೇಳುವ ನೆಪದಲ್ಲಿ ಮಹಿಳೆ ಒಳಕ್ಕೆ ಹೋದಾಗ ಆತ ಒಳನುಗ್ಗಿ ಬಾಗಿಲು ಹಾಕಿಕೊಂಡಿಕೊಂಡ ಅಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.


ಕೊರಿಯರ್ ಡೆಲಿವರಿ ಬಾಯ್ ಎಂದು ಹೇಳಿಕೊಂಡು ಅಪಾರ್ಟ್‌ಮೆಂಟ್‌ಗೆ ನುಗ್ಗಿದ ವ್ಯಕ್ತಿಯೊಬ್ಬ 22 ವರ್ಷದ ಯುವತಿ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಪುಣೆಯಲ್ಲಿ ನಡೆದಿದೆ.

ಈ ಕೃತ್ಯ ಎಸಗಿದ ನಂತರ ಆರೋಪಿಯು ಸಂತ್ರಸ್ತೆಯ ಫೋನ್‌ನಲ್ಲಿ ತನ್ನ ಸೆಲ್ಫಿ ತೆಗೆದುಕೊಂಡು, ಅದರಲ್ಲಿ ಸಂದೇಶವೊಂದನ್ನು ಬರೆದು, ಅಪರಾಧದ ಬಗ್ಗೆ ಯಾರಿಗೂ ತಿಳಿಸಬಾರದು ಎಂದು ಎಚ್ಚರಿಸಿದ್ದಾನೆ. "ನಿನ್ನ ಚಿತ್ರಗಳು ನನ್ನಲ್ಲಿವೆ, ಅವುಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತೇನೆ" ಎಂದು ಆತ ಬೆದರಿಕೆ ಹಾಕಿದ್ದ ಎಂದು ಪೊಲೀಸ್ ಉಪ ಆಯುಕ್ತ (ವಲಯ 5) ರಾಜ್‌ಕುಮಾರ್ ಶಿಂಧೆ ತಿಳಿಸಿದ್ದಾರೆ.

ಈ ಘಟನೆ ಬುಧವಾರ (ಜುಲೈ 2) ಸಂಜೆ 7:30 ರ ಸುಮಾರಿಗೆ ಮಹಾರಾಷ್ಟ್ರದ ಪುಣೆ ನಗರದ ಕೊಂಧ್ವಾ ಪ್ರದೇಶದ ವಸತಿ ಸಮಾಜದಲ್ಲಿ ನಡೆದಿದೆ. ಆರೋಪಿಯ ಪತ್ತೆಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.

ಯುವತಿ ಒಬ್ಬಂಟಿಯಾಗಿದ್ದಳು

ಘಟನೆ ನಡೆದಾಗ ಯುವತಿ ತನ್ನ ಅಪಾರ್ಟ್‌ಮೆಂಟ್‌ನಲ್ಲಿ ಒಬ್ಬಂಟಿಯಾಗಿದ್ದಳು. ಆಕೆಯ ಸಹೋದರ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಪಟ್ಟಣದಿಂದ ಹೊರಗೆ ಹೋಗಿದ್ದನು. ಆರೋಪಿ ಕೊರಿಯರ್ ವಿತರಣಾ ಏಜೆಂಟ್ ಎಂದು ನಟಿಸಿ ಯುವತಿಯ ಮನೆಗೆ ಬಂದಿದ್ದನು. ಸಹಿ ಹಾಕಲು ಪೆನ್ ಕೇಳುವ ನೆಪದಲ್ಲಿ ಯುವತಿ ಒಳಗೆ ಹೋದಾಗ, ಆರೋಪಿ ಮನೆಗೆ ನುಗ್ಗಿ ಬಾಗಿಲು ಹಾಕಿಕೊಂಡಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

"ರಾತ್ರಿ 8:30 ರ ಸುಮಾರಿಗೆ ಯುವತಿಗೆ ಪ್ರಜ್ಞೆ ಬಂದಿದ್ದು, ಆಕೆಗೆ ಏನೂ ನೆನಪಿಲ್ಲ. ನಂತರ ಯುವತಿ ತನ್ನ ಸಂಬಂಧಿಕರಿಗೆ ಮಾಹಿತಿ ನೀಡಿದ್ದಳು ಮತ್ತು ಬಳಿಕ ಪೊಲೀಸರಿಗೆ ತಿಳಿಸಿದ್ದಾರೆ," ಎಂದು ಹೇಳಲಾಗಿದೆ.

ಫೋಟೋಗಳನ್ನು ವೈರಲ್ ಮಾಡುವ ಬೆದರಿಕೆ

ಆರೋಪಿಯು ಯುವತಿಯ ಫೋನ್‌ನಲ್ಲಿ ತಾನು ಆಕೆಯ ಫೋಟೋಗಳನ್ನು ತೆಗೆದಿರುವುದಾಗಿ ಸಂದೇಶವನ್ನು ಬಿಟ್ಟಿದ್ದಾನೆ. ಈ ಘಟನೆಯನ್ನು ಯಾರಿಗಾದರೂ ಬಹಿರಂಗಪಡಿಸಿದರೆ, ಆ ಫೋಟೋಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೆಲವು ವರದಿಗಳು, ಆತ ಯುವತಿಯ ಫೋನ್‌ನಲ್ಲಿ "ನಾನು ಮತ್ತೆ ಬರುತ್ತೇನೆ" ಎಂಬ ಸಂದೇಶವನ್ನು ಕೂಡ ಹಾಕಿದ್ದಾನೆ ಎಂದು ಹೇಳಲಾಗಿದೆ.

ಕೋಲ್ಕತ್ತಾದಲ್ಲಿ ಕಾನೂನು ವಿದ್ಯಾರ್ಥಿನಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿಯೂ, ಪ್ರಮುಖ ಆರೋಪಿ ಮನೋಜಿತ್ ಮಿಶ್ರಾ ಅವರ ಫೋನ್‌ನಲ್ಲಿ ಲೈಂಗಿಕ ದೌರ್ಜನ್ಯದ ರೆಕಾರ್ಡಿಂಗ್‌ಗಳಿದ್ದವು. ಆ ಪ್ರಕರಣದಲ್ಲಿಯೂ ಅಪರಾಧಿಗಳು ಸಂತ್ರಸ್ತೆ ಅತ್ಯಾಚಾರದ ಬಗ್ಗೆ ಯಾರಿಗಾದರೂ ಹೇಳಿದರೆ ವೀಡಿಯೊಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದರು.

ಆರೋಪಿ ಯುವತಿಯನ್ನು ಪ್ರಜ್ಞಾಹೀನಳನ್ನಾಗಿ ಮಾಡಲು ಯಾವುದಾದರೂ ವಸ್ತುವನ್ನು ಬಳಸಿರುವ ಸಾಧ್ಯತೆಯಿದೆ. ಯಾವುದೇ ಸ್ಪ್ರೇ ಬಳಸಲಾಗಿದೆಯೇ ಎಂದು ಪೊಲೀಸರು ಪರಿಶೀಲಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಸಿಸಿಟಿವಿಯಲ್ಲಿ ಆರೋಪಿಯ ಮುಖ ಸೆರೆಯಾಗಿದೆ

ಆರೋಪಿಯ ಮುಖವು ಸ್ಥಳೀಯ ಸಿಸಿಟಿವಿ ಕ್ಯಾಮೆರಾ ಒಂದರಲ್ಲಿ ಸೆರೆಯಾಗಿದ್ದು, ಆತನನ್ನು ಪತ್ತೆಹಚ್ಚಲು ಪ್ರಯತ್ನಗಳು ನಡೆಯುತ್ತಿವೆ ಎಂದು ಅಧಿಕಾರಿ ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಹತ್ತು ತಂಡಗಳು ಕಾರ್ಯನಿರ್ವಹಿಸುತ್ತಿವೆ, ಐದು ಅಪರಾಧ ವಿಭಾಗದ ತಂಡಗಳು ಮತ್ತು ಐದು ವಲಯ ತಂಡಗಳು ಕಾರ್ಯನಿರ್ವಹಿಸುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 64 (ಅತ್ಯಾಚಾರಕ್ಕೆ ಶಿಕ್ಷೆ), 77 (ವಾಯ್ಯೂರಿಸಂ) ಮತ್ತು 351(2) (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Read More
Next Story