ನೀತಿ ಆಯೋಗದ ಸಭೆಯಿಂದ ಹೊರನಡೆದ ಮಮತಾ ಬ್ಯಾನರ್ಜಿ
x
ಹೊಸದೆಹಲಿಯಲ್ಲಿ ನಡೆದ ನೀತಿ ಆಯೋಗದ ಸಭೆಯಿಂದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಹೊರನಡೆದರು

ನೀತಿ ಆಯೋಗದ ಸಭೆಯಿಂದ ಹೊರನಡೆದ ಮಮತಾ ಬ್ಯಾನರ್ಜಿ

ʻತಮಗೆ ಮಾತನಾಡಲು ಕೇವಲ ಐದು ನಿಮಿಷ ಸಮಯಾವಕಾಶ ನೀಡಲಾಯಿತು. ಇದು ಅನ್ಯಾಯ. ವಿರೋಧ ಪಕ್ಷಗಳ ಪ್ರತಿನಿಧಿಯಾಗಿ ಸಭೆಯಲ್ಲಿ ಇದ್ದವಳು ನಾನು ಮಾತ್ರ,ʼ ಎಂದು ಮಮತಾ ಬ್ಯಾನರ್ಜಿ ಅವರು ಹೇಳಿದರು.


ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಶನಿವಾರ ನಡೆದ ನೀತಿ ಆಯೋಗದ ಸಭೆಯಿಂದ ಹೊರನಡೆದರು. ʻಐದು ನಿಮಿಷಗಳ ನಂತರ ನಾನು ಮಾತನಾಡುವುದನ್ನು ತಡೆಯಲಾಯಿತು,ʼ ಎಂದು ಹೇಳಿದರು.

ಮಾಧ್ಯಮಗಳೊಂದಿಗೆ ಮಾತನಾಡಿ, 2024-25ರ ಕೇಂದ್ರ ಬಜೆಟ್ ಪಕ್ಷಪಾತಿ ಎಂದು ಟೀಕಿಸಿದರು.ʻನಾನು ಸಭೆಯನ್ನು ಬಹಿಷ್ಕರಿಸಿ ಹೊರಬಂದಿದ್ದೇನೆ,ʼ ಎಂದು ಹೇಳಿದರು.

ಮೋದಿ ಪರ ಮುಖ್ಯಮಂತ್ರಿಗಳಿಗೆ ಅವಕಾಶ?

ʻಮೋದಿ ಸರ್ಕಾರಕ್ಕೆ ನಿರ್ಣಾಯಕ ಬೆಂಬಲ ನೀಡಿರುವ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರಿಗೆ ಮಾತನಾಡಲು 20 ನಿಮಿಷ ಕಾಲಾವಕಾಶ ನೀಡಲಾಗಿದೆ. ಬಿಜೆಪಿ ಆಡಳಿತವಿರುವ ಅಸ್ಸಾಂ, ಗೋವಾ ಮತ್ತು ಛತ್ತೀಸ್‌ಗಢದ ಮುಖ್ಯಮಂತ್ರಿಗಳು ತಲಾ 10-12 ನಿಮಿಷಗಳ ಕಾಲ ಮಾತನಾಡಿದರು,ʼ ಎಂದು ಹೇಳಿದರು.

ʻಬಜೆಟ್ ಕೂಡ ರಾಜಕೀಯ, ಪಕ್ಷಪಾತದ ಬಜೆಟ್ ಅಂತ ನಾನು ಹೇಳಿದೆ. ಬೇರೆ ರಾಜ್ಯಗಳ ವಿರುದ್ಧ ಯಾಕೆ ತಾರತಮ್ಯ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದೆ. ನೀತಿ ಆಯೋಗಕ್ಕೆ ಯಾವುದೇ ಹಣಕಾಸಿನ ಅಧಿಕಾರವಿಲ್ಲ. ಅದು ಹೇಗೆ ಕೆಲಸ ಮಾಡುತ್ತದೆ? ಅದಕ್ಕೆ ಹಣಕಾಸಿನ ಅಧಿಕಾರ ನೀಡಿ ಅಥವಾ ಯೋಜನಾ ಆಯೋಗವನ್ನು ಮರುಸ್ಥಾಪಿಸಿ ಎಂದು ಹೇಳಿದೆ,ʼ ಎಂದು ತಿಳಿಸಿದರು.

Read More
Next Story