INDIA  ಸರ್ಕಾರ ರಚಿಸುವುದಿಲ್ಲ ಎಂದರ್ಥವಲ್ಲ: ಮಮತಾ ಬ್ಯಾನರ್ಜಿ
x

INDIA ಸರ್ಕಾರ ರಚಿಸುವುದಿಲ್ಲ ಎಂದರ್ಥವಲ್ಲ: ಮಮತಾ ಬ್ಯಾನರ್ಜಿ


ಪ್ರತಿಪಕ್ಷ ಇಂಡಿಯಾ (INDIA) ಬಣವು ಇಂದು ಸರ್ಕಾರ ರಚಿಸಲು ಹಕ್ಕು ಮಂಡಿಸಿಲ್ಲ ಆದರೆ ಮುಂದೊಂದು ದಿನ ಸರ್ಕಾರ ರಚಿಸಲು ಮನಸ್ಸು ಮಾಡುವುದಿಲ್ಲ ಎಂದು ಅರ್ಥವಲ್ಲ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಹೇಳಿದ್ದಾರೆ.

ಟಿಎಂಸಿ ಮುಖ್ಯಸ್ಥರೂ ಆಗಿರುವ ಬ್ಯಾನರ್ಜಿ ಅವರು ತಮ್ಮ ಪಕ್ಷವು "ಕಾಯುವ ಮತ್ತು ಕಾದುನೋಡುವ" ತಂತ್ರಗಾರಿಕೆ ಮಾಡುತ್ತಿದೆ. "ದುರ್ಬಲ ಮತ್ತು ಅಸ್ಥಿರ" ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವನ್ನು ಅಧಿಕಾರದಿಂದ ದೂರವಿಡುವ ಕಾಲ ಬರಲಿದೆ ಎಂದು ಅವರು ಮಾಧ್ಯಮದ ಜತೆ ಮಾತನಾಡುತ್ತಾ ತಿಳಿಸಿದ್ದಾರೆ. ಸಂತೋಷಪಡುತ್ತಾರೆ ಎಂದು ಮಾಧ್ಯಮಗಳಿಗೆ ತಿಳಿಸಿದರು.

ಜನಾದೇಶ ಮೋದಿ ವಿರುದ್ಧವಾಗಿತ್ತು

ಜನಾದೇಶವು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧವಾಗಿದೆ ಎಂದು ಅವರು ಟೀಕಿಸಿ, “ದೇಶಕ್ಕೆ ಬದಲಾವಣೆಯ ಅಗತ್ಯವಿದೆ; ದೇಶ ಬದಲಾವಣೆ ಬಯಸಿದೆ. ಈ ಜನಾದೇಶ ಬದಲಾವಣೆಗೆ ಆಗಿತ್ತು. ನಾವು ಕಾಯುತ್ತಿದ್ದೇವೆ ಮತ್ತು ಪರಿಸ್ಥಿತಿಯ ಮೇಲೆ ನಿಗಾ ಇಡುತ್ತೇವೆ. ಈ ಜನಾದೇಶ ನರೇಂದ್ರ ಮೋದಿಯವರ ವಿರುದ್ಧವಾಗಿತ್ತು, ಆದ್ದರಿಂದ ಅವರು ಈ ಬಾರಿ ಪ್ರಧಾನಿಯಾಗಬಾರದು. ಬೇರೆಯವರಿಗೆ ಅಧಿಕಾರ ವಹಿಸಿಕೊಳ್ಳಲು ಅವಕಾಶ ನೀಡಬೇಕಿತ್ತು” ಎಂದು ಹೊಸದಾಗಿ ಆಯ್ಕೆಯಾದ ಟಿಎಂಸಿ ಸಂಸದರ ಸಭೆಯ ನಂತರ ಬ್ಯಾನರ್ಜಿ ಸುದ್ದಿಗಾರರಿಗೆ ತಿಳಿಸಿದರು.

TMC ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸುವುದಿಲ್ಲ

ಹೊಸ ಸರ್ಕಾರದ ಪ್ರಮಾಣ ವಚನ ಸಮಾರಂಭಕ್ಕೆ ಪಕ್ಷವು ಹಾಜರಾಗುವುದಿಲ್ಲ ಎಂದರಲ್ಲದೆ, ಬಿಜೆಪಿಯು ಪ್ರಜಾಸತ್ತಾತ್ಮಕವಾಗಿ ಮತ್ತು ಕಾನೂನುಬಾಹಿರವಾಗಿ ಸರ್ಕಾರ ರಚಿಸುತ್ತಿದೆ. ಇಂದು ಇಂಡಿಯಾ ಬಣವು ಸರ್ಕಾರವನ್ನು ರಚಿಸಲು ಹಕ್ಕು ಸಾಧಿಸದೆ ಇರಬಹುದು, ಆದರೆ ನಾಳೆ ಅದು ಹಕ್ಕು ಸಾಧಿಸುವುದಿಲ್ಲ ಎಂದು ಅರ್ಥವಲ್ಲ. ಸ್ವಲ್ಪ ಸಮಯ ಕಾಯೋಣ” ಎಂದರು.

ಅಂತಿಮವಾಗಿ, ಮುಂದಿನ ದಿನಗಳಲ್ಲಿ ಇಂಡಿಯಾ ಬಣ ಸರ್ಕಾರ ರಚಿಸಲಿದೆ ಎಂದು ತೃಣಮೂಲ ಕಾಂಗ್ರೆಸ್ ವರಿಷ್ಠರು ಪ್ರತಿಪಾದಿಸಿದ್ದಾರೆ. ''ರಚನೆಯಾಗಲಿರುವ ಎನ್‌ಡಿಎ ಸರಕಾರ ಅಸ್ಥಿರವಾಗಲಿದೆ. ಬಿಜೆಪಿ ಬಹುಮತ ಪಡೆದಿಲ್ಲ; ಅವರು ಮಿತ್ರಪಕ್ಷಗಳ ಮೇಲೆ ಅವಲಂಬಿತರಾಗಿದ್ದಾರೆ. ಅವರು ತಮ್ಮ ಮಿತ್ರ ಪಕ್ಷಗಳ ಜತೆ ಎಷ್ಟು ದಿನ ಬೆರೆಯುತ್ತಾರೆ ಎಂದು ನೋಡೋಣ, ”ಎಂದು ಅವರು ಹೇಳಿದರು.

Read More
Next Story