ಮಹಾರಾಷ್ಟ್ರ, ಜಾರ್ಖಂಡ್‌  ವಿಧಾನಸಭೆ  ಚುನಾವಣೆ: ಮತ ಎಣಿಕೆ ಆರಂಭ; ಮುನ್ನಡೆ ಕಾಯ್ದುಕೊಂಡ ಎನ್‌ಡಿಎ
x

ಮಹಾರಾಷ್ಟ್ರ, ಜಾರ್ಖಂಡ್‌ ವಿಧಾನಸಭೆ ಚುನಾವಣೆ: ಮತ ಎಣಿಕೆ ಆರಂಭ; ಮುನ್ನಡೆ ಕಾಯ್ದುಕೊಂಡ ಎನ್‌ಡಿಎ

ಕರ್ನಾಟಕವೂ ಸೇರಿದಂತೆ 14 ರಾಜ್ಯಗಳ ವಿಧಾನಸಭೆಗಳ ಕೆಲವು ಕ್ಷೇತ್ರಗಳಿಗೆ ಉಪಚುನಾವಣೆ ಎಣಿಕೆ ಕೂಡ ನಡೆಯುತ್ತಿದೆ. ವಯನಾಡು ಲೋಕಸಭಾ ಕ್ಷೇತ್ರದಲ್ಲಿ ಪ್ರಿಯಾಂಕಾ ಗಾಂದಿ ಭವಿಷ್ಯವೂ ಇಂದು ನಿರ್ಧಾರವಾಗಲಿದೆ.


ಮಹಾರಾಷ್ಟ್ರದ 288 ಅಸೆಂಬ್ಲಿ ಸ್ಥಾನಗಳು ಮತ್ತು ಜಾರ್ಖಂಡ್‌ನ 81 ವಿಧಾನಸಭಾ ಕ್ಷೇತ್ರಗಳಿಗೆ ಎನ್‌ಡಿಎ ಮತ್ತು ಇಂಡಿ ಒಕ್ಕೂಟಗಳ ಜಿದ್ದಾಜಿದ್ದಿಗೆ ಮತದಾರನ ಉತ್ತರ ಏನೆಂಬುದು ಇಂದು (ಶನಿವಾರ) ಗೊತ್ತಾಗುವ ದಿನ.

ಕರ್ನಾಟಕವೂ ಸೇರಿದಂತೆ 14 ರಾಜ್ಯಗಳ ವಿಧಾನಸಭೆಗಳ ಕೆಲವು ಕ್ಷೇತ್ರಗಳಿಗೆ ಉಪಚುನಾವಣೆ ಎಣಿಕೆ ಕೂಡ ನಡೆಯುತ್ತಿದೆ. ಲೋಕಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಪ್ರಿಯಾಂಕಾ ಗಾಂದಿ ಸೇರಿದಂತೆ ಹಲವರ ಭವಿಷ್ಯವನ್ನು ಮತದಾರ ಬರೆದಿರುವುದು ಇನ್ನೇನು ಪ್ರಕಟವಾಗಲಿದೆ.

ಕರ್ನಾಟಕದ ಮೂರು ವಿಧಾನಸಭೆಗಳ ಉಪ ಚುನಾವಣಾ ಫಲಿತಾಂಶವೂ ಇಂದು ಪ್ರಕಟವಾಗಲಿದ್ದು, ಪ್ರಮುಖವಾಗಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್‌ ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ ಪುತ್ರ ಭರತ್‌ ಬೊಮ್ಮಾಯಿ ಸೇರಿದಂತೆ ಚನ್ನಪಟ್ಟಣ, ಶಿಗ್ಗಾವಿ ಹಾಗೂ ಸಂಡೂರು ಕ್ಷೇತ್ರಗಳ ಅಭ್ಯರ್ಥಿಗಳ ಭವಿಷ್ಯ ಇಂದು ಗೊತ್ತಾಗಲಿದೆ.

ಮಹಾರಾಷ್ಟ್ರ ಮತ್ತು ಜಾರ್ಖಂಡ್ ಎರಡರಲ್ಲೂ ಎನ್‌ಡಿಎ ಹೆಚ್ಚು ಅವಕಾಶಗಳನ್ನು ಹೊಂದಿರುವ ಬಗ್ಗೆ ಲಕ್ಷಣಗಳು ಗೋಚರಿಸುತ್ತಿವೆ. ವಯನಾಡಿನಲ್ಲಿ ಪ್ರಿಯಾಂಕಾ ಗಾಂಧಿ ಮುನ್ನಡೆ ಸಾಧಿಸಿದ್ದಾರೆ.

ಮಹಾರಾಷ್ಟ್ರ

ಶಿವಸೇನೆ ಮತ್ತು ಎನ್‌ಸಿಪಿಯಂತಹ ಪ್ರಾದೇಶಿಕ ಶಕ್ತಿಗಳ ವಿಭಜನೆಯ ನಂತರ ಕಳೆದ ಎರಡೂವರೆ ವರ್ಷಗಳಲ್ಲಿ ಅದರ ರಾಜಕೀಯ ಡೈನಾಮಿಕ್ಸ್‌ನಲ್ಲಿ ನಾಟಕೀಯ ಬದಲಾವಣೆಯೊಂದಿಗೆ, ಮಹಾರಾಷ್ಟ್ರವು ಆಡಳಿತಾರೂಢ ಮಹಾಯುತಿ ಮೈತ್ರಿಕೂಟ ಮತ್ತು ವಿರೋಧ ಪಕ್ಷದ ಮಹಾ ವಿಕಾಸ್ ಅಘಾಡಿ (ಎಂವಿಎ) ಗುಂಪಿನ ನಡುವೆ ತೀವ್ರ ಕದನಕ್ಕೆ ಸಾಕ್ಷಿಯಾಗಿದೆ. ಮಹಾಯುತಿಯು ಬಿಜೆಪಿ, ಶಿವಸೇನೆ (ಶಿಂಧೆ) ಮತ್ತು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿಯನ್ನು ಒಳಗೊಂಡಿದೆ, ಆದರೆ ಎಂವಿಎ ಕಾಂಗ್ರೆಸ್, ಶಿವಸೇನೆ (ಯುಬಿಟಿ), ಮತ್ತು ಎನ್‌ಸಿಪಿ (ಎಸ್‌ಪಿ) ಅನ್ನು ತನ್ನ ಘಟಕಗಳಾಗಿ ಹೊಂದಿದೆ.

ಏಕನಾಥ್ ಶಿಂಧೆ, ಉದ್ಧವ್ ಠಾಕ್ರೆ, ಶರದ್ ಪವಾರ್ ಮತ್ತು ಅಜಿತ್ ಪವಾರ್ ಅವರಂತಹ ಪ್ರಾದೇಶಿಕ ನಾಯಕರಿಗೆ ಜನಾದೇಶವು ನಿರ್ಣಾಯಕವಾಗಿದೆ.

ಜಾರ್ಖಂಡ್‌ನಲ್ಲಿ ಬಿಜೆಪಿ ಅಧಿಕಾರ ಹಿಡಿಯಲಿದೆಯೇ?

ಆಡಳಿತಾರೂಢ ಜೆಎಂಎಂ ನೇತೃತ್ವದ ಇಂಡಿಯಾ ಬ್ಲಾಕ್ ಮತ್ತು ಬಿಜೆಪಿ ನೇತೃತ್ವದ ಎನ್‌ಡಿಎ ನಡುವಿನ ತೀವ್ರ ಚುನಾವಣಾ ಕದನಕ್ಕೆ ಜಾರ್ಖಂಡ್ ಸಾಕ್ಷಿಯಾಗಿದೆ. ಭ್ರಷ್ಟಾಚಾರ ಮತ್ತು ಒಳನುಸುಳುವಿಕೆಗೆ ಸಂಬಂಧಿಸಿದಂತೆ ಜೆಎಂಎಂ ನೇತೃತ್ವದ ಒಕ್ಕೂಟದ ಮೇಲೆ ಎನ್‌ಡಿಎ ದಾಳಿ ಮಾಡಿದೆ.

Read More
Next Story