ಮಹಾರಾಷ್ಟ್ರ: ಅಂಗನವಾಡಿ ಬಿಸಿಯೂಟದ ಪ್ಯಾಕೆಟ್‌ನಲ್ಲಿ ಸತ್ತ ಹಾವು
x

ಮಹಾರಾಷ್ಟ್ರ: ಅಂಗನವಾಡಿ ಬಿಸಿಯೂಟದ ಪ್ಯಾಕೆಟ್‌ನಲ್ಲಿ ಸತ್ತ ಹಾವು

ಮಗುವಿನ ಪೋಷಕರು ಸತ್ತ ಹಾವಿನ ಫೋಟೋ ತೆಗೆದ ಬಳಿಕ ಎಸೆದರು. ಪ್ಯಾಕೆಟ್‌ನಲ್ಲಿದ್ದ ಆಹಾರದ ಮಾದರಿ ಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ; ಗೋದಾಮಿಗೆ ಬೀಗ ಹಾಕಲಾಗಿದೆ.


ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಅಂಗನವಾಡಿಯಲ್ಲಿ ಆರು ತಿಂಗಳಿಂದ ಮೂರು ವರ್ಷದ ಮಕ್ಕಳಿಗೆ ವಿತರಿಸಿದ ಬಿಸಿಯೂಟದ ಪ್ಯಾಕೆಟ್‌ನಲ್ಲಿ ಸಣ್ಣ ಸತ್ತ ಹಾವು ಕಂಡುಬಂದಿದೆ ಎಂದು ವರದಿಯಾಗಿದೆ.

ಮಗುವಿನ ಪಾಲಕರು ಈ ಸಂಬಂಧ ಸೋಮವಾರ(ಜುಲೈ 1) ದೂರು ನೀಡಿದರು ಎಂದು ರಾಜ್ಯ ಅಂಗನವಾಡಿ ನೌಕರರ ಸಂಘದ ಉಪಾಧ್ಯಕ್ಷೆ ಆನಂದಿ ಭೋಸಲೆ ತಿಳಿಸಿದ್ದಾರೆ.

ವಿಧಾನಸಭೆಯಲ್ಲಿ ವಿಷಯ: ಕಾಂಗ್ರೆಸ್ ನಾಯಕ ಮತ್ತು ಪಲುಸ್-ಕಡೆಗಾಂವ್ ಶಾಸಕ ವಿಶ್ವಜೀತ್ ಕದಮ್ ಅವರು ಮಹಾರಾಷ್ಟ್ರ ವಿಧಾನ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದರು. ಘಟನೆ ಬಗ್ಗೆ ವಿವರವಾದ ತನಿಖೆ ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು.

ಮಗುವಿನ ಪೋಷಕರು ಫೋಟೋ ತೆಗೆದ ಬಳಿಕ ಸತ್ತ ಹಾವನ್ನು ಎಸೆದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ಯಾಕೆಟ್‌ನಲ್ಲಿದ್ದ ಆಹಾರದ ಮಾದರಿಯನ್ನು ಪರೀಕ್ಷೆಗೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಅಂಗನವಾಡಿಗಳ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಪ್ಯಾಕೆಟ್‌ಗಳನ್ನುನೀಡಲಾಗುತ್ತದೆ. ಇದರಲ್ಲಿ ಬೇಳೆ ಖಿಚಡಿಯ ಮಿಶ್ರಣ ಇರುತ್ತದೆ.

ಗೋದಾಮು ಬಂ‌ದ್:‌ ʻ ತಮಗೆ ನೀಡಿದ ಪ್ಯಾಕೆಟ್‌ನಲ್ಲಿ ಸಣ್ಣ ಸತ್ತ ಹಾವು ಇದ್ದಿತ್ತು ಎಂದು ಮಗುವಿನ ಪೋಷಕರೊಬ್ಬರು ಹೇಳಿದರು,ʼ ಎಂದು ಭೋಸಲೆ ಬುಧವಾರ ತಿಳಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಮತ್ತು ಅಂಗನವಾಡಿ ವಿಭಾಗದ ಮುಖ್ಯಸ್ಥ ಸಂದೀಪ್ ಯಾದವ್, ಊಟದ ಪ್ಯಾಕೆಟ್‌ಗಳನ್ನು ಸಂಗ್ರಹಿಸಿದ್ದ ಗೋದಾಮಿಗೆ ಬೀಗ ಹಾಕಿಸಿದ್ದಾರೆ.

ಆಹಾರ ಮತ್ತು ಔಷಧಗಳ ಆಡಳಿತ(ಎ‌ಫ್‌ಡಿಎ) ಪ್ಯಾಕೆಟಿನಲ್ಲಿದ್ದ ಆಹಾರ ಪದಾರ್ಥಗಳ ಮಾದರಿಯನ್ನು ಪರೀಕ್ಷೆಗಾಗಿ ಸಂಗ್ರಹಿಸಿದೆ.

Read More
Next Story