ಅಜಿತ್ ಪವಾರ್ ಬಣ ತೊರೆದ ನಾಲ್ವರು 4 ಪದಾಧಿಕಾರಿಗಳು
ಅಜಿತ್ ಪವಾರ್ ನೇತೃತ್ವದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್‌ಸಿಪಿ)ದ ಪಿಂಪ್ರಿ ಚಿಂಚ್‌ವಾಡ್ ಘಟಕದ ನಾಲ್ವರು ಹಿರಿಯ ನಾಯಕರು ರಾಜೀನಾಮೆ ನೀಡಿದ್ದಾರೆ. ಇವರೆಲ್ಲರೂ ಶರದ್ ಪವಾರ್ ನೇತೃತ್ವದ ಬಣಕ್ಕೆ ಸೇರುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ.
ನಗರ ಮುಖ್ಯಸ್ಥ ಅಜಿತ ಗವ್ಹಾನೆ, ಕಾರ್ಯಾಧ್ಯಕ್ಷ ರಾಹುಲ್ ಭೋಸಲೆ, ಭೋಸಾರಿ ವಿಧಾನಸಭೆ ಕ್ಷೇತ್ರದ ಅಧ್ಯಕ್ಷ ಪಂಕಜ್ ಭಲೇಕರ್ ಮತ್ತು ಪಕ್ಷದ ನಗರ ಯುವ ಘಟಕದ ಅಧ್ಯಕ್ಷ ಯಶ್ ಸಾನೆ ಪಕ್ಷ ತೊರೆದವರು
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಭೋಸಾರಿ ಕ್ಷೇತ್ರದಿಂದ ಹಾಲಿ ಶಾಸಕ ಮಹೇಶ್ ಲಾಂಜೆ ಅವರನ್ನು ಕಣಕ್ಕಿಳಿಸಲು ಮಹಾಯುತಿ ನಿರ್ಧರಿಸಿರುವುದು ರಾಜೀನಾಮೆಗೆ ಕಾರಣ ಆಗಿರಬಹುದು ಎಂದು ಹೇಳಲಾಗಿದೆ.
ಇತ್ತೀಚಿನ ಲೋಕಸಭೆ ಚುನಾವಣೆಯಲ್ಲಿ ಎನ್‌ಸಿಪಿ ಕಳಪೆ ಪ್ರದರ್ಶನ ನೀಡಿದ್ದು, ಸ್ಪರ್ಧಿಸಿದ ನಾಲ್ಕು ಸ್ಥಾನಗಳಲ್ಲಿ ಒಂದನ್ನು ಮಾತ್ರ ಗೆಲ್ಲಲು ಸಾಧ್ಯವಾಗಿದೆ.
ಕಳೆದ ತಿಂಗಳು ಶರದ್ ಪವಾರ್ ಅವರು, ʻಪಕ್ಷವನ್ನು ದುರ್ಬಲಗೊಳಿಸುವವರನ್ನು ಎನ್‌ಸಿಪಿ (ಎಸ್‌ಪಿ) ಗೆ ಮರಳಿ ಸ್ವೀಕರಿಸುವುದಿಲ್ಲ.ಆದರೆ ಸಂಘಟನೆಯನ್ನು ಬಲಪಡಿಸಲು ಸಹಾಯ ಮಾಡುವವರು ಮತ್ತು ಪಕ್ಷದ ಇಮೇಜ್‌ಗೆ ಧಕ್ಕೆಯಾಗದಂತೆ ನೋಡಿಕೊಳ್ಳುವವರನ್ನು ಸೇರ್ಪಡೆ ಮಾಡಿಕೊಳ್ಳಲಾಗುತ್ತದೆ,ʼ ಎಂದು ಹೇಳಿದ್ದರು.