ಗಾಯಕ ಟಿ ಎಂ ಕೃಷ್ಣಗೆ ಎಂಎಸ್‌ ಸುಬ್ಬುಲಕ್ಷ್ಮೀ ಪ್ರಶಸ್ತಿ ನೀಡದಂತೆ ಮದ್ರಾಸ್‌ ಹೈಕೋರ್ಟ್‌ ತಡೆ
x
Madras HC stops granting of MS Subbulakshmi award to TM Krishna

ಗಾಯಕ ಟಿ ಎಂ ಕೃಷ್ಣಗೆ ಎಂಎಸ್‌ ಸುಬ್ಬುಲಕ್ಷ್ಮೀ ಪ್ರಶಸ್ತಿ ನೀಡದಂತೆ ಮದ್ರಾಸ್‌ ಹೈಕೋರ್ಟ್‌ ತಡೆ

ಸುಬ್ಬುಲಕ್ಷ್ಮೀಯವರು ಹೊಂದಿದ್ದ ಇಂಗಿತಕ್ಕೆ ವಿರೋಧವಾಗಿ ಪ್ರಶಸ್ತಿ ನೀಡುವುದು ಸರಿಯಲ್ಲ ಹಾಗೂ ಆ ರೀತಿ ಮಾಡಲು ಯಾವುದೇ ಹಕ್ಕು ಇಲ್ಲ ಎಂದು ಕೋರ್ಟ್‌ ಅರ್ಜಿ ವಿಚಾರಣೆ ವೇಳೆ ಅಭಿಪ್ರಾಯಪಟ್ಟಿದೆ.


ಸಂಗೀತಗಾರ ಟಿಎಂ ಕೃಷ್ಣ ಅವರಿಗೆ ಸಂಗೀತ ಸಾಮ್ರಾಜ್ಞಿಎಂಎಸ್‌ ಸುಬ್ಬುಲಕ್ಷ್ಮೀ ಅವರ ಹೆಸರಲ್ಲಿ ಸಂಗೀತ ಕಲಾನಿಧಿ ಪ್ರಶಸ್ತಿ ನೀಡದಂತೆ ಮದ್ರಾಸ್‌ ಹೈಕೋರ್ಟ್‌ ಮಂಗಳವಾರ ತಡೆ ನೀಡಿದೆ. ಆದಾಗ್ಯೂ ಈ ಸಂಗೀತ ಕಲಾನಿಧಿಗೆ ಬೇರೆ ಯಾವುದೇ ಹೆಸರಲ್ಲಿ ಪ್ರಶಸ್ತಿ ಹಾಗೂ ನಗದು ನೀಡುವುದಕ್ಕೆ ಅಭ್ಯಂತರ ಇಲ್ಲ ಎಂಬುದಾಗಿಯೂ ಕೋರ್ಟ್‌ ಸ್ಪಷ್ಟಪಡಿಸಿದೆ. ʼದ ಹಿಂದೂʼ ಮೋಡಿವ ದತ್ತಿ ನಿಧಿಯಡಿ ಮದ್ರಾಸ್‌ ಮ್ಯೂಸಿಕ್‌ ಅಕಾಡೆಮಿ ಈ ಪ್ರಶಸ್ತಿಯನ್ನು ಸಂಗೀತ ಸಾಧಕರಿಗೆ ಪ್ರತಿ ವರ್ಷ ನೀಡುತ್ತಿತ್ತು.


ಕೃಷ್ಣ ಅವರಿಗೆ ಪ್ರಶಸ್ತಿ ನೀಡುವುದಕ್ಕೆ ಎಂಎಸ್‌ ಸುಬ್ಬು ಲಕ್ಷ್ಮೀಯವರ ಮೊಮ್ಮಗ ವಿ. ಶ್ರೀನಿವಾಸನ್‌ ವಿರೋಧ ವ್ಯಕ್ತಪಡಿಸಿ ಸಲ್ಲಿಸಿದ್ದ ಅರ್ಜಿ ಕೋರ್ಟ್‌ ಪುರಸ್ಕರಿಸಿ ಮಧ್ಯಂತರ ಆದೇಶ ಪ್ರಕಟಿಸಿದೆ.

ತಮ್ಮ ಹೆಸರಲ್ಲಿ ಪ್ರಶಸ್ತಿ ನೀಡುವುದು ತಮ್ಮ ಅಜ್ಜಿ (ಎಂ ಎಸ್‌ ಸುಬ್ಬುಲಕ್ಷ್ಮೀ) ಅವರ ಇಚ್ಛೆಗೆ ವಿರೋಧವಾಗಿದೆ ಎಂದು ಶ್ರೀನಿವಾಸನ್‌ ಅವರು ಕೋರ್ಟ್‌ಗೆ ಮನವರಿಕೆ ಮಾಡಿದ್ದರು. ಪ್ರಶಸ್ತಿ ನೀಡಲು ಅನುಮತಿ ಕೊಡುವಂತೆ ಮದ್ರಾಸ್‌ ಮ್ಯೂಸಿಕ್‌ ಅಕಾಡೆಮಿ ಸಲ್ಲಿಸಿದ್ದ ಮನವಿ ವಿಚಾರಣೆ ನಡೆಸಿದ ಕೋರ್ಟ್‌, ಸುಬ್ಬುಲಕ್ಷ್ಮೀಯವರ ಇಂಗಿತಕ್ಕೆ ವಿರೋಧವಾಗಿ ಪ್ರಶಸ್ತಿ ನೀಡುವುದು ಸರಿಯಲ್ಲ. ಆ ರೀತಿ ಮಾಡಲು ಯಾವುದೇ ಹಕ್ಕು ಇಲ್ಲ ಎಂದು ಅಭಿಪ್ರಾಯಪಟ್ಟಿದೆ.

ಇಹಲೋಕ ತ್ಯಜಿಸಿರುವ ಸಂಗೀತಗಾರ್ತಿಯ ಇಚ್ಛೆಯನ್ನು ಪಾಲಿಸುವುದೇ ಅವರಿಗೆ ಕೊಡುವ ದೊಡ್ಡ ಗೌರವ ಎಂಬುದಾಗಿ ಕೋರ್ಟ್‌ ಇದೇ ವೇಳೆ ಅಭಿಪ್ರಾಯಪಟ್ಟಿದೆ. ಯಾರಿಗಾದರೂ ಸುಬ್ಬುಲಕ್ಷ್ಮೀ ಅವರ ಮೇಲೆ ಪೂಜ್ಯಭಾವ ಅಥವಾ ಗೌರವ ಇದ್ದರೆ ಅವರ ಇಚ್ಛೆ ಅರಿತುಕೊಂಡ ಬಳಿಕ ಈ ರೀತಿಯ ಪ್ರಶಸ್ತಿಗಳನ್ನು ಕೊಡಬಾರದು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.

ಪ್ರಶಸ್ತಿಗಳನ್ನು ಕೊಡುವುದು ಅವರ ಅಭಿಲಾಷೆಗೆ ವಿರೋಧವಾದದ್ದು ಎಂದು ಕೋರ್ಟ್‌ ಹೇಳಿತು.

ಯಾರು ಕೊಡುವ ಪ್ರಶಸ್ತಿ?

ಎಂಎಸ್‌ ಸುಬ್ಬುಲಕ್ಷ್ಮೀ ಪ್ರಶಸ್ತಿಯನ್ನು ಮದ್ರಾಸ್‌ ಮ್ಯೂಸಿಕ್‌ ಅಕಾಡೆಮಿ 2005ರಿಂದ ನೀಡುತ್ತಿದೆ. ಈ ಪ್ರಶಸ್ತಿಗೆ ʼದ ಹಿಂದೂ ಸಮೂಹʼ ನಿಧಿಯನ್ನು ಒದಗಿಸುತ್ತದೆ. ಇದು ಸಂಗೀತ ಕಲಾನಿಧಿಯ ಪ್ರಶಸ್ತಿಗಿಂತ ಪ್ರತ್ಯೇಕ ಪ್ರಶಸ್ತಿ. ಈ ಬಾರಿ ಎರಡೂ ಪ್ರಶಸ್ತಿಗಳಿಗೆ ಟಿಎಂ ಕೃಷ್ಣ ಅವರನ್ನು ಆಯ್ಕೆ ಮಾಡಲಾಗಿದೆ.

ಟಿಎಂ ಕೃಷ್ಣ ಅವರಿಗೆ ಪ್ರಶಸ್ತಿ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿದ ಶ್ರೀನಿವಾಸನ್‌ ಅವರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಟಿಎಂ ಕೃಷ್ಣ ಅವರು ಸುಬ್ಬುಲಕ್ಷ್ಮೀ ಅವರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳನ್ನು ಮಾಡುವ ಜತೆ ಅವರ ಘನತೆಗೆ ಅಪಚಾರ ಮಾಡಿದ್ದಾರೆ. ಕರ್ಣಾಟಕ ಸಂಗೀತ ಲೋಕದಲ್ಲಿ ಸುಬ್ಬುಲಕ್ಷ್ಮೀ ಅವರು ಹೊಂದಿರುವ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸಿರುವ ಟಿಎಂ ಕೃಷ್ಣ ಅವರಿಗೆ ಈ ಪ್ರಶಸ್ತಿ ನೀಡುವುದು ಕಾನೂನು ಪ್ರಕಾರ ಸರಿಯಲ್ಲ ಎಂದು ವಾದಿಸಿದ್ದರು.

ಸುಬ್ಬುಲಕ್ಷ್ಮೀಯವರು ಬರೆದಿದ್ದ ಉಯಿಲನ್ನು ಕೂಡ ಶ್ರೀನಿವಾಸನ್‌ ಅವರು ಕೋರ್ಟ್‌ ಗಮನಕ್ಕೆ ತಂದಿದ್ದರು. ತನ್ನ ಹೆಸರಲ್ಲಿ ಯಾವುದೇ ಟ್ರಸ್ಟ್‌., ಧತ್ತಿ ಸಂಸ್ಥೆ , ಸ್ಮಾರಕಗಳನ್ನು ಮಾಡಬಾರದು ಮತ್ತು ಅದರ ಹೆಸರಲ್ಲಿ ಧತ್ತಿ ಹಾಗೂ ಹಣ ಸಂಗ್ರಹ ಮಾಡಬಾರದು ಎಂದು ಅವರು ಬರೆದಿದ್ದಾರೆ. ಹೀಗಾಗಿ ಈ ಪ್ರಶಸ್ತಿಯು ಅವರ ಇಚ್ಛೆಗೆ ವಿರುದ್ಧವಾಗಿದೆ ಎಂದು ಅವರು ಕೋರ್ಟ್‌ ಮುಂದೆ ವಾದಿಸಿದ್ದರು.

Read More
Next Story