Loksabha Election 2024 | ಕಾಂಗ್ರೆಸ್ 6ನೇ ಪಟ್ಟಿ ಬಿಡುಗಡೆ
x

Loksabha Election 2024 | ಕಾಂಗ್ರೆಸ್ 6ನೇ ಪಟ್ಟಿ ಬಿಡುಗಡೆ


ನವದೆಹಲಿ, ಮಾ.25- ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಐವರು ಅಭ್ಯರ್ಥಿಗಳ ಆರನೇ ಪಟ್ಟಿಯನ್ನು ಸೋಮವಾರ ಪ್ರಕಟಿಸಿದೆ. ನಿರ್ಗಮಿತ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ವಿರುದ್ಧ ಕೋಟಾದಿಂದ ಪ್ರಹ್ಲಾದ್ ಗುಂಜಾಲ್ ಅವರನ್ನು ಕಣಕ್ಕಿಳಿಸಿದೆ.

ಅಜ್ಮೀರ್‌ನಿಂದ ರಾಮಚಂದ್ರ ಚೌಧರಿ, ರಾಜ್‌ಸಮಂದ್‌ನಿಂದ ಸುದರ್ಶನ್ ರಾವತ್, ಭಿಲ್ವಾರಾದಿಂದ ದಾಮೋದರ್ ಗುರ್ಜರ್ ಮತ್ತು ತಿರುನಲ್ವೇಲಿಯಿಂದ ಸಿ ರಾಬರ್ಟ್ ಬ್ರೂಸ್ ಅವರನ್ನು ಕಣಕ್ಕಿಳಿಸಿದೆ. ಗುಂಜಾಲ್ ಅವರು ಗುರುವಾರ ಜೈಪುರದಲ್ಲಿ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ರಾಜಸ್ಥಾನ ಕಾಂಗ್ರೆಸ್ ಮುಖ್ಯಸ್ಥ ಗೋವಿಂದ್ ಸಿಂಗ್ ದೋತಾಸ್ರಾ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದರು.

ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಅವರ ಆಪ್ತರಾಗಿದ್ದ ಗುಂಜಾಲ್, ಈ ಹಿಂದೆ ಎರಡು ಬಾರಿ ಕೋಟಾ ಉತ್ತರದಿಂದ ಶಾಸಕರಾಗಿದ್ದರು. ಆದರೆ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದರು. ಅವರ ಸೇರ್ಪಡೆಯಿಂದ ಹಾಡೋತಿ ಪ್ರದೇಶದಲ್ಲಿ ಕಾಂಗ್ರೆಸ್‌ಗೆ ಲಾಭವಾಗುವ ನಿರೀಕ್ಷೆಯಿದೆ. ಕಾಂಗ್ರೆಸ್ ಇದರೊಂದಿಗೆ‌ 190 ಅಭ್ಯರ್ಥಿಗಳನ್ನು ಘೋಷಿಸಿದೆ.

Read More
Next Story