ಬೆಂಗಳೂರಿನ ಹಸಿರು ದುರಂತ: ಕಳೆದುಹೋದ ಕೆರೆ, ಮರಗಳು ಕಾರಣ
x

ಬೆಂಗಳೂರಿನ ಹಸಿರು ದುರಂತ: ಕಳೆದುಹೋದ ಕೆರೆ, ಮರಗಳು ಕಾರಣ


ಬೆಂಗಳೂರು ಗಂಭೀರ ಪರಿಸರ ಬಿಕ್ಕಟ್ಟು ಎದುರಿಸುತ್ತಿದ್ದು, ಅದನ್ನು ಉಳಿಸುವ ಏಕೈಕ ಮಾರ್ಗವೆಂದರೆ ಈ ಹಿಂದೆ ನಗರ ಮತ್ತು ಜನರನ್ನು ಪೋಷಿಸಿದ್ದ ಕೆರೆಗಳು ಮತ್ತು ಮರಗಳನ್ನು ಪುನರುಜ್ಜೀವನಗೊಳಿಸುವುದು ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಪರಿಸರ ವಿಜ್ಞಾನ ಕೇಂದ್ರ (ಸಿಇಎಸ್)ದ ಅಧ್ಯಯನ ಹೇಳಿದೆ.

ಪರಿಸರ ವಿಜ್ಞಾನ ಕೇಂದ್ರದ ಪ್ರಕಾರ, ಬೆಂಗಳೂರು ತನ್ನ ಹಸಿರು ಹೊದಿಕೆಯನ್ನು ಶೇ.66 ಮತ್ತು ಶೇ.74ರಷ್ಟು ಜಲಮೂಲಗಳನ್ಳು ಕಳೆದು ಕೊಂಡಿದೆ. ನಗರದಲ್ಲಿ ನಿರ್ಮಾಣ ಕ್ಷೇತ್ರದಲ್ಲಿ ಶೇ.584 ರಷ್ಟು ಬೃಹತ್ ಬೆಳವಣಿಗೆ ಕಂಡಿದ್ದು, ಕಾಂಕ್ರೀಟ್ ಕಾಡಾಗಿ ಮಾರ್ಪಾಡಾಗಿದೆ.

ನಿರ್ಮಿತ ಮೇಲ್ಮೈ: ʻಕಟ್ಟಡಗಳ ಹೆಚ್ಚಳ ಮತ್ತು ಹಸಿರು ಸ್ಥಳಗಳ ಕಡಿತವು ಬೆಂಗಳೂರಿನ ಉಷ್ಣ ದ್ವೀಪದ ಪರಿಣಾಮಕ್ಕೆ ಕೊಡುಗೆ ನೀಡಿದೆ. ಇದು ಮುಂದುವರಿ ದರೆ, ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆʼ ಎಂದು ಸಿಇಎಸ್‌ನ ಇಂಧನ ಮತ್ತು ತೇವಭೂಮಿ ಸಂಶೋಧನಾ ಗುಂಪಿನ ಸಂಯೋಜಕ ಪ್ರೊ. ಟಿ.ವಿ. ರಾಮಚಂದ್ರ ಹೇಳಿದರು. 2038 ರ ವೇಳೆಗೆ ಅರಣ್ಯ ಶೇ.0.65 ಕ್ಕೆ ಕಡಿಮೆಯಾಗುತ್ತದೆ ಎಂದು ಸಿಇಎಸ್‌ ಊಹಿಸಿದೆ (2022ರಲ್ಲಿ ನಡೆದ ಜನಗಣತಿ ಪ್ರಕಾರ ಇದು ಶೇ.3.32).

ಶಾಖದ ಹೀರುವಿಕೆ: ಶಾಖ ಹೀರುವ ತಾಣ (ಕೆರೆ ಕೊಳ್ಳಗಳು ಮತ್ತು ಹಸಿರು ಹೊದಿಕೆ)ಗಳ ಕುಸಿತವು ಬೆಂಗಳೂರಿನ ಸೂಕ್ಷ್ಮ ಪರಿಸರದ ವಾಯುಗುಣದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಕಡಿಮೆ ತಂಪಾಗಿಸುವ ಪರಿಣಾಮ ಮತ್ತು ಭೂಮಿಯ ಮೇಲ್ಮೈ ತಾಪಮಾನದಲ್ಲಿನ ಹೆಚ್ಚಳದಿಂದ ಇದು ಸ್ಪಷ್ಟವಾಗಿದೆ ಎಂದು ರಾಮಚಂದ್ರ ಹೇಳುತ್ತಾರೆ.2038ರೊಳಗೆ ಬೆಂಗಳೂರು ನಗರದಲ್ಲಿ ಶೇ.98 ಮತ್ತು ಬೆಂಗಳೂರು ನಗರ ಪ್ರದೇಶದಲ್ಲಿ ಶೇ.69.90 ರಷ್ಟು ಮೇಲ್ಮೈ ಮುಚ್ಚಲ್ಪಟ್ಟು ಶಾಖ ಉಸಿರುಗಟ್ಟಿಸಲಿದೆ ಎಂದು ಅಧ್ಯಯನ ಹೇಳಿದೆ(2022 ರಲ್ಲಿ ಶೇ.55.71). ʻಉಷ್ಣ ದ್ವೀಪ ಪರಿಣಾಮವು ತಾಪಮಾನವನ್ನು ಮತ್ತು ಆರ್ದ್ರತೆಯ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಉಷ್ಣದ ಒತ್ತಡ ಮತ್ತು ಶಾಖ ಸಂಬಂಧಿತ ಕಾಯಿಲೆಗಳಿಗೆ ಕಾರಣವಾಗುತ್ತದೆʼ ಎಂದು ಹೇಳಿದರು.

ಆರಂಭಿಕ ವಸಾಹತುಗಾರರ ತಿಳಿವಳಿಕೆ: ʻನಿಸರ್ಗದ ನಾಡಿಮಿಡಿತವನ್ನು ಅರಿತುಕೊಂಡ ಮೊದಲ ನೆಲೆಸಿದವರಿಂದ, ಬೆಂಗಳೂರು ತನ್ನ ಪ್ರಸಿದ್ಧ ಸೌಮ್ಯ ಹವಾಮಾನವನ್ನು ಪಡೆದುಕೊಂಡಿದೆ ಎಂದು ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಪರಿಸರ ವಿಜ್ಞಾನದ ಪ್ರಾಧ್ಯಾಪಕಿ ಹರಿಣಿ ನಾಗೇಂದ್ರ ಹೇಳಿದರು.

ʻಆರಂಭದಲ್ಲಿ ನೆಲೆಸಿದವರಿಗೆ ಭೂದೃಶ್ಯದ ಮೂರು ಆಯಾಮದ ಬಗ್ಗೆ ಅರಿವು ಇದ್ದಿತ್ತು. ಉದಾಹರಣೆಗೆ, ಹೊಸ ಕೆರೆಯ ನಿರ್ಮಾಣ ಯೋಜನೆಯು ಕೆಳ ಹಂತದ ಬಾವಿಗಳು ಮತ್ತು ಮೇಲಿನ ಹಂತದ ಮರಗಳನ್ನು ಒಳಗೊಂಡಿರುತ್ತಿತ್ತು. ಹಲವು ಜಲಮೂಲಗಳ ಜೊತೆಗೆ, ʻಗುಂಡು ತೋಪುಗಳು ಅಥವಾ ತೋಟಗಳು ಅಥವಾ ಮರಗಳ ಗುಂಪನ್ನುನೆಟ್ಟರುʼ ಎಂದು ಹೇಳಿದರು.

ಯಥೇಚ್ಛ ಮರಗಳ ನೆಡುವಿಕೆ: ನಾಗೇಂದ್ರ ಅವರ ಪ್ರಕಾರ, ʻಸ್ಥಳೀಯರ ಪ್ರಕಾರ, ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ಅವರು ಈ ಪ್ರವೃತ್ತಿಯನ್ನು ಪ್ರಾರಂಭಿಸಿದರು. ಆನಂತರ ಇದನ್ನು ಬ್ರಿಟಿಷರು ಮುಂದುವರಿಸಿದರು. ಪ್ರತಿ ಹಳ್ಳಿ ಸುತ್ತಲೂ ಮೂರ್ನಾಲ್ಕು ಗುಂಡುತೋಪುಗಳಿದ್ದವು. ಅಲ್ಲಿ ಜನರು ಮಾವು, ಹಲಸು ಅಥವಾ ನೆರಳು ನೀಡುವ ಮರಗಳನ್ನು ನೆಡುತ್ತಿದ್ದರು. ಅವು ಜನರು ಸೇರುವ ಸ್ಥಳ, ಪರಿಸರ ಸಂಪನ್ಮೂಲಗಳಾದವು. ಹವಾಮಾನ ವನ್ನು ತಂಪಾಗಿಸುತ್ತಿದ್ದವು ಮತ್ತು ಉಷ್ಣತೆಯ ಪರಿಣಾಮಗಳನ್ನು ಸರಿದೂಗಿಸುತ್ತಿದ್ದವುʼ ಎಂದರು.

ʻಈ ಗುಂಡುತೋಪುಗಳ ಭಾಗವಾಗಿದ್ದ ತೆರೆದ ಬಾವಿಗಳು ಮತ್ತು ಕೆರೆಗಳು ಜನರಿಗೆ ವಿಶೇಷವಾಗಿ ಬೇಸಿಗೆಯಲ್ಲಿ ನೀರು ಒದಗಿಸುತ್ತಿದ್ದವು. ಬೆಂಗಳೂರು ಅರೆ ಶುಷ್ಕ ನಗರ. ಪ್ರತಿ ಹನಿ ಮಳೆ ನೀರನ್ನು ಕೊಯ್ಲು ಮಾಡುವ ಅಗತ್ಯವಿದೆ,ʼ ಎಂದು ತಿಳಿಸಿದರು.

ಮರಗಳು ಮತ್ತು ತಾಪಮಾನ: ಬೆಂಗಳೂರಿನ ವಿವಿಧ ಭಾಗಗಳಲ್ಲಿ ತಮ್ಮ ತಂಡ ನಡೆಸಿದ ಸಂಶೋಧನೆಯು ಮರಗಳು ಮತ್ತು ಗಾಳಿಯ ಉಷ್ಣತೆ ನಡುವಿನ ಸಂಬಂಧವನ್ನು ತೋರಿಸಿದೆ ಎಂದು ನಾಗೇಂದ್ರ ಹೇಳಿದರು.

ʻಮರಗಳು ಗಾಳಿಯಲ್ಲಿ ತೇಲುತ್ತಿರುವ ಕಣಗಳು ಮತ್ತು ಮಸಿಯನ್ನು ಕಡಿಮೆ ಮಾಡುತ್ತವೆ. ಬಹಳ ಮುಖ್ಯವಾಗಿ, ಅವು ನಗರವನ್ನು ತಂಪಾಗಿ ಸುತ್ತವೆ. ಜೌಗು ಪ್ರದೇಶಗಳು ಮತ್ತು ಕೆರೆಗಳನ್ನು ಕಾಂಕ್ರೀಟ್‌ಗೆ ಕಳೆದುಕೊಂಡಿದ್ದೇವೆ. ಕಾಂಕ್ರೀಟ್ ಹಗಲಿನಲ್ಲಿ ಶಾಖ ಹೀರಿಕೊಳ್ಳುತ್ತದೆ ಮತ್ತು ರಾತ್ರಿ ಅದನ್ನು ಉಳಿಸಿಕೊಳ್ಳುತ್ತದೆ. ಶಾಖ ಮತ್ತೆ ವಾತಾವರಣಕ್ಕೆ ಬಿಡುಗಡೆಯಾಗದೆ ಇರುವುದರಿಂದ ಮರುದಿನ ಬಿಸಿ ಇನ್ನಷ್ಟು ಹೆಚ್ಚುತ್ತದೆʼ ಎಂದು ವಿವರಿಸಿದರು.

ಹಸಿರು ಹೊದಿಕೆ: ಟಾರ್ ರಸ್ತೆಯ ಮೇಲ್ಮೈ ಸುಮಾರು 65 ಡಿಗ್ರಿ ಸೆಲ್ಸಿಯಸ್ ಹಾಗೂ ಮರದ ಅಡಿಯಲ್ಲಿ 30 ರಿಂದ 35 ಡಿಗ್ರಿ ಸೆಲ್ಸಿಯಸ್ ಉಷ್ಣತೆ ಇರುತ್ತದೆ.ʻಬೆಂ ಗಳೂರಿನಲ್ಲಿ 14,78,412 ಮರಗಳಿವೆ; ಇದು ಮೂಲಭೂತ ಅವಶ್ಯಕತೆಗಿಂತ ತೀರಾ ಕಡಿಮೆ. ಜನಸಂಖ್ಯೆಯನ್ನು ಪರಿಗಣಿಸಿದರೆ, ಬೆಂಗಳೂರಿ ನಲ್ಲಿ 100 ಜನರಿಗೆ ಕೇವಲ 17 ಮರಗಳಿವೆ. ನಾವು ಬಿಡುಗಡೆ ಮಾಡುವ ಇಂಗಾಲದ ಡೈಆಕ್ಸೈಡ್‌ನ್ನು ಲೆಕ್ಕಾಚಾರ ಮಾಡಿದರೆ, ಆಮ್ಲಜನಕ ದ ಕೊರತೆ ತಡೆಯಲು ಪ್ರತಿ ವ್ಯಕ್ತಿಗೆ ಏಳರಿಂದ ಎಂಟು ಮರ ಬೇಕಾಗುತ್ತದೆ,ʼ ಎಂದು ಹೇಳಿದರು.

Read More
Next Story