ಬಜೆಟ್ ಅಧಿವೇಶನದ ಕೊನೆಯ ದಿನದವರೆಗೆ ವಕ್ಫ್ ಮಸೂದೆ ಸಮಿತಿಯ ಅಧಿಕಾರ ವಿಸ್ತರಣೆ
x

ಬಜೆಟ್ ಅಧಿವೇಶನದ ಕೊನೆಯ ದಿನದವರೆಗೆ ವಕ್ಫ್ ಮಸೂದೆ ಸಮಿತಿಯ ಅಧಿಕಾರ ವಿಸ್ತರಣೆ

ಸಮಿತಿಯ ಸಭೆಗಳು ಪ್ರತಿಪಕ್ಷಗಳು ಮತ್ತು ಆಡಳಿತ ಪಕ್ಷದ ಸದಸ್ಯರ ನಡುವಿನ ಸಮರ ಕಣವಾಗಿ ಮಾರ್ಪಟ್ಟಿವೆ. ಸರ್ಕಾರ ಪ್ರಸ್ತಾಪಿಸಿದ ವಕ್ಫ್ ಮಸೂದೆಯಲ್ಲಿನ ಬದಲಾವಣೆಗಳ ಬಗ್ಗೆ ಪ್ರತಿಪಕ್ಷಗಳು ಜೋರಾಗಿ ಚರ್ಚಿಸುತ್ತಿವೆ.


ವಕ್ಫ್ (ತಿದ್ದುಪಡಿ) ಮಸೂದೆಗಾಗಿ ರಚಿಸಲಾಗಿದ್ದ ಜಂಟಿ ಸಮಿತಿಯ ಅಧಿಕಾರಾವಧಿಯನ್ನು ಮುಂದಿನ ವರ್ಷದ ಬಜೆಟ್ ಅಧಿವೇಶನದ ಕೊನೆಯ ದಿನದವರೆಗೆ ವಿಸ್ತರಿಸುವ ನಿರ್ಣಯವನ್ನು ಲೋಕಸಭೆ ಅಂಗೀಕರಿಸಿದೆ. ಸಮಿತಿಯ ಅಧ್ಯಕ್ಷ ಮತ್ತು ಬಿಜೆಪಿ ನಾಯಕ ಜಗದಾಂಬಿಕಾ ಪಾಲ್ ಗುರುವಾರ (ನವೆಂಬರ್ 28) ಲೋಕಸಭೆಯಲ್ಲಿ ನಿರ್ಣಯ ಮಂಡಿಸಿದರು. ಅದು ಧ್ವನಿ ಮತದೊಂದಿಗೆ ಅಂಗೀಕಾರಗೊಂಡಿತು.

ಸಮಿತಿಯ ಸಭೆಗಳು ಪ್ರತಿಪಕ್ಷಗಳು ಮತ್ತು ಆಡಳಿತ ಪಕ್ಷದ ಸದಸ್ಯರ ನಡುವಿನ ಸಮರ ಕಣವಾಗಿ ಮಾರ್ಪಟ್ಟಿವೆ. ಸರ್ಕಾರ ಪ್ರಸ್ತಾಪಿಸಿದ ವಕ್ಫ್ ಮಸೂದೆಯಲ್ಲಿನ ಬದಲಾವಣೆಗಳ ಬಗ್ಗೆ ಪ್ರತಿಪಕ್ಷಗಳು ಜೋರಾಗಿ ಚರ್ಚಿಸುತ್ತಿವೆ.

ಬುಧವಾರ ಸಮಿತಿಯ ವಿರೋಧ ಪಕ್ಷದ ಸದಸ್ಯರು ಸಭಾತ್ಯಾಗ ಮಾಡಿದ್ದಾರೆ. ಸಮಿತಿಯ ಕರಡು ವರದಿ ಸಿದ್ಧವಾಗಿದೆ ಎಂದು ಪ್ರತಿಪಾದಿಸಿದ್ದಕ್ಕಾಗಿ ಪಾಲ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಪಾಲ್ ಮತ್ತು ಸಮಿತಿಯ ಬಿಜೆಪಿ ಸದಸ್ಯರು ನಂತರ ವಿರೋಧ ಪಕ್ಷದ ಸದಸ್ಯರನ್ನು ಸಂಪರ್ಕಿಸಿದ್ದಾರೆ. ಈ ವೇಳೆ ಲೋಕಸಭೆಗೆ ವರದಿಯನ್ನು ಸಲ್ಲಿಸಲು ಸಮಿತಿಯ ಗಡುವನ್ನು ನವೆಂಬರ್ 29ರವರೆಗೆ ವಿಸ್ತರಿಸಲು ಕೋರುವ ಇಚ್ಛೆ ವ್ಯಕ್ತಪಡಿಸಿದ್ದಾರೆ.

ಮಸೂದೆಯ ಬಗ್ಗೆ ಒಮ್ಮತವಿಲ್ಲ

ಲೋಕಸಭೆಯು ಆಗಸ್ಟ್ 8ರಂದು ಸಮಿತಿ ರಚಿಸಿತ್ತು. ಚಳಿಗಾಲದ ಅಧಿವೇಶನದ ಮೊದಲ ವಾರದ ಕೊನೆಯ ದಿನದಂದು ಅಂದರೆ ಶುಕ್ರವಾರ ತನ್ನ ವರದಿ ಸಲ್ಲಿಸುವಂತೆ ಕೇಳಿತ್ತು.

ನವೆಂಬರ್ 21ರಂದು ನಡೆದ ಸಮಿತಿಯ ಕೊನೆಯ ಸಭೆಯ ನಂತರ ಪಾಲ್ ಕರಡು ವರದಿ ಸಿದ್ಧವಾಗಿದೆ ಎಂದು ಹೇಳಿಕೆ ನೀಡಿದ್ದರು. ಸಮಿತಿಯ ಸಮಾಲೋಚನೆ ಮುಗಿದಿದೆ ಮತ್ತು ಅದರ ಸದಸ್ಯರು ಈಗ ವರದಿ ಬಗ್ಗೆ ಚರ್ಚೆ ಆರಂಭಗೊಂಡಿದೆ ಎಂದು ಹೇಳಿದ್ದಾರೆ.

ಬುಧವಾರದ ಸಭೆಯಲ್ಲಿ ವಿರೋಧ ಪಕ್ಷದ ಸದಸ್ಯರು ಈ ನಿಲುವಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಹೊರನಡೆದಿದ್ದಾರೆ.

ಇದೀಗ ಅಧಿಕಾರಾವಧಿಯನ್ನು ವಿಸ್ತರಿಸಲಾಗುವುದು ಎಂದು ಸ್ಪೀಕರ್‌ ಬಿರ್ಲಾ ಭರವಸೆ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಪ್ರತಿಪಕ್ಷಗಳ ಟೀಕೆ

ಅಸ್ತಿತ್ವದಲ್ಲಿರುವ ವಕ್ಫ್ ಕಾಯ್ದೆಯಲ್ಲಿ ಮಸೂದೆಯು ಪ್ರಸ್ತಾಪಿಸಿದ ತಿದ್ದುಪಡಿಗಳು ಮುಸ್ಲಿಮರ ಧಾರ್ಮಿಕ ಹಕ್ಕುಗಳನ್ನು ಉಲ್ಲಂಘಿಸುತ್ತವೆ ಎಂದು ಆರೋಪಿಸಿ ವಿರೋಧ ಪಕ್ಷಗಳು ಕಟುವಾಗಿ ಟೀಕಿಸಿವೆ.

ಈ ತಿದ್ದುಪಡಿಗಳು ವಕ್ಫ್ ಮಂಡಳಿಗಳ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ ತರುತ್ತವೆ. ಅವುಗಳನ್ನು ಜವಾಬ್ದಾರಿಯುತ ಸಂಸ್ಥೆಯನ್ನಾಗಿ ಮಾಡುತ್ತವೆ ಎಂದು ಆಡಳಿತಾರೂಢ ಬಿಜೆಪಿ ಪ್ರತಿಪಾದಿಸಿದೆ.

Read More
Next Story