ಭಾರತದ ‘ಆಪರೇಷನ್ ಸಿಂಧೂರ್’ ನಂತರ ಎಲ್​ಒಸಿಯಲ್ಲಿ ಉದ್ವಿಗ್ನ ಸ್ಥಿತಿ; ಪಾಕ್​ನ ಅಪ್ರಚೋದಿತ ದಾಳಿಗೆ 3 ನಾಗರಿಕರ ಸಾವು
x

ಭಾರತದ ‘ಆಪರೇಷನ್ ಸಿಂಧೂರ್’ ನಂತರ ಎಲ್​ಒಸಿಯಲ್ಲಿ ಉದ್ವಿಗ್ನ ಸ್ಥಿತಿ; ಪಾಕ್​ನ ಅಪ್ರಚೋದಿತ ದಾಳಿಗೆ 3 ನಾಗರಿಕರ ಸಾವು

ಆಪರೇಷನ್ ಸಿಂಧೂರ್​’ ಎಂಬುದು ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ 26 ಮಂದಿಯನ್ನು ಬಲಿತೆಗೆದುಕೊಂಡ ಭಯೋತ್ಪಾದಕ ದಾಳಿಗೆ ಭಾರತದ ಪ್ರತೀಕಾರದ ಕ್ರಮವಾಗಿದೆ.


ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತವು ‘ಆಪರೇಷನ್ ಸಿಂಧೂರ್’ ಹೆಸರಿನಡಿ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (PoK) ಒಂಬತ್ತು ಭಯೋತ್ಪಾದಕ ಶಿಬಿರಗಳ ಮೇಲೆ ಕ್ಷಿಪಣಿ ದಾಳಿಗಳನ್ನು ನಡೆಸಿದ ಕೆಲವೇ ಗಂಟೆಗಳ ನಂತರ, ಪಾಕಿಸ್ತಾನ ಸೇನೆಯು ಗಡಿ ನಿಯಂತ್ರಣ ರೇಖೆ (LoC) ಮತ್ತು ಅಂತರರಾಷ್ಟ್ರೀಯ ಗಡಿಯ ಉದ್ದಕ್ಕೂ ಅಪ್ರಚೋದಿತ ಗುಂಡಿನ ದಾಳಿಗಳನ್ನು ನಡೆಸಿದೆ. ಈ ದಾಳಿಯಲ್ಲಿ ಮೂವರು ಭಾರತೀಯ ನಾಗರಿಕರು ಮೃತಪಟ್ಟಿದ್ದಾರೆ ಎಂದು ಭಾರತೀಯ ಸೇನೆ ಬುಧವಾರ (ಮೇ 7) ತಿಳಿಸಿದೆ. ಗಡಿಯುದ್ದಕ್ಕೂ ಭಾರೀ ಫಿರಂಗಿ ಗುಂಡುಗಳ ಚಕಮಕಿ ಮುಂದುವರಿದಿದೆ. .

“ಪಾಕಿಸ್ತಾನ ಸೇನೆಯ ಅನಗತ್ಯ ಗುಂಡಿನ ದಾಳಿ/ಶೆಲ್‌ ಮೂವರು ಅಮಾಯಕ ನಾಗರಿಕರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಭಾರತೀಯ ಸೇನೆಯು ಸೂಕ್ತ ಪ್ರತಿಕ್ರಿಯೆ ನೀಡುತ್ತಿದೆ,” ಎಂದು ಭಾರತೀಯ ಸೇನೆಯ ಹೇಳಿಕೆ ತಿಳಿಸಿದೆ. ಪಾಕಿಸ್ತಾನ ಸೇನೆಯು ಫಿರಂಗಿ ಗುಂಡುಗಳನ್ನು ಬಳಸಿದ ಈ ದಾಳಿಗೆ ಭಾರತೀಯ ಸೇನೆ “ಅತ್ಯಂತ ಪರಿಣಾಮಕಾರಿಯಾಗಿ” ಉತ್ತರಿಸಿದೆ ಎಂದು ರಕ್ಷಣಾ ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎನ್​ಐ ವರದಿ ಮಾಡಿದೆ.

‘ಆಪರೇಷನ್ ಸಿಂಧೂರ್’ ವಿವರ

‘ಆಪರೇಷನ್ ಸಿಂಧೂರ್​’ ಎಂಬುದು ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ 26 ಮಂದಿಯನ್ನು ಬಲಿತೆಗೆದುಕೊಂಡ ಭಯೋತ್ಪಾದಕ ದಾಳಿಗೆ ಭಾರತದ ಪ್ರತೀಕಾರದ ಕ್ರಮವಾಗಿದೆ. ಈ ದಾಳಿಯಲ್ಲಿ ಹೆಚ್ಚಿನವರು ಪ್ರವಾಸಿಗರಾಗಿದ್ದರು. ಈ ಕಾರ್ಯಾಚರಣೆಯಡಿ, ಭಾರತವು ಪಾಕಿಸ್ತಾನ ಮತ್ತು PoKನ ಒಂಬತ್ತು ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡಿತ್ತು.

ಗುರಿಯಾಗಿಸಲಾದ ಶಿಬಿರಗಳು ಲಷ್ಕರ್​-ಎ-ತೈಯ್ಬಾ (LeT), ಹಿಜ್ಬುಲ್ ಮುಜಾಹಿದ್ದೀನ್ ಮತ್ತು ಜೈಶ್-ಎ-ಮೊಹಮ್ಮದ್ (JeM) ಎಂಬ ಮೂರು ಪ್ರಮುಖ ಭಯೋತ್ಪಾದಕ ಸಂಘಟನೆಗಳಿಗೆ ಸಂಬಂಧಿಸಿದ್ದವು

ಒಂಬತ್ತು ಗುರಿಗಳ ಮೇಲಿನ ದಾಳಿಗಳು ಯಶಸ್ವಿಯಾಗಿದ್ದು, ‘ಆಪರೇಷನ್ ಸಿಂಧೂರ್​’ನಲ್ಲಿ ಭಾಗಿಯಾದ ವಾಯುಪಡೆಯ ಪೈಲಟ್‌ಗಳು ಸುರಕ್ಷಿತವಾಗಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಈ ಕಾರ್ಯಾಚರಣೆಯನ್ನು ನಿಕಟವಾಗಿ ಗಮನಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪಾಕಿಸ್ತಾನದ ಆರೋಪ

ಪಾಕಿಸ್ತಾನವು ಭಾರತದ ದಾಳಿಯಿಂದ ಆರು ಸ್ಥಳಗಳಲ್ಲಿ ನಡೆದಿದೆ ಎಂದು ಹೇಳಿದೆ. ಆದರೆ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ “ ಪಾಕಿಸ್ತಾನದ ನಾಗರಿಕ, ಆರ್ಥಿಕ ಅಥವಾ ಮಿಲಿಟರಿ ಗುರಿಗಳ ಮೇಲೆ ದಾಳಿಯಾಗಿಲ್ಲ. ಕೇವಲ ಗುರುತಿಸಲಾದ ಭಯೋತ್ಪಾದಕ ಶಿಬಿರಗಳನ್ನು ಮಾತ್ರ ಗುರಿಯಾಗಿಸಲಾಗಿದೆ,” ಎಂದು ಸ್ಪಷ್ಟಪಡಿಸಿದ್ದಾರೆ.

ಪಾಕಿಸ್ತಾನದ ಖಂಡನೆ

ಪಾಕಿಸ್ತಾನದ ಪ್ರಧಾನಮಂತ್ರಿ ಶೆಹಬಾಜ್ ಶರೀಫ್ ಈ ದಾಳಿಗಳನ್ನು 'ಯುದ್ಧ ಕೃತ್ಯ ಎಂದು ಕರೆದಿದ್ದು, “ಈ ಕೃತ್ಯಕ್ಕೆ ಸೂಕ್ತ ಉತ್ತರ ನೀಡುವ ಸಂಪೂರ್ಣ ಹಕ್ಕು ನಮಗಿದೆ,” ಎಂದು ಎಚ್ಚರಿಕೆ ನೀಡಿದ್ದಾರೆ. ಪಾಕಿಸ್ತಾನದ ವಿದೇಶಾಂಗ ಸಚಿವಾಲಯವು ಭಾರತದ ಕ್ರಮವನ್ನು “ಅಪ್ರಚೋದಿತ ಮತ್ತು ಸಾರ್ವಭೌಮತ್ವದ ಉಲ್ಲಂಘನೆ” ಎಂದು ಖಂಡಿಸಿದೆ.

Read More
Next Story