Lawrence Bishnoi Threat | ʼಬಿಗ್‌ ಬಾಸ್‌ʼಗೆ ಬಾರಬಾರದಿತ್ತುʼ ಎಂದು ಭಾವುಕರಾದ ಸಲ್ಮಾನ್‌ ಖಾನ್‌
x

Lawrence Bishnoi Threat | ʼಬಿಗ್‌ ಬಾಸ್‌ʼಗೆ ಬಾರಬಾರದಿತ್ತುʼ ಎಂದು ಭಾವುಕರಾದ ಸಲ್ಮಾನ್‌ ಖಾನ್‌

ನಾನು ಬಿಗ್ ಬಾಸ್ 18ನೇ ಆವೃತ್ತಿಯಲ್ಲಿ ಸ್ಪರ್ಧಿಗಳ ನಡುವಿನ ಸಣ್ಣಪುಟ್ಟ ಸಣ್ಣ ಜಗಳವನ್ನು ನಿಭಾಯಿಸುತ್ತಿದ್ದೆ. ಆದರೆ, ಈಗ ನನ್ನ ಜೀವನದಲ್ಲೇ ಸಾಕಷ್ಟು ಅನುಭವಿಸುವಂತಾಗಿದೆ ಎಂದು ಸಲ್ಮಾನ್‌ ಖಾನ್‌ ನೋವು ತೋಡಿಕೊಂಡಿದ್ದಾರೆ.


ಮಹಾರಾಷ್ಟ್ರದ ಎನ್‌ಸಿಪಿ ನಾಯಕ ಬಾಬಾ ಸಿದ್ದಿಕ್ ಹತ್ಯೆಯ ನಂತರ ಇದೇ ಮೊದಲ ಬಾರಿಗೆ ನಟ ಸಲ್ಮಾನ್‌ ಖಾನ್‌ ಅವರು ತಮ್ಮ ನಿರೂಪಣೆಯ ಬಾಲಿವುಡ್‌ 18ನೇ ಆವೃತ್ತಿಯ ವಾರಾಂತ್ಯದ ಎಪಿಸೋಡ್‌ನಲ್ಲಿ ಭಾವುಕರಾಗಿ ಮಾತನಾಡಿದ್ದಾರೆ.

ನಾನು ಬಿಗ್ ಬಾಸ್ 18ನೇ ಆವೃತ್ತಿಯಲ್ಲಿ ಸ್ಪರ್ಧಿಗಳ ನಡುವಿನ ಸಣ್ಣಪುಟ್ಟ ಸಣ್ಣ ಜಗಳವನ್ನು ನಿಭಾಯಿಸುತ್ತಿದ್ದೆ. ಆದರೆ, ಈಗ ನನ್ನ ಜೀವನದಲ್ಲೇ ಸಾಕಷ್ಟು ಅನುಭವಿಸುವಂತಾಗಿದೆ ಎಂದು ನೋವು ತೋಡಿಕೊಂಡಿದ್ದಾರೆ.

ಶನಿವಾರ ನಡೆದ ವಾರಂತ್ಯದ ಎಪಿಸೋಡ್‌ ಚಿತ್ರೀಕರಣ ಸಂದರ್ಭದಲ್ಲಿ, ನಾನು ಇಲ್ಲಿ ಬರಲೇಬಾರದಿತ್ತು ಎನ್ನುವ ಭಾವನೆ ಕಾಡುತ್ತಿದೆ. ಆದರೆ, ವ್ಯಕ್ತಿಯೊಬ್ಬ ಯಾವ ಕೆಲಸವನ್ನು ಮಾಡಬೇಕೋ ಆ ಕೆಲಸ ಮಾಡಲೇಬೇಕು. ಬಾಬಾ ಸಿದ್ದಿಕಿ ನಿಧನದಿಂದ ದಿಗ್ಬ್ರಾಂತನಾಗಿದ್ದೇನೆ. ಹಾಗಂತ ಒಪ್ಪಿಕೊಂಡಿರುವ ಕೆಲಸವನ್ನು ಬಿಡಲು ಸಾಧ್ಯವಿಲ್ಲ ಎಂದು ಗದ್ಗದಿತರಾಗಿದ್ದಾರೆ.

ಜನಪ್ರಿಯ ರಿಯಾಲಿಟಿ ಶೋ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದಿರುವ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಮತ್ತೊಂದು ವಿಡಿಯೋ ತುಣಿಕಿನಲ್ಲಿ ನಾನು ಇಲ್ಲಿಗೆ ಬರಲೇಬಾರದಿತ್ತು. ಏಕೆಂದರೆ ನನ್ನ ಪೋಷಕರು ಅನುಭವಿಸುತ್ತಿರುವ ನೋವು ನನಗೆ ತಿಳಿದಿದೆ ಎಂದು ಹೇಳಿದ್ದಾರೆ. ಆದರೆ, ಈ ಎಪಿಸೋಡ್‌ ಚಿತ್ರೀಕರಣ ಬಾಬಾ ಸಿದ್ದಿಕ್ ಹತ್ಯೆಯ ಮೊದಲಾಯಿತೋ, ನಂತರದಲ್ಲೋ ಎಂಬುದು ಖಚಿತವಾಗಿಲ್ಲ.

ಬಾಲಿವುಡ್ ನಟರೊಂದಿಗೆ ಉತ್ತಮ ನಂಟು ಹೊಂದಿದ್ದ ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕ್ ಅವರನ್ನು ಅ. 12 ರಂದು ದುಷ್ಕರ್ಮಿಗಳು ಗುಂಡಿಟ್ಟು ಕೊಂದಿದ್ದರು. ಹತ್ಯೆ ಹೊಣೆಯನ್ನು ಜೈಲಿನಲ್ಲಿರುವ ಪಾತಕಿ ಲಾರೆನ್ಸ್ ಬಿಷ್ಣೋಯ್ ತಂಡ ಹೊತ್ತುಕೊಂಡಿತ್ತು. ಸಲ್ಮಾನ್‌ ಖಾನ್‌ ಜೊತೆ ನಿಕಟ ನಂಟು ಹೊಂದಿರುವುದಕ್ಕೆ ಹತ್ಯೆ ಮಾಡಿದ್ದಾಗಿ ಹೇಳಿತ್ತು.

ಸಲ್ಮಾನ್ ಖಾನ್ ಗೆ ಬೆದರಿಕೆ, ಬಿಗಿ ಭದ್ರತೆ

ಬಾಬಾ ಸಿದ್ದಿಕಿ ನಿಧನಕ್ಕೆ ಸಂತಾಪ ಸೂಚಿಸುವ ಪೋಸ್ಟ್ ಹಾಕದಿದ್ದರೂ ಸಲ್ಮಾನ್‌ ಖಾನ್‌ ಕಳೆದ ಭಾನುವಾರ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಬಾಂದ್ರಾ ನಿವಾಸಕ್ಕೆ ಭೇಟಿ ನೀಡಿದ್ದರು. ಈ ವೇಳೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ ಸದಸ್ಯನೊಬ್ಬ ಮುಂಬೈ ಸಂಚಾರಿ ಪೊಲೀಸರಿಗೆ ಬೆದರಿಕೆ ಸಂದೇಶ ಕಳುಹಿಸಿದ್ದ.

ಸಲ್ಮಾನ್ ಖಾನ್ ಜೀವಂತವಾಗಿರಬೇಕಾದರೆ ಹಾಗೂ ಲಾರೆನ್ಸ್ ಬಿಷ್ಣೋಯ್ ಅವರೊಂದಿಗಿನ ದ್ವೇಷ ಕೊನೆಗೊಳಿಸಲು ಬಯಸಿದರೆ 5 ಕೋಟಿ ರೂ. ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು. ಜೀವ ಬೆದರಿಕೆಯನ್ನು ಲಘುವಾಗಿ ತೆಗೆದುಕೊಳ್ಳಬೇಡಿ, ಸಲ್ಮಾನ್ ಖಾನ್ ಪರಿಸ್ಥಿತಿ ಬಾಬಾ ಸಿದ್ದಿಕಿಗಿಂತಲೂ ಕೆಟ್ಟದಾಗಿರಲಿದೆ ಎಂಬ ಎಚ್ಚರಿಕೆಯನ್ನೂ ನೀಡಲಾಗಿತ್ತು. ಬೆದರಿಕೆ ಸಂದೇಶವನ್ನು ಗಂಭೀರವಾಗಿ ಪರಿಗಣಿಸಿದ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಸಲ್ಮಾನ್‌ ಖಾನ್ ಅವರಿಗೆ ಈ ಹಿಂದೆ ಕೂಡ ಬಿಷ್ಣೋಯ್ ಗ್ಯಾಂಗ್‌ನಿಂದ ಕೊಲೆ ಬೆದರಿಕೆ ಬಂದಿತ್ತು. ಕಳೆದ ಏಪ್ರಿಲ್‌ ತಿಂಗಳಲ್ಲಿ ಬಿಷ್ಣೋಯ್‌ ಗ್ಯಾಂಗ್‌ ಸದಸ್ಯರು ಸಲ್ಮಾನ್‌ ಖಾನ್‌ ಅವರ ಬಾಂದ್ರಾ ಮನೆಯ ಹೊರಗೆ ಗುಂಡು ಹಾರಿಸಿದ್ದರು. ಜೀವ ಬೆದರಿಕೆ ಹಿನ್ನೆಲೆಯಲ್ಲಿ ಸಲ್ಮಾನ್‌ ಖಾನ್‌ ಅವರಿಗೆ ವೈ ಪ್ಲಸ್‌ ಭದ್ರತೆ ಒದಗಿಸಲಾಗಿದೆ.

Read More
Next Story