ಉತ್ತರಪ್ರದೇಶ: ಆಯುಷ್ಮಾನ್ ಭಾರತ್ ನಕಲಿ ಕಾರ್ಡ್ ಹಗರಣ ಬೆಳಕಿಗೆ
x

ಉತ್ತರಪ್ರದೇಶ: ಆಯುಷ್ಮಾನ್ ಭಾರತ್ ನಕಲಿ ಕಾರ್ಡ್ ಹಗರಣ ಬೆಳಕಿಗೆ

ಬೃಹತ್ ದಂಧೆಯ ಭಾಗವಾಗಿ ವಂಚಕರು ಆಯುಷ್ಮಾನ್ ಕಾರ್ಡ್‌ಗಳನ್ನು ಕೇವಲ 1,200-1,500 ರೂ.ಗೆ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.


ಉತ್ತರಪ್ರದೇಶದಲ್ಲಿ ನಕಲಿ ಆಯುಷ್ಮಾನ್ ಭಾರತ್ ಕಾರ್ಡ್‌ಗಳನ್ನು ಸೃಷ್ಟಿಸಿರುವ ಭಾರಿ ಹಗರಣ ಬೆಳಕಿಗೆ ಬಂದಿದೆ.

2018 ರಲ್ಲಿ ಪ್ರಾರಂಭಿಸಿದ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (ಪಿಎಂಜೆಎವೈ ) ಅಡಿಯಲ್ಲಿ ಹಲವು ಆರೋಗ್ಯ ಸೇವೆಗಳನ್ನು ಪಡೆಯಲು ಆಯುಷ್ಮಾನ್ ಭಾರತ್ ಕಾರ್ಡ್‌ಗಳನ್ನು ಬಳಸಲಾಗುತ್ತದೆ.

ಸಾಮಾಜಿಕ ಆರ್ಥಿಕ ಮತ್ತು ಜಾತಿ ಜನಗಣತಿ (ಎಸ್‌ಇಸಿಸಿ) ದತ್ತಾಂಶ 2011 ಮತ್ತು ಕೆಲವು ಔದ್ಯೋಗಿಕ ಮಾನದಂಡಗಳನು ಆಧರಿಸಿ ಆಯ್ಕೆ ಯಾದ ಫಲಾನುಭವಿಗಳು, ದ್ವಿತೀಯ ಮತ್ತು ತೃತೀಯ ಹಂತದ ಆಸ್ಪತ್ರೆಗಳಲ್ಲಿ ವಾರ್ಷಿಕ 5 ಲಕ್ಷ ರೂ.ವರೆಗೆ ವೈದ್ಯಕೀಯ ರಕ್ಷಣೆ ಪಡೆಯುತ್ತಾರೆ. ಯೋಜನೆಗೆ ಕೇಂದ್ರ ಮತ್ತು ರಾಜ್ಯಗಳು 60:40 ಅನುಪಾತದಲ್ಲಿ ಹಣ ನೀಡುತ್ತಿದ್ದು, ಕೇಂದ್ರ ಸರ್ಕಾರವು ಈ ವರ್ಷ ಯೋಜನೆ ಗೆ 7,500 ಕೋಟಿ ರೂ.ಗಳನ್ನು ನಿಗದಿಪಡಿಸಿದೆ.

ನಕಲಿ ಕಾರ್ಡ್‌: ಮೂಲಗಳ ಪ್ರಕಾರ, 1,200 ರಿಂದ 1,500 ರೂ.ಗೆ ನಕಲಿ ಆಯುಷ್ಮಾನ್ ಕಾರ್ಡ್‌ಗಳನ್ನು ಮಾರಾಟ ಮಾಡಲಾಗುತ್ತಿದೆ. ನಕಲಿ ಕಾರ್ಡ್‌ಗಳನ್ನು ಬಳಸಿಕೊಂಡು, ಪಾವತಿ ಮಾಡಲಾಗುತ್ತಿದೆ. ವಂಚನೆಯಲ್ಲಿ ಖಾಸಗಿ ಆಸ್ಪತ್ರೆಗಳು/ನರ್ಸಿಂಗ್ ಹೋಮ್‌ಗಳು ಭಾಗಿಯಾ ಗಿವೆ. ನಕಲಿ ಕಾರ್ಡ್‌ ತಯಾರಿಸುವ ವಂಚಕರು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಶಾಮೀಲಾಗಿ, ಮೊತ್ತ ಪಾವತಿ ಮಾಡುತ್ತಾರೆ ಎಂದು ಮೂಲಗಳು ತಿಳಿಸಿವೆ.

ಮೀರತ್ ಜಿಲ್ಲೆಯಲ್ಲಿ ವಂಚನೆ ಅತಿಯಾಗಿ ಕಂಡುಬರುತ್ತಿದೆ.

ಹಗರಣ ಬೆಳಕಿಗೆ: ನಕಲಿ ಆಯುಷ್ಮಾನ್ ಕಾರ್ಡ್ ಹೇಗೆ ಮಾಡಲಾಗುತ್ತದೆ ಮತ್ತು ಆ ಕಾರ್ಡ್ ಮೂಲಕ ಪಾವತಿ ಪಡೆಯುವ ವಿಧಾನದ ಬಗ್ಗೆ ಜನರು ಚರ್ಚಿಸುತ್ತಿರುವ ಆಡಿಯೋ ಕ್ಲಿಪ್ ಹೊರಬಿದ್ದ ಬಳಿಕ ವಂಚನೆ ಬಯಲಿಗೆ ಬಂದಿದೆ ಎಂದು ಮೂಲಗಳು ತಿಳಿಸಿವೆ. ಆಧಾರ್ ಕಾರ್ಡ್‌ ಬಳಸಿಕೊಂಡು, ನಕಲಿ ಆಯುಷ್ಮಾನ್ ಕಾರ್ಡ್‌ಗಳನ್ನು ಸಿದ್ಧಪಡಿಸಲಾಗಿದೆ ಎಂದು ಆಡಿಯೋ ಕ್ಲಿಪ್ ಹೇಳಿದೆ. ಒಂದೇ ಹೆಸರಿನ ವ್ಯಕ್ತಿಗಳ ಆಧಾ ರ್ ಕಾರ್ಡ್‌ ಬಳಸಿಕೊಂಡು, ಆಯುಷ್ಮಾನ್ ಕಾರ್ಡ್‌ ಪಡೆದ ಉದಾಹರಣೆಯಿದೆ.

ದಂಧೆಯಲ್ಲಿ ಖಾಸಗಿ ಆಸ್ಪತ್ರೆಗಳು, ನರ್ಸಿಂಗ್ ಹೋಂಗಳೂ ಶಾಮೀಲಾಗಿವೆ. ಸರ್ಕಾರದಿಂದ ಪಾವತಿ ಪಡೆಯಲು ಅವರು ನಕಲಿ ಬಿಲ್‌ಗಳನ್ನು ಸೃಷ್ಟಿಸುತ್ತಾರೆ ಎಂದು ಮೂಲಗಳು ತಿಳಿಸಿವೆ. ಆಯುಷ್ಮಾನ್ ಕಾರ್ಡ್‌ ಪಡೆಯಲು ಅರ್ಜಿ ಸಲ್ಲಿಸಿದ ಕೆಲವರು ಈಗಾಗಲೇ ತಮ್ಮ ಹೆಸರಿನಲ್ಲಿ ಕಾರ್ಡ್‌ ಇರುವುದನ್ನು ಹಾಗೂ ಅವು ಬಳಕೆ ಯಾಗುತ್ತಿರುವುದನ್ನು ನೋಡಿರುವ ಆಶ್ಚರ್ಯಚಕಿತರಾದ ಪ್ರಕರಣಗಳೂ ಇವೆ.

ಕಾರ್ಡ್‌ ಪಡೆಯವುದು ಹೇಗೆ?: ಜನ ಸೇವಾ ಕೇಂದ್ರಕ್ಕೆ ಹೋಗಿ, 2011 ರ ಜನಗಣತಿ ಪಟ್ಟಿಯಲ್ಲಿ ಹೆಸರು ಇದೆಯೇ ಎಂದು ಪರಿಶೀಲಿಸಬೇಕು. ಹೆಸರು, ವಿಳಾಸ, ತಂದೆ ಅಥವಾ ಗಂಡನ ಹೆಸರು ಸರಿಯಾಗಿದೆ ಎಂದು ಖಚಿತಪಡಿಸಿದರೆ, ಆಯುಷ್ಮಾನ್ ಕಾರ್ಡ್‌ ಪಡೆದುಕೊಳ್ಳಬಹುದು. ಕಾರ್ಡ್ ಪಡೆಯಲು ಬಯೋಮೆಟ್ರಿಕ್ ಪರಿಶೀಲನೆಗೆ ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿ ಅಗತ್ಯ. ಅಂತ್ಯೋದಯ ಪಡಿತರ ಚೀಟಿ ಹೊಂದಿರುವವರು, ಕೂಲಿ ಕಾರ್ಮಿಕರು, ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರು, ಆದಿವಾಸಿಗಳು, ಗ್ರಾಮೀಣ ಮತ್ತು ನಗರ ಪ್ರದೇಶಗಳ ಕಡಿಮೆ ಆದಾಯದ ಗುಂಪುಗಳವರು.

Read More
Next Story