Kolkata rape-murder: ಸಿಬಿಐ ದೂಷಿಸಿದ ಟಿಎಂಸಿ
x

Kolkata rape-murder: ಸಿಬಿಐ ದೂಷಿಸಿದ ಟಿಎಂಸಿ

ಟಿಎಂಸಿ ರಾಜ್ಯಸಭೆ ಸದಸ್ಯೆ ಸಾಗರಿಕಾ ಘೋಷ್ ಅವರು,ʻಈ ಪ್ರಕರಣವನ್ನು ಹೂತುಹಾಕಲು ಮತ್ತು ಸತ್ಯವನ್ನು ಮರೆಮಾಚಲು ತಮ್ಮ ಪಕ್ಷ ಬಿಡುವುದಿಲ್ಲ. ಸಿಬಿಐ ಆದಷ್ಟು ಬೇಗ ಪತ್ರಿಕಾಗೋಷ್ಠಿ ನಡೆಸಬೇಕು,ʼ ಎಂದು ಒತ್ತಾಯಿಸಿದರು.


ವೈದ್ಯೆಯ ಅತ್ಯಾಚಾರ-ಹತ್ಯೆ ಪ್ರಕರಣದಲ್ಲಿ ಸಾರ್ವತ್ರಿಕ ಖಂಡನೆಗೆ ಒಳಗಾಗಿರುವ ಟಿಎಂಸಿ ಸರ್ಕಾರ, ʻಐದು ದಿನಗಳ ಹಿಂದೆ ಸಿಬಿಐಗೆ ಹಸ್ತಾಂತರಿಸಿದ್ದರೂ, ಪ್ರಕರಣದ ತನಿಖೆಯಲ್ಲಿ ಯಾವುದೇ ಪ್ರಗತಿ ಆಗಿಲ್ಲ,ʼ ಎಂದು ಕೇಂದ್ರ ಏಜೆನ್ಸಿಯನ್ನುಟೀಕಿಸಿದೆ.

ʻಆಗಸ್ಟ್ 14 ರಂದು ಆರ್‌.ಜಿ. ಕರ್ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಲಾಯಿತು. ಐದು ದಿನಗಳಾದರೂ, ಸಿಬಿಐನಿಂದ ಒಂದೇ ಒಂದು ಮಾಹಿತಿ ಬಂದಿಲ್ಲ. ಕೋಲ್ಕತ್ತಾ ಪೊಲೀಸರು ಏಕೈಕ ಆರೋಪಿಯನ್ನು ಈಗಾಗಲೇ ಬಂಧಿಸಿದ್ದಾರೆ. ಕಳೆದ ಐದು ದಿನಗಳಿಂದ ಸಿಬಿಐ ಯಾವುದೇ ಶಂಕಿತರನ್ನು ವಿಚಾರಣೆಗೆ ಕರೆದಿಲ್ಲ. ಇದಲ್ಲದೆ, ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹರಡುತ್ತಿರುವ ಹಲವು ವದಂತಿಗಳಿಗೆ ಪ್ರತಿಉತ್ತರ ನೀಡಲು ಕೇಂದ್ರೀಯ ಸಂಸ್ಥೆ ಪ್ರಯತ್ನಿಸಲಿಲ್ಲ,ʼ ಎಂದು ರಾಜ್ಯಸಭೆ ಸದಸ್ಯೆ ಸಾಗರಿಕಾ ಘೋಸ್ ವಿಡಿಯೋ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವೈದ್ಯರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತನಿಖೆಯನ್ನು ಮುಗಿಸಿ ಅಪರಾಧಿಗಳನ್ನು ಗಲ್ಲಿಗೇರಿಸುವಂತೆ ಸಿಬಿಐಗೆ ಭಾನುವಾರದವರೆಗೆ ಗಡುವು ನೀಡಿದ್ದರು.

ಗಡುವು ಮುಗಿದಿರುವುದರಿಂದ, ʻಪ್ರಕರಣವನ್ನು ಸಮಾಧಿ ಮಾಡಲು ಸಿಬಿಐ ಪ್ರಯತ್ನಿಸುತ್ತಿದೆ,ʼ ಎಂದು ಟಿಎಂಸಿ ದೂರಿದೆ.

ʻಸಿಬಿಐ ಏನು ಮಾಡುತ್ತಿದೆ? ಏಜೆನ್ಸಿಯು ಬಿಜೆಪಿಯು ರಾಜ್ಯ ಸರ್ಕಾರವನ್ನು ಗುರಿಯಾಗಿಸಲು ಮತ್ತು ಸುಳ್ಳು ಕಥೆಯನ್ನು ಹರಡಲು ಅವಕಾಶ ಮಾಡಿಕೊಡುತ್ತಿರುವಂತೆ ತೋರುತ್ತಿದೆ. ಯಾವುದೇ ವಿರೋಧ ಪಕ್ಷ ಸಿಬಿಐಯನ್ನು ಪ್ರಶ್ನಿಸುತ್ತಿಲ್ಲ. ಪ್ರಕರಣದಲ್ಲಿ ನ್ಯಾಯ ಒದಗಿಸುವುದು ಆದ್ಯತೆ. ಸಿಬಿಐ ಪ್ರಕರಣವನ್ನು ಹೂತು ಹಾಕಲು ಯತ್ನಿಸುತ್ತಿದೆಯೇ? ಐದು ದಿನಗಳ ಅವರ ನಿಷ್ಕ್ರಿಯತೆ ಏನು ವಿವರಿಸುತ್ತದೆ?,ʼ ಎಂದು ಸಂಸದೆ ಪ್ರಶ್ನಿಸಿದರು.

ʻಮಾಧ್ಯಮಗಳು ಐದು ದಿನಗಳಲ್ಲಿ ಸಿಬಿಐಗೆ ಯಾವುದೇ ಪ್ರಶ್ನೆ ಏಕೆ ಕೇಳಲಿಲ್ಲ? ಪ್ರಕರಣವನ್ನು ಹೂತುಹಾಕಲು ಮತ್ತು ಸತ್ಯವನ್ನು ಮರೆಮಾಚಲು ತಮ್ಮ ಪಕ್ಷವು ಬಿಡುವುದಿಲ್ಲ. ಸಿಬಿಐ ಆದಷ್ಟು ಬೇಗ ಪತ್ರಿಕಾಗೋಷ್ಠಿ ನಡೆಸಬೇಕು,ʼ ಎಂದು ಘೋಷ್‌ ಹೇಳಿದರು.

Read More
Next Story