Kolkata rape-murder| ವೈದ್ಯೆ ದೇಹದಲ್ಲಿ 151ಮಿಗ್ರಾಂ ವೀರ್ಯ ಇರಲಿಲ್ಲ- ಸಿಜೆಐ
x

Kolkata rape-murder| ವೈದ್ಯೆ ದೇಹದಲ್ಲಿ 151ಮಿಗ್ರಾಂ ವೀರ್ಯ ಇರಲಿಲ್ಲ- ಸಿಜೆಐ

ಕೋಲ್ಕತ್ತಾ ಪೊಲೀಸ್ ಆಯುಕ್ತ ವಿನೀತ್ ಗೋಯಲ್‌ ಅವರು ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಯ ಸುತ್ತಲಿನ ʻವದಂತಿʼ ಮತ್ತು ʻನಿರೂಪಣೆʼಗಳನ್ನು ನಿರ್ಲಕ್ಷಿಸುವಂತೆ ಈ ಹಿಂದೆ ಸಾರ್ವಜನಿಕರನ್ನು ಒತ್ತಾಯಿಸಿದ್ದರು.


ಅತ್ಯಾಚಾರ ಮತ್ತು ಹತ್ಯೆಗೀಡಾದ ವೈದ್ಯೆ ದೇಹದಲ್ಲಿ 151 ಮಿಗ್ರಾಂ ವೀರ್ಯ ಇತ್ತು ಎಂಬ ವಾದವನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಗುರುವಾರ (ಆಗಸ್ಟ್ 22) ತಳ್ಳಿಹಾಕಿದರು.

ʻನ್ಯಾಯಾಲಯದ ವಾದಗಳಿಗೆ ಸಾಮಾಜಿಕ ಮಾಧ್ಯಮಗಳನ್ನು ಅವಲಂಬಿಸಬಾರದು,ʼ ಎಂದು ಸಿಬಿಐ ಪ್ರತಿನಿಧಿಸುವ ವಕೀಲರಿಗೆ ಎಚ್ಚರಿಸಿದರು. ವಿಚಾರಣೆ ವೇಳೆ ವಕೀಲರೊಬ್ಬರು,ʻಪಿಎಂಆರ್‌ (ಪೋಸ್ಟ್ ಮಾರ್ಟಂ ವರದಿ) 151 ಮಿಗ್ರಾಂ ವೀರ್ಯದ ಬಗ್ಗೆ ಹೇಳುತ್ತದೆ. ಅದು ಮಿಲೀ ಆಗಬೇಕು,ʼ ಎಂದರು.

ಪ್ರತಿಕ್ರಿಯಿಸಿದ ಸಿಜೆಐ, ʻವಾದ ಮಂಡಿಸಲು ಸಾಮಾಜಿಕ ಜಾಲತಾಣವನ್ನು ಬಳಸಬೇಡಿ. ನಮ್ಮ ಮುಂದೆ ನಿರ್ದಿಷ್ಟವಾದ ಮರಣೋತ್ತರ ಪರೀಕ್ಷೆ ವರದಿಯಿದೆ. ಆ 151 ಮಿಗ್ರಾಂ ಏನನ್ನು ಸೂಚಿಸುತ್ತದೆ ಎಂದು ನಮಗೆ ತಿಳಿದಿದೆ. ಮಾಧ್ಯಮಗಳಲ್ಲಿ ಇರುವುದರ ಆಧಾರದ ಮೇಲೆ ವಾದ ಮಾಡುವುದು ಬೇಡ,ʼ ಎಂದರು.

ಬಲಿಪಶುವಿನ ದೇಹದಲ್ಲಿ 151 ಮಿಗ್ರಾಂ ವೀರ್ಯ ಪತ್ತೆಯಾಗಿದೆ ಎಂದು ಹಲವು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಮತ್ತು ಕೆಲವು ಮಾಧ್ಯಮ ವರದಿಗಳು ಈ ಹಿಂದೆ ಹೇಳಿದ್ದವು.

ಕೋಲ್ಕತ್ತಾ ಪೊಲೀಸ್ ಕಮಿಷನರ್ ವಿನೀತ್ ಗೋಯಲ್ ಅವರು ಈ ಹಿಂದೆ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆ ಕುರಿತ ʻವದಂತಿʼ ಮತ್ತು ʻನಿರೂಪಣೆʼಗಳನ್ನುನಿರ್ಲಕ್ಷಿಸಬೇಕೆಂದು ಸಾರ್ವಜನಿಕರನ್ನು ಒತ್ತಾಯಿಸಿದ್ದರು. ಸಿಬಿಐ ತನಿಖೆಯನ್ನು ನಂಬಬೇಕು ಎಂದಿದ್ದರು. ʻಈಗಲೂ ವದಂತಿ ಹರಡುವಿಕೆ ಏಕೆ ನಡೆಯುತ್ತಿದೆ? ವೈದ್ಯೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕುಟುಂಬಕ್ಕೆ ತಿಳಿಸಿದ್ದು ತಪ್ಪು. ಆಕೆಯ ದೇಹದಲ್ಲಿ 150 ಮಿಗ್ರಾಂ ವೀರ್ಯ ಪತ್ತೆಯಾಗಿದ್ದು ಸುಳ್ಳು,ʼ ಎಂದು ಹೇಳಿದ್ದರು.

Read More
Next Story