Kolkata rape-murder|ವಿದ್ಯಾರ್ಥಿ ಮುಖಂಡನಿಗೆ ಜಾಮೀನು ಸಮರ್ಪಕ: ಸುಪ್ರೀಂ
x

Kolkata rape-murder|ವಿದ್ಯಾರ್ಥಿ ಮುಖಂಡನಿಗೆ ಜಾಮೀನು ಸಮರ್ಪಕ: ಸುಪ್ರೀಂ


ವಿದ್ಯಾರ್ಥಿ ಮುಖಂಡ ಸಯಾನ್‌ ಲಾಹಿರಿ ಅವರಿಗೆ ಕೋಲ್ಕತ್ತಾ ಹೈಕೋರ್ಟ್‌ ನೀಡಿದ ಜಾಮೀನು ಪ್ರಶ್ನಿಸಿ, ಪಶ್ಚಿಮ ಬಂಗಾಳ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ವಜಾಗೊಳಿಸಿದೆ.

ಆರ್‌.ಜಿ. ಕರ್ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜಿನಲ್ಲಿ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಯನ್ನು ವಿರೋಧಿಸಿ ಆಗಸ್ಟ್ 27 ರಂದು ರಾಜ್ಯ ಸಚಿವಾಲಯಕ್ಕೆ ಮೆರವಣಿಗೆ ನಡೆಸಲಾಗಿತ್ತು. ಪ್ರತಿಭಟನೆಯ ಸಂಘಟಕರಲ್ಲಿ ಒಬ್ಬರಿಗೆ ಕೋಲ್ಕತ್ತಾ ಹೈ ಕೋರ್ಟ್‌ ಜಾಮೀನು ಮಂಜೂರು ಮಾಡಿತ್ತು.

ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರ ಪೀಠವು, ಜಾಮೀನು ನೀಡಿಕೆ ಸಮರ್ಪಕವಾಗಿದೆ ಎಂದು ಹೇಳಿದೆ.

ಪಶ್ಚಿಮ ಬಂಗಾ ಛಾತ್ರ ಸಮಾಜದ ಮುಖಂಡ ಸಯಾನ್ ಲಾಹಿರಿಗೆ ಕಲ್ಕತ್ತಾ ಹೈಕೋರ್ಟ್ ಶುಕ್ರವಾರ ಜಾಮೀನು ಮಂಜೂರು ಮಾಡಿದೆ. ಆಗಸ್ಟ್ 27 ರ 'ನಬನ್ನಾ ಅಭಿಯಾನ್' ಗೆ ಕರೆ ನೀಡಿದ ಎರಡು ಸಂಘಟನೆಗಳಲ್ಲಿ ಪಶ್ಚಿಮ ಬಂಗಾ ಛಾತ್ರ ಸಮಾಜವೂ ಒಂದು. ಲಾಹಿರಿ ಅವರನ್ನು ಆಗಸ್ಟ್ 27 ರಂದು ಸಂಜೆ ಬಂಧಿಸಲಾಯಿತು. ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ, ಸಾರ್ವಜನಿಕ ಮತ್ತು ಖಾಸಗಿ ಆಸ್ತಿ ನಾಶವಾಯಿತು. ಪೊಲೀಸ್ ಅಧಿಕಾರಿಗಳ ಮೇಲೆ ಹಕ್ಕೆ ನಡೆಯಿತು.

ಲಾಹಿರಿ ಅವರ ತಾಯಿ ಅಂಜಲಿ ಅವರ ಮನವಿ ಮೇರೆಗೆ ಕೋಲ್ಕತ್ತಾ ಹೈಕೋರ್ಟ್ ಶುಕ್ರವಾರ ಮಧ್ಯಾಹ್ನ 2 ಗಂಟೆಯೊಳಗೆ ಅವರನ್ನು ಪೊಲೀಸ್ ಕಸ್ಟಡಿಯಿಂದ ಬಿಡುಗಡೆ ಮಾಡುವಂತೆ ಆದೇಶಿಸಿತು. ಅದೇ ದಿನ ಅವರರನ್ನು ಬಿಡುಗಡೆ ಮಾಡಲಾಯಿತು.



Read More
Next Story