ಪಂಜಾಬ್ ಕಿಂಗ್ಸ್‌ ‌ ಮಣಿಸಿದ ʻರಾಜʼ ಕೊಹ್ಲಿ
x

ಪಂಜಾಬ್ ಕಿಂಗ್ಸ್‌ ‌ ಮಣಿಸಿದ ʻರಾಜʼ ಕೊಹ್ಲಿ


ಬೆಂಗಳೂರು, ಮಾ.25- ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪಂಜಾಬ್‌ ಕಿಂಗ್ಸ್‌ ವಿರುದ್ಧ 4 ವಿಕೆಟ್‌ ಗಳಿಂದ ಜಯ ಸಾಧಿಸಿದೆ. ವಿರಾಟ್ ಕೊಹ್ಲಿಅವರ 77 ರನ್‌ ಜಯದಲ್ಲಿ ಪ್ರಮುಖ ಪಾತ್ರ ವಹಿಸಿತು.

177 ರನ್‌ಗಳ ಗುರಿ ಬೃಹತ್ ಆಗಿರಲಿಲ್ಲ. ಆದರೆ, ಪಿಚ್‌ ನ ಸ್ವಭಾವದಿಂದಾಗಿ ನಿಖರವಾದ ಕಾರ್ಯತಂತ್ರ ಅಗತ್ಯವಿತ್ತು. ಕೊಹ್ಲಿ (77, 49 ಬಾ‌ಲ್‌, 11x4, 2x6) ಅವರು ಐಪಿಎಲ್‌ ಋತುವಿನಲ್ಲಿ ಆರ್‌ಸಿಬಿ ಮೊದಲ ಜಯ ದಾಖಲಿಸಲು ನೆರವಾದರು. ತಂಡ ನಾಲ್ಕು ಎಸೆತ ಬಾಕಿ ಇರುವಂತೆಯೇ ಆರು ವಿಕೆಟ್‌ಗೆ 178 ರನ್ ಗಳಿಸಿ, ವಿಜಯದ ಗೆರೆ ದಾಟಿತು. ದಿನೇಶ್ ಕಾರ್ತಿಕ್ (10 ಎಸೆತ, ಔಟಾಗದೆ 28) ಮತ್ತು ಮಹಿಪಾಲ್ ಲೊಮ್ರೋರ್ (17 ನಾಟೌಟ್, 8 ಎಸೆತ) ಜಾಣ್ಮೆಯ ಆಟದಿಂದ ರಾಯಲ್ ಚಾಲೆಂಜರ್ಸ್‌ ನ್ನು ವಿಜಯದೆಡೆಗೆ ಕೊಂಡೊಯ್ಯ್ಡದರು. ತಂಡದ ಗೆಲುವಿಗೆ 24 ಎಸೆತಗಳಲ್ಲಿ 47 ರನ್ ಅಗತ್ಯವಿತ್ತು. ತಂಡದ ಫಿನಿಶರ್ ಕಾರ್ತಿಕ್, ಮೈಕ್ರೊಫೋನ್‌ ಮತ್ತು ಬ್ಯಾಟ್‌ ಎರಡನ್ನೂ ಸಮರ್ಥವಾಗಿ ನಿರ್ವಹಿಸಬಲ್ಲೆ ಎಂದು ತೋರಿಸಿ ಕೊಟ್ಟರು. ಹರ್ಷಲ್ ಪಟೇಲ್ ಮತ್ತು ಅರ್ಶ್‌ದೀಪ್ ಸಿಂಗ್ ಅವರನ್ನು ಸುಲಭವಾಗಿ ಎದುರಿಸಿದರು.

ಮಹಾರಾಜ ಕೊಹ್ಲಿ: ಆದರೆ, ಕೊಹ್ಲಿ ಇನ್ನಿಂಗ್ಸ್ ಕಳಂಕರಹಿತವಾಗಿರಲಿಲ್ಲ; ಮೊದಲ ಎಸೆತದಲ್ಲಿ ಮತ್ತು ಆನಂತರ 33 ರನ್‌ ಮಾಡಿದ್ದಾಗ ಜೀವದಾನ ಪಡೆದರು. ಎರಡೂ ಬಾರಿ ವೇಗಿ ಸ್ಯಾಮ್ ಕುರ್ರನ್ ವಿಕೆಟ್‌ ವಂಚಿತರಾದರು.‌ ಆರಂಭಿಕ ಓವರ್‌ನಲ್ಲಿ 16 ರನ್‌ ಸೇರಿಸಿದ ಅವರು, ಮೊದಲ ಕ್ಯಾಚ್‌ ಕ್ಷೇತ್ರರಕ್ಷಕನ ಕೈಯಿಂದ ಜಾರಿದ ಬಳಿಕ ಕುರ್ರನ್‌ ಅವರ ಮೂರು ಎಸೆತಗಳನ್ನು ಬೌಂಡರಿಗೆ ಅಟ್ಟಿದರು. ಕೊಹ್ಲಿ ಏಕಾಂಗಿಯಾಗಿ ಕಿಂಗ್ಸ್ ದಾಳಿಯನ್ನು ಛಿದ್ರಗೊಳಿಸಿದರು. ಉತ್ತಮವಾಗಿ ಬೌಲ್‌ ಮಾಡುತ್ತಿದ್ದ ರಬಾಡ( 2/23) ಎಸೆದ ಕಡಿಮೆ ಉದ್ದದ ಚೆಂಡು ಸುಲಭವಾಗಿ ಬೌಂಡರಿ ಸೇರಿತು.

ಲೆಗ್ ಸ್ಪಿನ್ನರ್ ರಾಹುಲ್ ಚಾಹರ್ ಅವರ ಚೆಂಡೆಸೆತ ಕೂಡ ಕೊಹ್ಲಿ ಅವರ ಪ್ರತಿಭೆಯ ಸ್ಪರ್ಶವನ್ನು ಹೊಂದಿದೆ. ರಬಾಡಾ ಅವರ ಬೌಲಿಂಗ್‌ ಎದುರು ಆರ್‌ಸಿಬಿ ಬ್ಯಾಟರ್‌ಗಳಾದ ಕ್ಯಾಮೆರಾನ್ ಗ್ರೀನ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಹೆಣಗಾಡಿದರು. ಪ್ರಭಾವಶಾಲಿ ಸ್ಪಿನ್ನರ್ ಹರ್‌ಪ್ರೀತ್ ಬ್ರಾರ್ (2/13) ವಿರುದ್ಧ ಅವರ ಆಟ ನಡೆಯಲಿಲ್ಲ. ಮೂರನೇ ವಿಕೆಟ್‌ಗೆ ಕೊಹ್ಲಿ ಮತ್ತು ರಜತ್ ಪಾಟಿದಾರ್ (18, 18 ಚೆಂಡು) 43 ರನ್‌ ಸೇರಿಸಿದರು. ಕೊಹ್ಲಿ ಹೊಡೆದ ಹರ್ಷಲ್ ಪಟೇಲ್ ಅವರ ನಿಧಾನಗತಿಯ ಚೆಂಡು ಥರ್ಡ್ ಮ್ಯಾನ್‌ ನಲ್ಲಿ ಬ್ರಾರ್‌ ಕೈಸೇರಿತು.

ಅಭದ್ರ ಆರಂಭ: ನಾಯಕ ಶಿಖರ್ ಧವನ್ ಅವರ ಆಟದ ಮೂಲಕ ಪಂಜಾಬ್ ಕಿಂಗ್ಸ್ 6 ವಿಕೆಟ್‌ಗೆ 176 ರನ್‌ ಸೇರಿಸಿತು. ಟಾಸ್‌ ಬಳಿಕ ಆರ್‌ಸಿಬಿ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಧವನ್ (45, 37 ಚೆಂಡು), ಜಿತೇಶ್ ಶರ್ಮಾ (27, 20 ಚೆಂಡು) ಮತ್ತು ಪ್ರಭ್ ಸಿಮ್ರಾನ್ ಸಿಂಗ್ (25, 17 ಚೆಂಡು) ಉತ್ತಮ ಕೊಡುಗೆ ನೀಡಿದರು.

ಆತಿಥೇಯರ ಪರ ಮೊಹಮ್ಮದ್ ಸಿರಾಜ್ ಮತ್ತು ಮ್ಯಾಕ್ಸ್ ವೆಲ್ ತಲಾ ಎರಡು ವಿಕೆಟ್ ಪಡೆದರು. ಜಾನಿ ಬೈರ್‌ಸ್ಟೋವ್ ಆರಂಭದಲ್ಲೇ ಹೊರನಡೆದಿದ್ದರಿಂದ, ಕಿಂಗ್ಸ್ ತಂಡದ ಆರಂಭ ದೃಢವಾಗಿರಲಿಲ್ಲ.‌ 17 ಕ್ಕೆ ಒಂದು ವಿಕೆಟ್‌ ಕಳೆದುಕೊಂಡಿತು. ಧವನ್ ಮತ್ತು ಪ್ರಭ್ ಸಿಮ್ರಾನ್ 38 ಎಸೆತಗಳಲ್ಲಿ 55 ರನ್ ಗಳಿಸಿದರು.

ಎಡಗೈ ಸ್ಪಿನ್ನರ್ ಮಯಾಂಕ್ ದಾಗರ್‌ ಅವರ ಸಡಿಲ ಎಸೆತವನ್ನು ಲಾಂಗ್ ಆನ್‌ನಲ್ಲಿ ಸಿಕ್ಸರ್‌ಗೆ ಎತ್ತಿದರು. ಆರ್‌ಸಿಬಿ ಬೌಲರ್‌ಗಳು, ವಿಶೇಷವಾಗಿ ಎಡಗೈ ಸೀಮರ್ ಯಶ್ ದಯಾಳ್ (1/23, ಉತ್ತಮ ಲೆಂಗ್ತ್‌ನ ಎಸೆತಗಳಿಂದ ಬ್ಯಾಟರ್‌ ಗಳನ್ನು ಕಟ್ಟಿಹಾಕಿದರು. ಪ್ರಭ್ ಸಿಮ್ರಾನ್‌, ಗ್ರೀನ್‌ ಅವರ ಚೆಂಡನ್ನು ಸಿಕ್ಸರ್‌ ಎತ್ತಿದರು. ಆದರೆ, ಮ್ಯಾಕ್ಸ್‌ವೆಲ್ ಅವರ ಚೆಂಡನ್ನುತಳ್ಳಲು ಪ್ರಯತ್ನಿಸಿದಾಗ ಚೆಂಡು ಅನುಜ್ ರಾವತ್ ಕೈಸೇರಿತು. ಕಿಂಗ್ಸ್ 12.1 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ಗೆ 98 ರನ್‌ ಗಳಿಸಿತ್ತು. ಧವನ್ ಮ್ಯಾಕ್ಸ್‌ವೆಲ್ ಅವರನ್ನು‌ ಬೌಂಡರಿಗಟ್ಟುವ ಪ್ರಯತ್ನದಲ್ಲಿ ಕೊಹ್ಲಿ ಕೈಗೆ ಚೆಂಡು ಒಪ್ಪಿಸಿದರು. ಜಿತೇಶ್‌ ಅವರು ಎರಡು ಸಿಕ್ಸರ್‌ ಹೊಡೆದರಲ್ಲದೆ, ಕುರ್ರನ್‌ ಅವರೊಂದಿಗೆ 34 ಎಸೆತಗಳಲ್ಲಿ ಐದನೇ ವಿಕೆಟ್‌ಗೆ 52 ರನ್ ಸೇರಿಸಿದರು.

Read More
Next Story