ನಿರ್ಭೀತರಾಗಿ ಕಾರ್ಯ ನಿರ್ವಹಿಸುವಂತೆ ಚುನಾವಣಾಧಿಕಾರಿಗಳಿಗೆ ಖರ್ಗೆ ಪತ್ರ
x

ನಿರ್ಭೀತರಾಗಿ ಕಾರ್ಯ ನಿರ್ವಹಿಸುವಂತೆ ಚುನಾವಣಾಧಿಕಾರಿಗಳಿಗೆ ಖರ್ಗೆ ಪತ್ರ


ಚುನ“ಯಾರಿಂದಲೂ ಭಯಪಡಬೇಡಿ. ಯಾವುದೇ ಅಸಂವಿಧಾನಿಕ ಮಾರ್ಗಗಳಿಗೆ ತಲೆಬಾಗಬೇಡಿ. ಯಾರಿಗೂ ಹೆದರಬೇಡಿ ಮತ್ತು ಈ ಎಣಿಕೆಯ ದಿನದಂದು ಅರ್ಹತೆಯ ಆಧಾರದ ಮೇಲೆ ನಿಮ್ಮ ಕರ್ತವ್ಯಗಳನ್ನು ನಿರ್ವಹಿಸಿ, ”ಎಂದು ಕಾಂಗ್ರೆಸ್‌ ಅಧ್ಯಕ್ಷ ಎಂ. ಮಲ್ಲಿಕಾರ್ಜುನ ಖರ್ಗೆ ಅವರು ಚುನಾವಣಾ ನಿರತ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

ಖರ್ಗೆ ಅವರು ಸೋಮವಾರ (ಜೂನ್ 3) ಲೋಕಸಭೆ ಚುನಾವಣೆಯ ಮತ ಎಣಿಕೆಯ ಮುನ್ನಾದಿನದಂದು ದೇಶದ ಚುನಾವಣಾ ಕಾರ್ಯದಲ್ಲಿ ಭಾಗಿಯಾಗಿರುವ ಅಧಿಕಾರಿ ವರ್ಗಕ್ಕೆ ಈ ಪತ್ರ ಬರೆದಿದ್ದಾರೆ. ಅಧಿಕಾರಿಗಳು ಸಂವಿಧಾನಕ್ಕೆ ಬದ್ಧರಾಗಿ ಮತ್ತು ಮತ್ತು ಭಯರಹಿತವಾಗಿ ದೇಶದ ಹಿತದೃಷ್ಟಿಯಿಂದ ಸೇವೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಇದಕ್ಕೂ ಮುನ್ನ ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಅವರು, ಕೇಂದ್ರ ಸಚಿವ ಅಮಿತ್ ಶಾ ಅವರು ಮತ ಎಣಿಕೆಗೆ ಮುನ್ನ ಪ್ರಭಾವ ಬೀರಲು ದೇಶಾದ್ಯಂತ 150 ಜಿಲ್ಲಾಧಿಕಾರಿಗಳಿಗೆ ದೂರವಾಣಿ ಕರೆ ಮಾಡಿದ್ದಾರೆ ಎಂದು ಆರೋಪಿಸಿದ್ದರು - ಈ ಆರೋಪವನ್ನು ಚುನಾವಣಾ ಆಯೋಗ (ಇಸಿ) ತಿರಸ್ಕರಿಸಿದೆ.

Read More
Next Story