Hema Committee fallout| ನಿವಿನ್ ಪೌಲಿ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ
x

Hema Committee fallout| ನಿವಿನ್ ಪೌಲಿ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ


ನಟ ನಿವಿನ್ ಪೌಲಿ ವಿರುದ್ಧ ನೆರ್ಯಮಂಗಲದ ಮಹಿಳೆಯೊಬ್ಬರು ಲೈಂಗಿಕ ಕಿರುಕುಳ ದೂರು ದಾಖಲಿಸಿದ್ದಾರೆ. ಚಲನಚಿತ್ರದಲ್ಲಿ ಅವಕಾಶ ಕೊಡಿಸುವ ನೆಪದಲ್ಲಿ ವಿದೇಶದಲ್ಲಿ ನನ್ನ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂದು ಹೇಳಿದ್ದಾರೆ.

ಎರ್ನಾಕುಲಂ ಪೊಲೀಸರು ಮಂಗಳವಾರ (ಆಗಸ್ಟ್ 3) ಪ್ರಕರಣ ದಾಖಲಿಸಿದ್ದಾರೆ. ಜಾಮೀನುರಹಿತ ಆರೋಪಕ್ಕೆ ಸಂಬಂಧಿಸಿದಂತೆ ಪೌಲಿ ಮತ್ತು ಇತರ ಐವರನ್ನು ಹೆಸರಿಸಿದ್ದಾರೆ.

ಮಹಿಳೆ ಆರಂಭದಲ್ಲಿ ಹೇಮಾ ಸಮಿತಿ ವರದಿ ನಂತರ ಸ್ಥಾಪಿಸಿದ ವಿಶೇಷ ತನಿಖಾ ತಂಡ (ಎಸ್‌ಐಟಿ)ವನ್ನು ಸಂಪರ್ಕಿಸಿದ್ದರು.

ತರಾತುರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ನಿವಿನ್, ಎಲ್ಲ ಆರೋಪಗಳನ್ನು ನಿರಾಕರಿಸಿದರು.ʻನಾನು ಮಹಿಳೆ ಮೇಲೆ ದೌರ್ಜನ್ಯ ಎಸಗಿದ್ದೇನೆ ಎಂಬ ಸುಳ್ಳು ವರದಿಯನ್ನು ನೋಡಿದ್ದೇನೆ. ಇದು ಸಂಪೂರ್ಣ ಸುಳ್ಳು. ಮುಚ್ಚಿಡಲು ಏನೂ ಇಲ್ಲ. ಈ ಆರೋಪಗಳು ಆಧಾರರಹಿತ ಮತ್ತು ಬ್ಲ್ಯಾಕ್‌ಮೇಲ್ ಯೋಜನೆಯ ಭಾಗ ಎಂದು ಭಾವಿಸಿದ್ದೇನೆ,ʼ ಎಂದು ಹೇಳಿದರು.

Read More
Next Story