Kerala mass murder: ಕೇರಳದಲ್ಲೊಂದು ಸಾಮೂಹಿಕ ಹತ್ಯೆ: ಪ್ರಿಯತಮೆ ಸೇರಿ ತನ್ನದೇ ಕುಟುಂಬದ 5 ಸದಸ್ಯರ ಇರಿದು ಕೊಂದ ಯುವಕ
x
AI ರಚಿತ ಚಿತ್ರ.

Kerala mass murder: ಕೇರಳದಲ್ಲೊಂದು ಸಾಮೂಹಿಕ ಹತ್ಯೆ: ಪ್ರಿಯತಮೆ ಸೇರಿ ತನ್ನದೇ ಕುಟುಂಬದ 5 ಸದಸ್ಯರ ಇರಿದು ಕೊಂದ ಯುವಕ

Kerala mass murder : 23 ವರ್ಷದ ಅಫಾನ್ ಕೊಲೆ ಮಾಡಿದ ಆರೋಪಿ ಇರಿತಕ್ಕೆ ಒಳಗಾಗಿರುವ ಆತನ ತಾಯಿ ಶೆಮಿ ಗಂಭೀರವಾಗಿ ಗಾಯಗೊಂಡಿದ್ದು, ತಿರುವನಂತಪುರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.


ಯುವಕನೊಬ್ಬ ತನ್ನ ಪ್ರಿಯತಮೆ, 9ನೇ ತರಗತಿಯಲ್ಲಿ ಕಲಿಯುತ್ತಿದ್ದ ತನ್ನ ತಮ್ಮ, ಅಜ್ಜಿ, ಚಿಕ್ಕಪ್ಪ, ಚಿಕ್ಕಮ್ಮ ಹಾಗೂ ತಾಯಿಗೆ ಚಾಕುವಿನಿಂದ ಇರಿದ ಭಯಾನಕ ಘಟನೆ ಕೇರಳದಲ್ಲಿ ನಡೆದಿದೆ. ಈ ಪೈಕಿ ಯುವಕನ ತಾಯಿ ಬದುಕುಳಿದಿದ್ದು ಇತರ ಎಲ್ಲ 5 ಮಂದಿಯೂ ಮೃತಪಟ್ಟಿದ್ದಾರೆ. ಕೇವಲ 3 ಗಂಟೆಯ ಅವಧಿಯಲ್ಲಿ ಆತ ಈ ದುಷ್ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

23 ವರ್ಷದ ಅಫಾನ್ ಕೊಲೆ ಮಾಡಿದ ಆರೋಪಿ ಇರಿತಕ್ಕೆ ಒಳಗಾಗಿರುವ ಆತನ ತಾಯಿ ಶೆಮಿ ಗಂಭೀರವಾಗಿ ಗಾಯಗೊಂಡಿದ್ದು, ತಿರುವನಂತಪುರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕುಟುಂಬಕ್ಕೆ ಸೇರಿದ 5 ಮಂದಿಯನ್ನು ಕೊಂದ ಬಳಿಕ ಅಫಾನ್ ತಾನೇ ವೆಂಜರಮೂಡು ಪೊಲೀಸ್​ ಠಾಣೆಗೆ ತೆರಳಿ ಶರಣಾಗಿದ್ದಾನೆ. ಪ್ರಿಯತಮೆ ಸೇರಿದಂತೆ ಕುಟುಂಬದ 5 ಮಂದಿಯನ್ನು ಹತ್ಯೆಗೈದಿರುವುದಾಗಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.

ಪೊಲೀಸರು ಸ್ಥಳಕ್ಕೆ ತೆರಳಿದಾಗ 5 ಮಂದಿಯ ಮೃತದೇಹಗಳ ಪತ್ತೆಯಾಗಿವೆ. ಈ ವೇಳೆ ಅಫಾನ್‌ನ ತಾಯಿಯೂ ರಕ್ತದ ಮಡುವಿನಲ್ಲಿ ಬಿದ್ದಿದ್ದು, ಅವರನ್ನು ಪೊಲೀಸರು ವ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಕೊಲೆಗೆ ಕಾರಣ ನಿಗೂಢ ?

ಅಫಾನ್‍ನ ಕುಟುಂಬ ತೀವ್ರ ಹಣಕಾಸಿನ ಸಮಸ್ಯೆಗೆ ಸಿಲುಕಿತ್ತು. ಅಫಾನ್ ವಿಪರೀತ ಸಾಲ ಮಾಡಿಕೊಂಡಿದ್ದ. ಜೊತೆಗೆ ಹೆಚ್ಚಿನ ಹಣಕ್ಕಾಗಿ ಆತ ತಂದೆಯನ್ನು ಪೀಡಿಸತೊಡಗಿದ್ದ. ಆದರೆ ಅವರು ಹಣ ಕೊಡಲು ನಿರಾಕರಿಸಿದ್ದರು. ರೊಚ್ಚಿಗೆದ್ದ ಅಫಾನ್ ಸೋಮವಾರ ಸಂಜೆ ಎಲ್ಲರನ್ನೂ ಕೊಲೆಗೈದಿದ್ದಾನೆ ಎಂದು ಶಂಕಿಸಲಾಗಿದೆ.

ಮತ್ತೊಂದು ಪ್ರಕಾರ, ಫರ್ಜಾನಾ ಎಂಬ ಯುವತಿಯನ್ನು ಅಫಾನ್ ಪ್ರೀತಿಸುತ್ತಿದ್ದ. ಇದಕ್ಕೆ ಮನೆಯವರ ವಿರೋಧವಿತ್ತು. ವಿರೋಧದ ನಡುವೆಯೂ ಆತ ಫರ್ಜಾನಾಳನ್ನು ತನ್ನ ಮನೆಗೆ ಕರೆತಂದಿದ್ದ. ಇದೇ ವಿಷಯಕ್ಕೆ ಮನೆಯವರು ಮತ್ತು ಅಫಾನ್ ನಡುವೆ ವಾಗ್ವಾದ ನಡೆದು ಕೊಲೆ ಮಾಡಿದ್ದಾನೆ. ತನ್ನ ಪ್ರೇಯಸಿ ಫರ್ಜಾನಾಳನ್ನೂ ಕೊಚ್ಚಿ ಕೊಲೆ ಮಾಡಿದ್ದು, ತನ್ನದೇ ಕಿರಿಯ ಸಹೋದರ ಅಫ್ಸಾನ್, ಅಜ್ಜಿ ಸಲ್ಮಾ ಬೀವಿ , ಅಪ್ಪನ ಸಹೋದರ ಲತೀಫ್(ಸಿಆರ್‌ಪಿಎಫ್‌ನ ನಿವೃತ್ತ ಅಧಿಕಾರಿ), ಅವರ ಪತ್ನಿ ಶಾಹಿದಾರನ್ನೂ ಕೊಲೆ ಮಾಡಿದ್ದಾನೆ.

ಒಟ್ಟು 2 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಈ ಕೊಲೆಗಳು ನಡೆದಿವೆ. ಅಫಾನ್​ ತಾನೂ ಇಲಿ ಪಾಷಾಣ ಸೇವಿಸಿರುವುದಾಗಿ ಹೇಳಿಕೊಂಡಿದ್ದಾನೆ. ಕೂಡಲೇ ಆತನನ್ನು ಪೊಲೀಸರು ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ಮಾಡಿಸಿದ್ದಾರೆ. ವಿದೇಶದಲ್ಲಿ ಅಪ್ಪನ ಜೊತೆ ಇದ್ದ ಅಫಾನ್ ಇತ್ತೀಚೆಗಷ್ಟೇ ಭಾರತಕ್ಕೆ ಮರಳಿದ್ದ.

Read More
Next Story