Wayanad Landslide| ಕೇರಳದಲ್ಲಿ ಅತಿ ಹೆಚ್ಚು ಭೂಕುಸಿತ
x

Wayanad Landslide| ಕೇರಳದಲ್ಲಿ ಅತಿ ಹೆಚ್ಚು ಭೂಕುಸಿತ


ಕೇರಳದ ವಯನಾಡ್‌ನಲ್ಲಿ ಮಂಗಳವಾರ (ಜುಲೈ 30) ಭಾರೀ ಮಳೆಯಿಂದ ಉಂಟಾದ ಪ್ರಮುಖ ಭೂಕುಸಿತಗಳಲ್ಲಿ 200 ಜನರು ಸಾವ ನ್ನಪ್ಪಿದ್ದಾರೆ. ನೂರಾರು ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದು, ಹೆಚ್ಚಿನ ಸಾವುನೋವಿನ ಭೀತಿ ಉಂಟಾಗಿದೆ.

ಕೇಂದ್ರ ಸರ್ಕಾರದ ಅಂಕಿಅಂಶಗಳ ಪ್ರಕಾರ, ಕಳೆದ ದಶಕದಲ್ಲಿ ಕೇರಳ ರಾಜ್ಯ ದೇಶದಲ್ಲಿ ಭೂಕುಸಿತದಿಂದ ಹೆಚ್ಚು ಹಾನಿಗೊಳಗಾಗಿದೆ.

ಗಣಿ ಸಚಿವಾಲಯದ ಮಾಹಿತಿ ಪ್ರಕಾರ, ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ (ಜಿಎಸ್‌ಐ) ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 2015 ಮತ್ತು 2022 ರ ನಡುವೆ ಸಂಭವಿಸಿದ 3,782 ಪ್ರಮುಖ ಭೂಕುಸಿತಗಳ ದತ್ತಾಂಶವನ್ನು ಸಂಗ್ರಹಿಸಿದೆ. ಇದು ಜನಜೀವನ ಮತ್ತು ಮೂಲಸೌಕರ್ಯಗಳ ಮೇಲೆ ಪರಿಣಾಮ ಬೀರಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಭೂ ವಿಜ್ಞಾನ ಖಾತೆ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಜುಲೈ 27, 2022 ರಂದು ಲೋಕಸಭೆಯಲ್ಲಿ ಹೇಳಿದ್ದರು.

ಭೂಕುಸಿತದ ದತ್ತಾಂಶವನ್ನು ಜಿಎಸ್‌ಐಯ ಪ್ರಮಾಣಿತ ಕಾರ್ಯಾಚರಣೆ ಕಾರ್ಯವಿಧಾನದ ಪ್ರಕಾರ ಸಂಗ್ರಹಿಸಲಾಗಿದ್ದು,ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮಾಹಿತಿಯನ್ನು ಒಳಗೊಂಡಿದೆ.

ಕೇಂದ್ರ ಸರ್ಕಾರದ ಮಾಹಿತಿ ಪ್ರಕಾರ, 3,782 ಪ್ರಮುಖ ಭೂಕುಸಿತ ಘಟನೆಗಳಲ್ಲಿ ಕೇರಳದಲ್ಲಿ 2015-2022ರ ಅವಧಿಯಲ್ಲಿ 2,239 ಭೂಕುಸಿತಗಳು ಸಂಭವಿಸಿವೆ.

ಜಿಎಸ್‌ಐ ಪ್ರಾಥಮಿಕ ಜಿಯೋಪ್ಯಾರಾಮೆಟ್ರಿಕ್ ಗುಣಲಕ್ಷಣಗಳನ್ನು ಸಂಗ್ರಹಿಸಿದೆ. ಭೂಕುಸಿತದ ಪರಿಣಾಮ, ಭವಿಷ್ಯದ ದುರ್ಬಲತೆ ಮತ್ತು ಭವಿಷ್ಯದ ವಿವರವಾದ ಭೂವೈಜ್ಞಾನಿಕ ತನಿಖೆಗಳ ಅಗತ್ಯಗಳನ್ನು ಸೂಚಿಸುವುದು ಒಳಗೊಂಡಿದೆ. ಜಿಎಸ್‌ಐ ಬಳಿ ಇರುವ ರಾಷ್ಟ್ರೀಯ ಭೂಕುಸಿತ ದಾಸ್ತಾನುಗಳನ್ನು ನವೀಕರಿಸಲು ಈ ದತ್ತಾಂಶ ಬಳಸಲಾಗುತ್ತದೆ ಎಂದು ಕೇಂದ್ರ ಹೇಳಿದೆ.

ಹಿಮಕುಸಿತ ಮತ್ತು ಭೂಕುಸಿತಗಳು ನೈಸರ್ಗಿಕ ವಿದ್ಯಮಾನವಾಗಿದ್ದು ಅದನ್ನು ತಡೆಯಲು ಸಾಧ್ಯವಿಲ್ಲ ಎಂದು ಜಿತೇಂದ್ರ ಸಿಂಗ್ ಹೇಳಿದ್ದಾರೆ. ಆದರೆ, ಭೂ ವಿಜ್ಞಾನ ಸಚಿವಾಲಯ ಮತ್ತು ರಕ್ಷಣಾ ಸಚಿವಾಲಯದ ಅಡಿಯಲ್ಲಿರುವ ವಿವಿಧ ಸಂಸ್ಥೆಗಳು ಮಳೆ ಮತ್ತು ಹಿಮಪಾತದ ಬಗ್ಗೆ ಮುಂಜಾಗ್ರತೆ ಮತ್ತು ಮುನ್ಸೂಚನೆಗಳನ್ನು ನೀಡುತ್ತಿವೆ.


Read More
Next Story