
ವಿಡಿಯೋ ಕರೆ ಮೂಲಕ ಇಡಿ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ಧ: ಕೇಜ್ರಿವಾಲ್
ಅಬಕಾರಿ ನೀತಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಎಂಟನೇ ಸಮನ್ಸ್‌ಗೆ ಉತ್ತರಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಮಾರ್ಚ್ 12ರ ನಂತರ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಹಾಜರಾಗಲು ಸಿದ್ಧ ಎಂದು ಹೇಳಿದ್ದಾರೆ. ಆದರೆ, ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ವಿಚಾರಣೆಗೆ ಅವಕಾಶವಿಲ್ಲ ಎಂದು ಇಡಿ ಹೇಳಿದೆ.
ಸಮನ್ಸ್‌ಗಳು ʻಕಾನೂನುಬಾಹಿರʼ ಎಂದಿರುವ ಕೇಜ್ರಿವಾಲ್, ತನಿಖಾ ಸಂಸ್ಥೆಯ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ಧವಿರುವುದಾಗಿ ಹೇಳಿದ್ದಾರೆ.
ಎಂಟನೇ ಸಮನ್ಸ್: ಫೆಬ್ರವರಿ 27 ರಂದು ಇಡಿ ಎಂಟನೇ ಸಮನ್ಸ್ ಹೊರಡಿಸಿ, ಮಾರ್ಚ್ 4 ರಂದು ಹಾಜರಾಗಲು ಸೂಚಿಸಿತ್ತು. ಆದರೆ, ವಿಷಯ ನ್ಯಾಯಾಲಯದಲ್ಲಿರುವುದರಿಂದ ಕಾಯಬೇಕೆಂದು ಏಜೆನ್ಸಿಯನ್ನು ಕೇಳಿದ್ದಾರೆ. ಕೇಜ್ರಿವಾಲ್ ಅವರು ಮಾರ್ಚ್ 16 ರಂದು ಸಿಟಿ ಕೋರ್ಟ್‌ಗೆ ಹಾಜರಾಗಬೇಕಿದೆ. ಅವರು ವೈಯಕ್ತಿಕವಾಗಿ ಹಾಜರಿರಬೇಕೆಂದು ನ್ಯಾಯಾಲಯ ಹೇಳಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಎಎಪಿ ನಾಯಕರಾದ ಮನೀಶ್ ಸಿಸೋಡಿಯಾ ಮತ್ತು ಸಂಜಯ್ ಸಿಂಗ್ ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದಾರೆ.
Next Story