ಮಹಿಳೆಯರಿಗೆ ಮಾಸಿಕ1,000 ರೂ. ಚುನಾವಣೆ ಬಳಿಕ 2100 ರೂ. ಪ್ರಕಟಿಸಿದ ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್
ಮುಖ್ಯಮಂತ್ರಿ ಅತಿಶಿ ನೇತೃತ್ವದ ದೆಹಲಿ ಕ್ಯಾಬಿನೆಟ್ ಈ ಯೋಜನೆಗೆ ಅನುಮೋದನೆ ನೀಡಿದೆ. ಮಹಿಳೆಯರು ಶುಕ್ರವಾರದಿಂದ ತಮ್ಮ ನೋಂದಣಿ ಪ್ರಾರಂಭಿಸಬಹುದು ಎಂದು ಕೇಜ್ರಿವಾಲ್ ಹೇಳಿದ್ದಾರೆ.
2025 ರ ಫೆಬ್ರವರಿಯಲ್ಲಿ ದೆಹಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ನಡುವೆ ಆಡಳಿತಾರೂಢ ಆಪ್ ಮತ್ತು ಬಿಜೆಪಿ ನಡುವೆ ತುರುಸಿನ ಸ್ಪರ್ಧೆ ಶುರುವಾಗಿದೆ. ಎಎಪಿ ಸತತ ಮೂರನೇ ಅವಧಿಯ ಮೇಲೆ ಕಣ್ಣಿಟ್ಟಿದ್ದು, ಬಿಜೆಪಿ ಆಪ್ ಆಟ ನಿಲ್ಲಿಸಲು ಎಲ್ಲಿಲ್ಲದ ಪ್ರಯತ್ನ ಮಾಡುತ್ತಿದೆ. ಈ ನಡುವೆ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಗುರುವಾರ (ಡಿಸೆಂಬರ್ 12) ಮುಖ್ಯಮಂತ್ರಿ ಮಹಿಳಾ ಸಮ್ಮಾನ್ ಯೋಜನೆ ಪ್ರಾರಂಭಿಸುವುದಾಗಿ ಪ್ರಕಟಿಸಿದ್ದಾರೆ.
ಯೋಜನೆಯಡಿ, ದೆಹಲಿಯ ಮಹಿಳೆಯರಿಗೆ ಪ್ರಸ್ತುತ ಮಾಸಿಕ 1,000 ರೂ. ಚುನಾವಣೆಯ ಬಳಿಕ ಈ ಮೊತ್ತವನ್ನು 2, 100 ರೂಪಾಯಿಗೆ ಹೆಚ್ಚಿಸಲಾಗುವುದು ಎಂದು ಹೇಳಿದ್ದಾರೆ.. ಶೀಘ್ರದಲ್ಲೇ ಚುನಾವಣೆ ಅಧಿಸೂಚನೆ ಪ್ರಕಟವಾಗುವ ಸಾಧ್ಯತೆ ಇದೆ. ಹೀಗಾಗಿ ಕೇಜ್ರಿವಾಲ್ ಘೋಷಣೆಗಳು ಚುನಾವಣೆ ಬಳಿಕವಷ್ಟೇ ಜನರಿಗೆ ತಲುಪುವ ಸಾಧ್ಯತೆಗಳಿವೆ ಎಂದು ಅವರು ಹೇಳಿಕೊಂಡಿದ್ದಾರೆ.
ಮುಖ್ಯಮಂತ್ರಿ ಅತಿಶಿ ನೇತೃತ್ವದ ದೆಹಲಿ ಕ್ಯಾಬಿನೆಟ್ ಈ ಯೋಜನೆಗೆ ಅನುಮೋದನೆ ನೀಡಿದೆ. ಮಹಿಳೆಯರು ಶುಕ್ರವಾರದಿಂದ ತಮ್ಮ ನೋಂದಣಿ ಪ್ರಾರಂಭಿಸಬಹುದು ಎಂದು ಕೇಜ್ರಿವಾಲ್ ಹೇಳಿದ್ದಾರೆ. ಆಮ್ ಆದ್ಮಿ ಪಕ್ಷವು ಚುನಾವಣೆಯಲ್ಲಿ ಗೆದ್ದರೆ ಈ ಯೋಜನೆಯಡಿ ಮೊತ್ತವನ್ನು ತಿಂಗಳಿಗೆ 2,100 ರೂ.ಗೆ ಹೆಚ್ಚಿಸಲಾಗುವುದು ಎಂದು ಅವರು ಘೋಷಿಸಲಾಗಿದೆ.
ಈ ಯೋಜನೆಯನ್ನು ಆರಂಭದಲ್ಲಿ 2024-25ರ ಬಜೆಟ್ನಲ್ಲಿ 2,000 ಕೋಟಿ ರೂಪಾಯಿಗಳ ಮೀಸಲಿನೊಂದಿಗೆ ಘೋಷಿಸಲಾಗಿತ್ತು. "ಈ ಯೋಜನೆಯು ಮಹಿಳೆಯರ ಸಬಲೀಕರಣ ಮತ್ತು ಅವರ ಆರ್ಥಿಕ ಅಗತ್ಯಗಳನ್ನು ಪೂರೈಸುತ್ತದೆ ಎಂದು ಆಪ್ ಹೇಳಿದೆ.
ನಾನು ಇದನ್ನು ನಮ್ಮ ಸಮಾಜವನ್ನು ಬಲಪಡಿಸುವ ಒಂದು ಹೆಜ್ಜೆಯಾಗಿ ನೋಡುತ್ತೇನೆ. ಹಣ ಎಲ್ಲಿಂದ ಬರುತ್ತದೆ ಎಂದು ಬಿಜೆಪಿ ಕೇಳುತ್ತದೆ, ಆದರೆ ನಾವು ಉಚಿತ ವಿದ್ಯುತ್ ನೀಡುತ್ತೇವೆ ಎಂದು ಹೇಳಿದ್ದೆವು. ನಾವು ಅದನ್ನು ಮಾಡಿದ್ದೇವೆ" ಎಂದು ಕೇಜ್ರಿವಾಲ್ ಹೇಳಿದರು.
ಎಎಪಿ ನಾಯಕ ತಮ್ಮ ಪಕ್ಷವು ಚುನಾವಣೆಯಲ್ಲಿ ಅದ್ಭುತ ಪ್ರದರ್ಶನ ನೀಡಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. ಮಹಿಳೆಯರು ತಮ್ಮನ್ನು ಸಕ್ರಿಯವಾಗಿ ಬೆಂಬಲಿಸುವಂತೆ ಒತ್ತಾಯಿಸಿದರು. ಮಹಿಳೆಯರು ಒಟ್ಟಾಗಿ ಕೆಲಸ ಮಾಡಿದರೆ, ನಾವು 60 ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯುತ್ತೇವೆ" ಎಂದು ಅವರು ಹೇಳಿದ್ದಾರೆ.