ಆರ್ ಡಿ ಸಿ 2026: ಸತತ ಎರಡನೇ ವರ್ಷ ಇತಿಹಾಸ ಸೃಷ್ಟಿಸಿದ ಕರ್ನಾಟಕ-ಗೋವಾ ಎನ್ ಸಿಸಿ ನಿರ್ದೇಶನಾಲಯ
x

ದೇಶದ 17 ವಿವಿಧ ನಿರ್ದೇಶನಾಲಯಗಳು ಭಾಗವಹಿಸಿದ್ದ ಈ ಕಠಿಣ ಸ್ಪರ್ಧೆಯಲ್ಲಿ ಕರ್ನಾಟಕ-ಗೋವಾ ತಂಡವು ಒಟ್ಟಾರೆ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಆರ್ ಡಿ ಸಿ 2026: ಸತತ ಎರಡನೇ ವರ್ಷ ಇತಿಹಾಸ ಸೃಷ್ಟಿಸಿದ ಕರ್ನಾಟಕ-ಗೋವಾ ಎನ್ ಸಿಸಿ ನಿರ್ದೇಶನಾಲಯ

ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಶಿಬಿರನಲ್ಲಿ ಕರ್ನಾಟಕ ಮತ್ತು ಗೋವಾ ಎನ್ ಸಿಸಿ ನಿರ್ದೇಶನಾಲಯವು ಸತತ ಎರಡನೇ ಬಾರಿಗೆ ಪ್ರತಿಷ್ಠಿತ ಪ್ರಧಾನ ಮಂತ್ರಿಗಳ ಬ್ಯಾನರ್ ಮತ್ತು ಟ್ರೋಫಿ'ಯನ್ನು ಗೆದ್ದಿದೆ.


Click the Play button to hear this message in audio format

ದೆಹಲಿಯಲ್ಲಿ ನಡೆದ 2026ರ ಗಣರಾಜ್ಯೋತ್ಸವ ಶಿಬಿರದಲ್ಲಿ (ಎನ್​​ಸಿಸಿ ಕೆಡೆಟ್​​ಗಳಿಗೆ ಒಂದ ತಿಂಗಳ ಕಾಲ ನಡೆದ ಶಿಬಿರ) ಕರ್ನಾಟಕ ಮತ್ತು ಗೋವಾ ಎನ್​​​ಸಿಸಿ ನಿರ್ದೇಶನಾಲಯವು ಸತತ ಎರಡನೇ ಬಾರಿಗೆ ಪ್ರತಿಷ್ಠಿತ 'ಪ್ರಧಾನಮಂತ್ರಿಗಳ ಬ್ಯಾನರ್ ಮತ್ತು ಟ್ರೋಫಿ' ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. ದೇಶದ ಒಟ್ಟು 17 ನಿರ್ದೇಶನಾಲಯಗಳ ನಡುವಿನ ಸ್ಪರ್ಧೆಯಲ್ಲಿ ಕರ್ನಾಟಕ ಮತ್ತು ಗೋವಾ ತಂಡವು ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಜನವರಿ 28ರಂದು ನವದೆಹಲಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಪರೇಡ್ ಮೈದಾನದಲ್ಲಿ ನಡೆದ ಎನ್​​ಸಿಸಿ ರ‍್ಯಾಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈ ಗೌರವವನ್ನು ಪ್ರದಾನ ಮಾಡಿದರು. ಕರ್ನಾಟಕ ಮತ್ತು ಗೋವಾ ಎನ್​​ಸಿಸಿ ನಿರ್ದೇಶನಾಲಯದ ಉಪ ಮಹಾನಿರ್ದೇಶಕ ಏರ್ ಕಮಾಂಡರ್ ಎಸ್. ಬಿ. ಅರುಣ್ ಕುಮಾರ್ ಅವರು ಈ ಪ್ರತಿಷ್ಠಿತ ಬ್ಯಾನರ್ ಅಧಿಕೃತವಾಗಿ ಸ್ವೀಕರಿಸಿದರು.

ಈ ಬಾರಿಯ ಶಿಬಿರದಲ್ಲಿ ಕರ್ನಾಟಕ ಮತ್ತು ಗೋವಾದ ಕೆಡೆಟ್​​ಗಳು ಪಥಸಂಚಲನ, ಫೈರಿಂಗ್ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಅಸಾಧಾರಣ ಪ್ರದರ್ಶನ ನೀಡುವ ಮೂಲಕ ಇತರ 16 ನಿರ್ದೇಶನಾಲಯಗಳನ್ನು ಹಿಂದಿಕ್ಕಿದ್ದಾರೆ. ಕೇವಲ ಆರ್​​​ಡಿಸಿ ಮಾತ್ರವಲ್ಲದೆ, ವರ್ಷವಿಡೀ ನಡೆದ ಅಂತರ ನಿರ್ದೇಶನಾಲಯ ಶೂಟಿಂಗ್ ಚಾಂಪಿಯನ್​ಶಿಪ್​, ಅಖಿಲ ಭಾರತ ವಾಯುಸೈನಿಕ ಶಿಬಿರ ಹಾಗೂ ನೌಕಾ ಸೈನಿಕ ಶಿಬಿರಗಳಲ್ಲಿಯೂ ಈ ನಿರ್ದೇಶನಾಲಯವು ಅಗ್ರಸ್ಥಾನ ಕಾಯ್ದುಕೊಂಡಿದೆ.

ಈ ಐತಿಹಾಸಿಕ ಗೆಲುವಿನ ಕುರಿತು ಮಾತನಾಡಿದ ಏರ್ ಕಮಾಂಡರ್ ಎಸ್. ಬಿ. ಅರುಣ್ ಕುಮಾರ್ ಅವರು, ಈ ಯಶಸ್ಸು ಕೆಡೆಟ್​​ಗಳ ಕಠಿಣ ಪರಿಶ್ರಮ ಮತ್ತು ಸಿಬ್ಬಂದಿಗಳ ನಿಖರ ತರಬೇತಿಗೆ ಸಂದ ವಿಜಯ ಎಂದು ಹರ್ಷ ವ್ಯಕ್ತಪಡಿಸಿದರು. ಅಲ್ಲದೆ, ಈ ಸಾಧನೆಗೆ ಬೆನ್ನೆಲುಬಾಗಿ ನಿಂತ ಕರ್ನಾಟಕ ಮತ್ತು ಗೋವಾ ರಾಜ್ಯ ಸರ್ಕಾರಗಳು, ವಿವಿಧ ವಿಶ್ವವಿದ್ಯಾಲಯಗಳು ಹಾಗೂ ಶಿಕ್ಷಣ ಸಂಸ್ಥೆಗಳ ಸಹಕಾರವನ್ನು ಅವರು ಈ ಸಂದರ್ಭದಲ್ಲಿ ಸ್ಮರಿಸಿದರು. ಶಿಸ್ತು, ಎನ್ ಸಿಸಿ ಪ್ರಮಾಣಪತ್ರ ಪರೀಕ್ಷೆಗಳಲ್ಲಿನ ಉತ್ತಮ ಫಲಿತಾಂಶ ಹಾಗೂ ಸಶಸ್ತ್ರ ಪಡೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಕೆಡೆಟ್ ಗಳ ಆಯ್ಕೆಯೂ ಈ ಪ್ರಶಸ್ತಿ ಲಭಿಸಲು ಪ್ರಮುಖ ಮಾನದಂಡಗಳಾಗಿವೆ.

Read More
Next Story