
ಜಮ್ಮು- ಕಾಶ್ಮೀರದ ಕಿಶ್ತ್ವಾರ್‌ನಲ್ಲಿ "ಆಪರೇಷನ್ ತ್ರಾಶಿ": 3ರಿಂದ4 ಭಯೋತ್ಪಾದಕರ ಹತ್ಯೆ
ಈ ಕಾರ್ಯಾಚರಣೆಗೆ ಆಪರೇಷನ್ ತ್ರಾಶಿ ಎಂದು ಹೆಸರಿಸಲಾಗಿದೆ. ಕಿಶ್ತ್ವಾರ್‌ನ ಛತ್ರು ಪ್ರದೇಶದ ಸಿಂಗ್‌ಪುರದಲ್ಲಿ ಭಯೋತ್ಪಾದಕರ ಇರುವಿಕೆಯನ್ನು ಗುರುತಿಸಲಾಗಿದ್ದು. ಹೆಚ್ಚುವರಿ ಸೈನಿಕರನ್ನು ನಿಯೋಜಿಸಲಾಗಿದೆ.
ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ ಆರಂಭವಾದ ಮಿಲಿಟರಿ ಕಾರ್ಯಾಚರಣೆಯಲ್ಲಿ ಕನಿಷ್ಠ 3-4 ಭಯೋತ್ಪಾದಕರು ಹತ್ಯೆಯಾಗಿದ್ದಾರೆ ಎಂದು ವರದಿಯಾಗಿದೆ. ಭಾರತೀಯ ಸೇನೆ. ಜಮ್ಮು ಕಾಶ್ಮೀರ ಪೊಲೀಸ್ ಮತ್ತು ಸಿಆರ್‌ಪಿಎಫ್‌ನ ಜಂಟಿ ತಂಡವು ಈ ಕಾರ್ಯಾಚರಣೆಯನ್ನು ನಡೆಸುತ್ತಿದೆ.
ಈ ಕಾರ್ಯಾಚರಣೆಗೆ ಆಪರೇಷನ್ ತ್ರಾಶಿ ಎಂದು ಹೆಸರಿಸಲಾಗಿದೆ. ಕಿಶ್ತ್ವಾರ್‌ನ ಛತ್ರು ಪ್ರದೇಶದ ಸಿಂಗ್‌ಪುರದಲ್ಲಿ ಭಯೋತ್ಪಾದಕರ ಇರುವಿಕೆಯನ್ನು ಗುರುತಿಸಲಾಗಿದ್ದು. ಹೆಚ್ಚುವರಿ ಸೈನಿಕರನ್ನು ನಿಯೋಜಿಸಲಾಗಿದೆ. ಭಯೋತ್ಪಾದಕರನ್ನು ನಿಷ್ಕ್ರಿಯಗೊಳಿಸುವ ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ವೈಟ್ ನೈಟ್ ಕಾರ್ಪ್ಸ್ ಮಾಹಿತಿ ನೀಡಿದೆ. ಈ ಕಾರ್ಯಾಚರಣೆಯು ದಕ್ಷಿಣ ಕಾಶ್ಮೀರದಲ್ಲಿ ಒಂದು ವಾರದ ಹಿಂದೆ ಆರು ಭಯೋತ್ಪಾದಕರನ್ನು ಹತ್ಯೆ ಮಾಡಿದ ಭಯೋತ್ಪಾದನೆ ವಿರೋಧಿ ಕಾರ್ಯಾಚರಣೆಯ ನಂತರ ನಿರಂತರವಾಗಿ ನಡೆಯುತ್ತಿದೆ.
ಏಪ್ರಿಲ್ 22ರ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭದ್ರತಾ ಪಡೆಗಳು ದಕ್ಷಿಣ ಕಾಶ್ಮೀರದ ಪ್ರದೇಶಗಳ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಿವೆ. ಕಳೆದ ವಾರ ನಡೆದ ಎನ್‌ಕೌಂಟರ್‌ಗಳು ಶೋಪಿಯಾನ್‌ನ ಕೆಲ್ಲರ್ ಪ್ರದೇಶ ಮತ್ತು ಪುಲ್ವಾಮಾದ ತ್ರಾಲ್‌ನ ನಾದರ್ ಪ್ರದೇಶಗಳಲ್ಲಿ ಸಂಭವಿಸಿದ್ದವು. ಮೇ 13ರಂದು ಆರಂಭವಾದ ಆಪರೇಷನ್ ಕೆಲ್ಲರ್" ಕಾರ್ಯಾಚರಣೆಯಲ್ಲಿ ಮೂವರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿತ್ತು.
ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ಎದುರಿಸಲು ಭದ್ರತಾ ಪಡೆಗಳು ಭಯೋತ್ಪಾದಕರ ಮನೆಗಳನ್ನು ಧ್ವಂಸ ಮಾಡುವ ಕಾರ್ಯಾಚರಣೆಗಳನ್ನು ಸಹ ನಡೆಸುತ್ತಿವೆ. ಈ ಕ್ರಮವು ಭಯೋತ್ಪಾದಕರಿಗೆ ಸ್ಥಳೀಯ ಬೆಂಬಲವನ್ನು ಕಡಿಮೆ ಮಾಡುವ ಗುರಿ ಹೊಂದಿದೆ.
ಲಾಂಚ್ ಪ್ಯಾಡ್ಗೆ ಹಾನಿ
ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಕೂಡ ಜಮ್ಮು ಗಡಿಯಾಚೆಗಿನ ಕಾರ್ಯಾಚರಣೆಯಲ್ಲಿ ಐದು ಪಾಕಿಸ್ತಾನಿ ಪೋಸ್ಟ್‌ಗಳನ್ನು ಮತ್ತು ಒಂದು ಭಯೋತ್ಪಾದಕ ಲಾಂಚ್ ಪ್ಯಾಡ್ ಅನ್ನು ಧ್ವಂಸಗೊಳಿಸಿದೆ ಎಂದು ಬುಧವಾರ (ಮೇ 21) ಅಧಿಕಾರಿಗಳು ತಿಳಿಸಿದ್ದಾರೆ. ಬಿಎಸ್‌ಎಫ್ ಕಮಾಂಡೆಂಟ್ ಚಂದ್ರೇಶ್ ಸೋನಾ ಅವರು, "ಪಾಕಿಸ್ತಾನದ ಗುಂಡಿನ ದಾಳಿಗೆ ನಾವು ತಕ್ಕ ಪ್ರತಿಕ್ರಿಯೆ ನೀಡಿದ್ದೇವೆ. ಅವರ ಹಲವು ಸಂಪನ್ಮೂಲಗಳನ್ನು ಧ್ವಂಸಗೊಳಿಸಿದ್ದೇವೆ. ಮಸ್ತ್‌ಪುರ್‌ನಲ್ಲಿ ಅವರ ಭಯೋತ್ಪಾದಕ ಲಾಂಚ್ ಪ್ಯಾಡ್ ಇತ್ತು, ಅದನ್ನು ನಾವು ನಾಶಪಡಿಸಿದ್ದೇವೆ. ನಮ್ಮ ಕಾರ್ಯಾಚರಣೆಯಿಂದಾಗಿ ಐದು ಪಾಕಿಸ್ತಾನಿ ಪೋಸ್ಟ್‌ಗಳು ಸಂಪೂರ್ಣವಾಗಿ ಧ್ವಂಸವಾಗಿವೆ," ಎಂದು ಹೇಳಿದ್ದಾರೆ.
ಚಂದ್ರೇಶ್ ಸೋನಾ ಅವರು, "ಆಪರೇಷನ್ ಸಿಂದೂರ್" ನಂತರ ಪಾಕಿಸ್ತಾನವು ನಾಗರಿಕ ಪ್ರದೇಶಗಳು ಮತ್ತು ಭಾರತೀಯ ಸಂಸ್ಥೆಗಳ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ. ಮೇ 10 ರಂದು ಪಾಕಿಸ್ತಾನವು ಭಾರತೀಯ ಪೋಸ್ಟ್‌ಗಳು, ಡ್ಯೂಟಿ ಪಾಯಿಂಟ್‌ಗಳು ಮತ್ತು ಗ್ರಾಮಗಳ ಮೇಲೆ 61 ಎಂಎಂ ಮತ್ತು 82 ಎಂಎಂ ಮಾರ್ಟಾರ್‌ಗಳನ್ನು ಬಳಸಿ ಭಾರೀ ಶೆಲ್‌ವಿಂಗ್ ನಡೆಸಿತ್ತು. ಇದಕ್ಕೆ ಭಾರತೀಯ ಪಡೆಗಳು ಪ್ರಬಲವಾಗಿ ಪ್ರತಿಕ್ರಿಯಿಸಿವೆ ಎಂದು ಸೋನಾ ತಿಳಿಸಿದ್ದಾರೆ.