
J&K polls: ಕಾಂಗ್ರೆಸ್ 9 ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ
90 ಸ್ಥಾನಗಳಲ್ಲಿ ಕಾಂಗ್ರೆಸ್ 32, ಎನ್‌ಸಿ 50, ಪ್ಯಾಂಥರ್ಸ್ ಪಾರ್ಟಿ ಮತ್ತು ಸಿಪಿಐ(ಎಂ) ತಲಾ ಒಂದು ಕ್ಷೇತ್ರದಲ್ಲಿ ಸ್ಪರ್ಧಿಸಲಿವೆ; ಆರು ಸ್ಥಾನಗಳಲ್ಲಿ ಕಾಂಗ್ರೆಸ್ ಮತ್ತು ಎನ್‌ಸಿ ನಡುವೆ ʻಸೌಹಾರ್ದ ಸ್ಪರ್ಧೆ' ನಡೆಯಲಿದೆ.
ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ತನ್ನ ಒಂಬತ್ತು ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಚಿನಾಬ್ ಕಣಿವೆಯ ದೋಡಾ, ಕಿಶ್ತ್ವಾರ್ ಮತ್ತು ರಾಂಬನ್ ಜಿಲ್ಲೆಗಳು ಮತ್ತು ಕಾಶ್ಮೀರ ವಿಭಾಗದ ಕುಲ್ಗಾಮ್, ಅನಂತನಾಗ್ ಮತ್ತು ಪುಲ್ವಾಮಾ ಜಿಲ್ಲೆಗಳ ಒಂಬತ್ತು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಈ ಕ್ಷೇತ್ರಗಳಿಗೆ ಸೆಪ್ಟೆಂಬರ್ 18 ರಂದು ಮೊದಲ ಹಂತದಲ್ಲಿ ಮತದಾನ ನಡೆಯಲಿದೆ.
ಪಿಸಿಸಿ ಮಾಜಿ ಮುಖ್ಯಸ್ಥರು ಕಣದಲ್ಲಿ: ಮಾಜಿ ಪಿಸಿಸಿ ಮುಖ್ಯಸ್ಥರಾದ ಗುಲಾಮ್ ಅಹ್ಮದ್ ಮಿರ್, ವಿಕಾರ್ ರಸೂಲ್ ವಾನಿ ಮತ್ತು ಪೀರ್ಜಾದಾ ಮೊಹಮ್ಮದ್ ಸೈಯದ್ ಕ್ರಮವಾಗಿ ದೂರು, ಅನಂತನಾಗ್ ಮತ್ತು ಬನಿಹಾಲ್ ಕ್ಷೇತ್ರಗಳಿಂದ ಕಣಕ್ಕಿಳಿದಿದ್ದಾರೆ. ಕಾಶ್ಮೀರದ ಅನುಭವಿ ನಾಯಕರಾದ ಪೀರ್ಜಾದಾ ಸೈಯದ್ ಅವರು ಗುಲಾಂ ನಬಿ ಆಜಾದ್ ಅವರ ಡಿಪಿಎಪಿಗೆ ಸೇರಲು ಆಗಸ್ಟ್ 2022 ರಲ್ಲಿ ಕಾಂಗ್ರೆಸ್ ತೊರೆದಿದ್ದ ರು. ಜನವರಿ 2023ರಲ್ಲಿ ಮತ್ತೆ ಕಾಂಗ್ರೆಸ್‌ಗೆ ಮರಳಿದ್ದರು.
ಟ್ರಾಲ್ ಕ್ಷೇತ್ರದಿಂದ ಸುರೀಂದರ್ ಸಿಂಗ್ ಚನ್ನಿ, ದೇವ್‌ಸರ್‌ನಿಂದ ಅಮಾನುಲ್ಲಾ ಮಂಟೂ, ಇಂದರ್ವಾಲ್‌ನಿಂದ ಶೇಖ್ ಜಫರುಲ್ಲಾ, ಭದ ರ್ವಾದಿಂದ ನದೀಮ್ ಷರೀಫ್, ದೋಡಾದಿಂದ ಶೇಖ್ ರಿಯಾಜ್ ಮತ್ತು ದೋಡಾ ಪಶ್ಚಿಮದಿಂದ ಪ್ರದೀಪ್ ಕುಮಾರ್ ಭಗತ್ ಅವರನ್ನು ಕಣಕ್ಕಿಳಿಸಿದೆ. ನ್ಯಾಷನಲ್ ಕಾನ್ಫೆರೆನ್ಸ್ ಈವರೆಗೆ 18 ಅಭ್ಯರ್ಥಿಗಳನ್ನುಪ್ರಕಟಿಸಿದೆ.
ಸೀಟು ಹಂಚಿಕೆ ವ್ಯವಸ್ಥೆ: ಚುನಾವಣೆಗೆ ಕಾಂಗ್ರೆಸ್ ಪಕ್ಷವು ಸಿಪಿಐ(ಎಂ) ಮತ್ತು ಪ್ಯಾಂಥರ್ಸ್ ಪಾರ್ಟಿಯೊಂದಿಗೆ ಔಪಚಾರಿಕ ಸೀಟು ಹಂಚಿಕೆ ಸೂತ್ರವನ್ನು ಘೋಷಿಸಿದೆ. 90 ಸ್ಥಾನಗಳಲ್ಲಿ ಕಾಂಗ್ರೆಸ್ 32, ಎನ್‌ಸಿ 50, ಸಿಪಿಐ(ಎಂ) ಮತ್ತು ಪ್ಯಾಂಥರ್ಸ್ ಪಾರ್ಟಿ ತಲಾ ಒಂದೊಂದು ಸ್ಥಾನ ದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿವೆ. ಉಳಿದ ಆರು ಸ್ಥಾನಗಳಾದ ಸೋಪೋರ್ (ಬಾರಾಮುಲ್ಲಾ, ಉತ್ತರ ಕಾಶ್ಮೀರ), ಬನಿಹಾಲ್, ಭದೇರ್ವಾ, ದೋಡಾ, ದೇವ್‌ಸರ್ (ಎಲ್ಲವೂ ಚಿನಾಬ್ ಕಣಿವೆ) ಮತ್ತು ನಗ್ರೋಟಾ (ಜಮ್ಮು) ಎರಡೂ ಪಕ್ಷಗಳು ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿವೆ.
ಎನ್‌ಸಿ ಮತ್ತು ಕಾಂಗ್ರೆಸ್ ಸಾಮಾನ್ಯ ಕನಿಷ್ಠ ಕಾರ್ಯಕ್ರಮವನ್ನು ರೂಪಿಸಲು ಸಮ್ಮತಿಸಿವೆ.