ಜಾರ್ಖಂಡ್ ಸಿಎಂ, ಕಾಂಗ್ರೆಸ್‌ ಮುಖಂಡರ ಭೇಟಿ
x
ನವದೆಹಲಿಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್, ಅವರ ಪತ್ನಿ ಕಲ್ಪನಾ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮತ್ತು ಕೆ.ಸಿ. ವೇಣುಗೋಪಾಲ್ ಪಾಲ್ಗೊಂಡಿದ್ದರು.

ಜಾರ್ಖಂಡ್ ಸಿಎಂ, ಕಾಂಗ್ರೆಸ್‌ ಮುಖಂಡರ ಭೇಟಿ


ನವದೆಹಲಿ: ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಮಂಗಳವಾರ ಭೇಟಿ ಮಾಡಿದರು. ರಾಜ್ಯದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಇಂಡಿಯ ಒಕ್ಕೂಟ ʻಬೃಹತ್ ಬಹುಮತದಿಂದ ಗೆಲ್ಲುತ್ತದೆʼ ಎಂದು ಹೇಳಿದರು.

ಜಾರ್ಖಂಡ್‌ ಮಾಜಿ ಮುಖ್ಯಮಂತ್ರಿ ಚಂಪೈ ಸೊರೆನ್ ಅವರು ಬಿಜೆಪಿಗೆ ಸೇರಿದ ಕೆಲವು ದಿನಗಳ ನಂತರ ಈ ಭೇಟಿ ನಡೆದಿದೆ. ಸೊರೆನ್ ಅವರು ಕಾಂಗ್ರೆಸ್ ಅಧ್ಯಕ್ಷರ ನಿವಾಸದಲ್ಲಿ ಖರ್ಗೆ ಮತ್ತು ರಾಹುಲ್‌ ಅವರನ್ನು ಭೇಟಿ ಮಾಡಿದರು. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್ ಮತ್ತು ಸೋರೆನ್ ಅವರ ಪತ್ನಿ ಕಲ್ಪನಾ ಸೊರೆನ್ ಕೂಡ ಉಪಸ್ಥಿತರಿದ್ದರು.

ಸೌಜನ್ಯದ ಭೇಟಿ ಎಂದು ಸೊರೆನ್ ಹೇಳಿದ್ದರೂ, ವರ್ಷಾಂತ್ಯ ನಡೆಯಲಿರುವ ವಿಧಾನಸಭೆ ಚುನಾವಣೆ ಸಿದ್ಧತೆ ಕುರಿತು ಚರ್ಚಿಸಲಾಗಿದೆ ಎಂದು ತಿಳಿದುಬಂದಿದೆ.

ʻಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಮ್ಮುಖದಲ್ಲಿ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಮತ್ತು ಕಲ್ಪನಾ ಸೊರೆನ್ ಅವರೊಂದಿಗೆ ಸಭೆ ನಡೆಯಿತು. ಇಂಡಿಯ ಒಕ್ಕೂಟ ಭಾರಿ ಬಹುಮತದಿಂದ ಚುನಾವಣೆಯಲ್ಲಿ ಗೆಲ್ಲುತ್ತದೆ,ʼ ಎಂದು ರಾಹುಲ್‌ ಅವರು ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಸಭೆ ನಂತರ ಮಾತನಾಡಿದ ಖರ್ಗೆ ಅವರು,ʼ ಹೇಮಂತ್‌ ಸೊರೆನ್‌ ಅವರು ರಾಹುಲ್ ಗಾಂಧಿ ಮತ್ತು ನನ್ನ ಭೇಟಿ ಮಾಡಿದರು. ಜಾರ್ಖಂಡ್‌ನಲ್ಲಿ ಸಾಮಾಜಿಕ ನ್ಯಾಯ ಮತ್ತು ಸಮಾಜದ ಎಲ್ಲಾ ವರ್ಗಗಳ ಆರ್ಥಿಕ ಉನ್ನತಿಗೆ ನಾವು ಬದ್ಧರಾಗಿದ್ದೇವೆ. ಜಾರ್ಖಂಡ್‌ನಲ್ಲಿ ಇಂಡಿಯ ಒಕ್ಕೂಟ ಗೆಲ್ಲಲಿದೆ,ʼ ಎಂದು ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಎಂಎಂ ಮೈತ್ರಿ ಸರ್ಕಾರದ ಭಾಗವಾಗಿವೆ.

Read More
Next Story