ಐಪಿಎಲ್ 2024: ಆರ್‌ಸಿಬಿ, ವಿರಾಟ್ ಕೊಹ್ಲಿ ಶ್ಲಾಘಿಸಿದ ಆನಂದ್ ಮಹೀಂದ್ರ
x

ಐಪಿಎಲ್ 2024: ಆರ್‌ಸಿಬಿ, ವಿರಾಟ್ ಕೊಹ್ಲಿ ಶ್ಲಾಘಿಸಿದ ಆನಂದ್ ಮಹೀಂದ್ರ


ಸತತ ಆರನೇ ಗೆಲುವಿನ ಮೂಲಕ ಪ್ಲೇಆಫ್‌ ಸ್ಥಾನವನ್ನು ಗಳಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಾಗೂ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಯನ್ನು ಮಹೀಂದ್ರ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರ ಶ್ಲಾಘಿಸಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್‌ನ ಪಾಯಿಂಟ್ಸ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದ ಆರ್‌ಸಿಬಿ, ಆರು ಗೆಲುವಿನಿಂದ ನಾಲ್ಕನೇ ಸ್ಥಾನ ತಲುಪಿದೆ. ಮೇ 18ರಂದು ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ವಿರುದ್ಧ 27 ರನ್‌ಗಳ ಗೆಲುವು ಸಾಧಿಸಿತು. ವಿರಾಟ್‌ ಕೊಹ್ಲಿ 14 ಪಂದ್ಯಗಳಿಂದ 708 ರನ್ ಗಳಿಸಿ, ಆರೆಂಜ್ ಕ್ಯಾಪ್ ಹೊಂದಿದ್ದಾರೆ. ಅಹಮದಾಬಾದ್‌ನಲ್ಲಿ ಮೇ 22 ರಂದು ಎಲಿಮಿನೇಟರ್‌ನಲ್ಲಿ ರಾಜಸ್ಥಾನ್ ರಾಯಲ್ಸ್ (ಆರ್‌ ಆರ್ರ್ರಾ‌) ನ್ನು ಎದುರಿಸಲಿದೆ.

ಆನಂದ್ ಮಹೀಂದ್ರ ಎಕ್ಸ್ ನಲ್ಲಿ,ʻ@ಮಹೀಂದ್ರ ರೈಸ್‌ನಲ್ಲಿ ನಾವು ಜನರನ್ನು ನಂಬುತ್ತೇವೆ: ಎಡವಿದಾಗ ಅಥವಾ ಕೆಳಗೆ ಬಿದ್ದಾಗ, ತಕ್ಷಣ ಎದ್ದೇಳಿ. ಎಂದಿಗೂ ಎದೆಗುಂದಬೇಡಿ. ಏರುತ್ತಿರುವವರನ್ನು ನಾವು ಹುರಿದುಂಬಿಸುತ್ತೇವೆ ಮತ್ತು ಶ್ಲಾಘಿಸುತ್ತೇವೆ. ಕಿಂಗ್ ಕೊಹ್ಲಿ ಮತ್ತು ಆರ್‌ ಸಿಬಿ ನಮಗೆ #ಸೋಮವಾರ ಪ್ರೇರಣೆ ನೀಡುತ್ತಾರೆ,ʼಎಂದು ಬರೆದಿದ್ದಾರೆ.

ಈ ಪೋಸ್ಟ್ ಅನ್ನು ಹಲವರು ಮೆಚ್ಚಿದ್ದಾರೆ. @nareshbahrain ಎಂಬುವರು,ʻಮೊದಲ 8 ಪಂದ್ಯಗಳಲ್ಲಿ 7ರಲ್ಲಿ ಸೋತರು. ನಂತರದ 6 ಪಂದ್ಯಗಳಲ್ಲಿ ಗೆಲುವು ಸಾಧಿಸಿದರು. ನೀವು ಗೆಲುವಿನ ವ್ಯವಸ್ಥೆ ಮತ್ತು ಪ್ರಕ್ರಿಯೆಯನ್ನು ಹೊಂದಿದ್ದರೆ, ಸರಾಸರಿಗಳ ನಿಯಮ ನಿಮ್ಮನ್ನುಕಾಯುತ್ತದೆ ಮತ್ತು ನೀವು ಶೀಘ್ರವೇ ಗೆಲುವಿನ ಹಾದಿಗೆ ಹಿಂತಿರುಗಿರುತ್ತೀರಿ. ಫಾರ್ಮ್ ತಾತ್ಕಾಲಿಕ; ಉತ್ಕೃಷ್ಟತೆ ಶಾಶ್ವತವಾದುದುʼ ಎಂದು ಬರೆದಿದ್ದಾರೆ.

ಮತ್ತೊಬ್ಬ ಬಳಕೆದಾರ @amit6060, ʻಕೊಹ್ಲಿ ಬ್ಯಾಟಿಂಗ್‌ನಲ್ಲಿ ಅಸಾಧಾರಣ ಸಾಧನೆ ಮಾಡಿದ್ದಾರೆ ಮತ್ತು ದಾಖಲೆಗಳನ್ನು ಮುರಿದಿದ್ದಾರೆ! ಆದರೆ, ಒಂದೇ ಒಂದು ಐಪಿಎಲ್ ಟ್ರೋಫಿ ಗೆದ್ದಿಲ್ಲ ಮತ್ತು ಕಳೆದ ದಶಕದಲ್ಲಿ ಐಸಿಸಿ ಟ್ರೋಫಿ ಗೆದ್ದಿಲ್ಲ. ಅವರು ಈ ದಾಖಲೆಯನ್ನು ಮುರಿಯುತ್ತಾರೆ ಎಂದು ಭಾವಿಸುತ್ತೇನೆ!,ʼ ಎಂದು ಬರೆದಿದ್ದಾರೆ.

Read More
Next Story