ಮಹಿಳಾ ತಂಡದ ಸಾಧನೆ ಸ್ಪೂರ್ತಿದಾಯಕ: ಕೊಹ್ಲಿ
x

ಮಹಿಳಾ ತಂಡದ ಸಾಧನೆ ಸ್ಪೂರ್ತಿದಾಯಕ: ಕೊಹ್ಲಿ


ಬೆಂಗಳೂರು, ಮಾ. 19- ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡದ ಸಾಧನೆಯನ್ನು ಅನುಕರಿಸಿ, ಐಪಿಎಲ್ ಟ್ರೋಫಿಯನ್ನುಗೆಲ್ಲುವ ಭರವಸೆ ಇದೆ ಎಂದು ವಿರಾಟ್ ಕೊಹ್ಲಿ ಮಂಗಳವಾರ ಹೇಳಿದ್ದಾರೆ.

ರಾಯಲ್ ಚಾಲೆಂಜರ್ಸ್ ಭಾನುವಾರ ಡೆಲ್ಲಿ ಕ್ಯಾಪಿಟಲ್ಸ್ ನ್ನು ಸೋಲಿಸಿ, ಮಹಿಳಾ ಪ್ರೀಮಿಯರ್ ಲೀಗ್ ನ್ನು ಗೆದ್ದಿತು. ಆದರೆ, ಪುರುಷರ ತಂಡ 16 ವರ್ಷಗಳಿಂದ ಪ್ರಶಸ್ತಿ ಗೆಲ್ಲುವ ಕ್ಷಣಕ್ಕಾಗಿ ಕಾಯುತ್ತಿದೆ.

ʻಅದು ಸಂಪೂರ್ಣ ಅದ್ಭುತ ಗೆಲುವು. ನಾವೆಲ್ಲರೂ ಪಂದ್ಯವನ್ನು ನೋಡುತ್ತಿದ್ದೆವು. ನಾವು ಕೂಡ ಟ್ರೋಫಿ ಗೆದ್ದು, ಸಂತಸ ದ್ವಿಗುಣಗೊಳಿಸ ಬಹುದು ಎಂದುಕೊಂಡಿದ್ದೇನೆ; ಅದು ನಿಜವಾಗಿಯೂ ವಿಶೇಷವಾಗಿರುತ್ತದೆʼ ಎಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಆರ್‌ಸಿಬಿ ಅನ್‌ಬಾಕ್ಸ್ ಕಾರ್ಯಕ್ರಮದಲ್ಲಿ ಕೊಹ್ಲಿ ಹೇಳಿದರು.

ಆರ್‌ಸಿಬಿಯೊಂದಿಗೆ ತನ್ನ 17 ನೇ ಋತುವನ್ನು ಪ್ರಾರಂಭಿಸಲಿರುವ ಕೊಹ್ಲಿ, ಈ ವರ್ಷ ಐಪಿಎಲ್ ಟ್ರೋಫಿಯನ್ನು ಗೆಲ್ಲುವ ಕನಸನ್ನು ನನಸಾಗಿಸಲು ತಮ್ಮ ಕೌಶಲ ಮತ್ತು ಅನುಭವವನ್ನು ಆಧರಿಸುವುದಾಗಿ ಹೇಳಿದರು. ʻಐಪಿಎಲ್ ಟ್ರೋಫಿಯನ್ನು ಗೆದ್ದಾಗ ಏನನಿಸುತ್ತದೆ ಎಂದು ತಿಳಿದುಕೊಳ್ಳುವುದು ನನ್ನ ಕನಸು. ಟ್ರೋಫಿ ಗೆದ್ದ ತಂಡದ ಭಾಗವಾಗುತ್ತೇನೆ. ಸಂಪೂರ್ಣ ಸಾಮರ್ಥ್ಯದೊಂದಿಗೆ ಪ್ರಯತ್ನಿಸುತ್ತೇನೆ,ʼ ಎಂದು ಆರ್‌ಸಿಬಿ ಮಾಜಿ ನಾಯಕ ಹೇಳಿದರು.

ಕೊಹ್ಲಿ ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದಾರೆ. ಸಾರ್ವಜನಿಕರ ಒತ್ತಡದಿಂದ ತಂಡಕ್ಕೆ ರಾಯಲ್‌ ಚಾಲೆಂಜ್ ಬೆಂಗಳೂರು ಎಂದು ಮರುನಾಮಕರಣ ಮಾಡಲಾಗಿದೆ.

ಏತನ್ಮಧ್ಯೆ, ಆರ್‌ಸಿಬಿ ನಾಯಕರಾದ ಫಾಫ್ ಡು ಪ್ಲೆಸಿಸ್ ಮತ್ತು ಸ್ಮೃತಿ ಮಂದಾನ ಭಾಗವಹಿಸಿದ್ದ ಸಮಾರಂಭದಲ್ಲಿ ಭಾರತ, ಕರ್ನಾಟಕ ಮತ್ತು ಆರ್‌ಸಿಬಿ ಮಾಜಿ ವೇಗಿ ಆರ್.ವಿನಯ್ ಕುಮಾರ್ ಅವರನ್ನು ತಂಡದ ಹಾಲ್ ಆಫ್ ಫೇಮ್‌ಗೆ ಸೇರಿಸಿಕೊಳ್ಳಲಾಯಿತು. ಮಹಿಳಾ ತಂಡವು ಪುರುಷ ಸಹೋದ್ಯೋಗಿಗಳಿಂದ ಗೌರವ ರಕ್ಷೆ ಪಡೆದು, ಮೈದಾನದ ಸುತ್ತಲೂ ನಡೆದರು. ಪ್ರೇಕ್ಷಕರಿಂದ ಜೋರಾಗಿ ಹರ್ಷೋದ್ಗಾರ ಮಾಡಿದರು.

Read More
Next Story