ಐಪಿಎಲ್‌ 2024: ಜಿಯೋ ಸಿನೆಮಾದಿಂದ 12 ಭಾಷೆಗಳ ವಿವರಣೆಗಾರರ ಪಟ್ಟಿ ಬಿಡುಗಡೆ
x
ಖ್ಯಾತ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್‌ ಹರ್ಯಾಣ್ವಿ ಭಾಷೆಯಲ್ಲಿ ವೀಕ್ಷಕ ವಿವರಣೆ ನೀಡಲಿದ್ದಾರೆ.

ಐಪಿಎಲ್‌ 2024: ಜಿಯೋ ಸಿನೆಮಾದಿಂದ 12 ಭಾಷೆಗಳ ವಿವರಣೆಗಾರರ ಪಟ್ಟಿ ಬಿಡುಗಡೆ


ಐಪಿಎಲ್‌ 2024ನ್ನು ಲೈವ್‌ಸ್ಟ್ರೀಮ್ ಮಾಡಲಿರುವ ಜಿಯೋ ಸಿನೆಮಾ, ವಿವರಣೆಕಾರರ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.

ಎಲ್ಲ ಐಪಿಎಲ್‌ ಪಂದ್ಯಗಳನ್ನು 12 ಭಾಷೆಗಳಲ್ಲಿ, ಇಂಗ್ಲಿಷ್, ಹಿಂದಿ, ಮರಾಠಿ, ಗುಜರಾತಿ, ಭೋಜ್‌ಪುರಿ, ಪಂಜಾಬಿ, ಬಂಗಾಲಿ, ತಮಿಳು, ತೆಲುಗು, ಮಲಯಾಳಂ, ಕನ್ನಡ ಹಾಗೂ ಇದೇ ಮೊದಲ ಬಾರಿ ಹರ್ಯಾನ್ವಿಯಲ್ಲೂ ವಿವರಣೆ ಕೇಳಿಬರಲಿದೆ. ಖ್ಯಾತ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಹರ್ಯಾಣ್ವಿ ಭಾಷೆಯಲ್ಲಿ ಹಾಗೂ ಅಜಯ್ ಜಡೇಜಾ ಗುಜರಾತಿ ಭಾಷೆಯಲ್ಲಿ ವಿವರಣೆ ನೀಡಲಿದ್ದಾರೆ. ಎಂಐ ಎಮಿರೇಟ್ಸ್ ಬ್ಯಾಟಿಂಗ್ ಕೋಚ್ ಜಡೇಜಾ, ಹಿಂದಿ ಮತ್ತು ಹ್ಯಾಂಗ್‌ಔಟ್ ಫೀಡ್‌ಗಳಲ್ಲೂ ಕಾಣಿಸಿಕೊಳ್ಳಲಿದ್ದಾರೆ.

ಐಪಿಎಲ್ ಚಾಂಪಿಯನ್ ಶೇನ್ ವ್ಯಾಟ್ಸನ್, ಮಾಜಿ ನ್ಯೂಜಿಲೆಂಡ್ ಕೋಚ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮೈಕ್ ಹೆಸನ್, ಸೆಹ್ವಾಗ್ ಮತ್ತು ಜಡೇಜಾ ಅವರ ಸೇರ್ಪಡೆಯಿಂದ ಕ್ರೀಡಾಭಿಮಾನಿಗಳಿಗೆ ವಿವಿಧ ಭಾಷೆಗಳಲ್ಲಿ ವಿವರಣೆ ಲಭ್ಯವಾಗಲಿದೆ. ಈ ಋತುವಿನಲ್ಲಿ ಜಿಯೋ ಸಿನೆಮಾ, ಜನಪ್ರಿಯ ಮತ್ತು ಹ್ಯಾಂಗ್‌ಔಟ್‌ ಫೀಡ್‌ಗಳಲ್ಲದೆ, ಹೊಸದಾಗಿ ಪರಿಚಯಿಸಲಾದ ಹೀರೋ ಕ್ಯಾಮ್ ಫೀಡ್ ಮತ್ತು ವೈರಲ್ ವೀಕೆಂಡ್ ಸೇರಿದಂತೆ 18 ಫೀಡ್‌ಗಳನ್ನು ನೀಡುತ್ತದೆ. 100 ಕ್ಕೂ ಹೆಚ್ಚು ಜನಪ್ರಿಯ ಸಾಮಾಜಿಕ ಕಂಟೆಂಟ್ ರಚನೆಕಾರರನ್ನು ಮನೆಯಂಗಳಕ್ಕೆ ತರುತ್ತದೆ. ಹೀರೋ ಕ್ಯಾಮ್‌ ವೀಕ್ಷಕರಿಗೆ ಎಲ್ಲಾ ಲೈವ್ ಆಕ್ಷನ್ ನ್ನು ಅನುಸರಿಸಲು ನೆರವಾಗುವುದಲ್ಲದೆ, ಪಂದ್ಯ ತೆರೆದುಕೊಳ್ಳುತ್ತಿದ್ದಂತೆ ಆಟದೊಳಗಿನ ಹೀರೋಅನ್ನು ಅನುಸರಿಸಲು ನೆರವಾಗಲಿದೆ.

ವಿವರಣೆಗಾರರ ಸಂಪೂರ್ಣ ಪಟ್ಟಿ:

ಇಂಗ್ಲಿಷ್: ಕ್ರಿಸ್ ಗೇಲ್, ಎ.ಬಿ. ಡಿವಿಲಿಯರ್ಸ್, ಶೇನ್ ವ್ಯಾಟ್ಸನ್, ಇಯಾನ್ ಮಾರ್ಗನ್, ಬ್ರೆಟ್ ಲೀ, ಮೈಕ್ ಹೆಸನ್, ಅನಿಲ್ ಕುಂಬ್ಳೆ, ರಾಬಿನ್ ಉತ್ತಪ್ಪ, ಗ್ರೀಮ್ ಸ್ಮಿತ್, ಸ್ಕಾಟ್ ಸ್ಟೈರಿಸ್, ಸಂಜನಾ ಗಣೇಶನ್, ಸುಹೇಲ್ ಚಾಂಧೋಕ್.

ಹಿಂದಿ: ಜಹೀರ್ ಖಾನ್, ಸುರೇಶ್ ರೈನಾ, ಪಾರ್ಥಿವ್ ಪಟೇಲ್, ಆರ್.ಪಿ. ಸಿಂಗ್, ಪ್ರಗ್ಯಾನ್ ಓಜಾ, ಆಕಾಶ್ ಚೋಪ್ರಾ, ನಿಖಿಲ್ ಚೋಪ್ರಾ, ಸಬಾ ಕರೀಂ, ಅನಂತ್ ತ್ಯಾಗಿ, ರಿಧಿಮಾ ಪಾಠಕ್.

ಮರಾಠಿ: ಕೇದಾರ್ ಜಾಧವ್, ಧವಲ್ ಕುಲಕರ್ಣಿ, ಕಿರಣ್ ಮೋರೆ, ಸಿದ್ಧೇಶ್ ಲಾಡ್, ಪ್ರಸನ್ನ ಸಂತ್‌, ಚೈತನ್ಯ ಸಂತ್, ಕುನಾಲ್ ದಾತೆ.

ಗುಜರಾತಿ: ಅಜಯ್ ಜಡೇಜಾ, ಮನ್‌ಪ್ರೀತ್ ಜುನೇಜಾ, ರಾಕೇಶ್ ಪಟೇಲ್, ಭಾರ್ಗವ್ ಭಟ್, ಶೆಲ್ಡನ್ ಜಾಕ್ಸನ್, ಅತುಲ್ ಬೇಡಡೆ, ಆರ್‌.ಜೆ. ಅಸೀಮ್.

ಭೋಜ್‌ಪುರಿ: ರವಿ ಕಿಶನ್, ಮೊಹಮ್ಮದ್ ಸೈಫ್, ಶಿವಂ ಸಿಂಗ್, ಸತ್ಯ ಪ್ರಕಾಶ್, ಗುಲಾಮ್ ಹುಸೇನ್, ಸೌರಭ್ ಕುಮಾರ್, ವಿಶಾಲ್ ಆದಿತ್ಯ ಸಿಂಗ್, ಶಾಲಿನೀ ಸಿಂಗ್, ಸುಮಿತ್ ಕುಮಾರ್, ಅಶುತೋಷ್ ಅಮನ್.

ಬಂಗಾಲಿ: ಜೂಲನ್ ಗೋಸ್ವಾಮಿ, ಸುಭೋಮೋಯ್ ದಾಸ್, ಶ್ರೀವತ್ಸ್ ಗೋಸ್ವಾಮಿ, ಅನುಸ್ತುಪ್ ಮಜುಂದಾರ್, ಸಂಜೀಬ್ ಮುಖರ್ಜಿ, ಶರದಿಂದು ಮುಖರ್ಜಿ, ಅನಿಂಧ್ಯಾ ಸೇನ್‌ ಗುಪ್ತ, ದೇಬಿ ಸಹಾ.

ಹರ್ಯಾನ್ವಿ: ವೀರೇಂದ್ರ ಸೆಹ್ವಾಗ್, ಮನ್ವಿಂದರ್ ಬಿಸ್ಲಾ, ಸೋನು ಶರ್ಮಾ, ಆರ್‌ಜೆ ಕಿಸ್ನಾ, ರವಿನ್ ಕುಂದು, ಪ್ರೀತಿ ದಹಿಯಾ.

ಮಲಯಾಳಂ: ಸಚಿನ್ ಬೇಬಿ, ರೋಹನ್ ಪ್ರೇಮ್, ರೈಫಿ ಗೊಮೆಜ್, ಸೋನಿ ಚೆರುವತ್ತೂರ್, ಮನು ಕೃಷ್ಣನ್, ವಿ.ಎ. ಜಗದೀಶ್, ಎಂ.ಡಿ. ನಿದೀಶ್, ಅಜು ಜಾನ್ ಥಾಮಸ್, ರೇಣು ಜೋಸೆಫ್, ಬಿನೋಯ್.

ಕನ್ನಡ: ಎಸ್.ಅರವಿಂದ್, ಅಮಿತ್ ವರ್ಮಾ, ವೇದಾ ಕೃಷ್ಣಮೂರ್ತಿ, ಎಚ್.ಎಸ್. ಶರತ್, ಭರತ್ ಚಿಪ್ಲಿ, ಸುಜಯ್ ಶಾಸ್ತ್ರಿ, ರಾಘವೇಂದ್ರ ರಾಜ್, ಸುಮಂತ್ ಭಟ್, ರೀನಾ ಡಿಸೋಜಾ, ಕೆ. ಶ್ರೀನಿವಾಸ್ ಮೂರ್ತಿ, ವಿ. ಕೌಶಿಕ್, ಅಂಕಿತಾ ಅಮರ್.

ತಮಿಳು: ಅಭಿನವ್ ಮುಕುಂದ್, ಆರ್. ಶ್ರೀಧರ್, ಸುಧೀರ್ ಶ್ರೀನಿವಾಸನ್, ಭಗವತಿ ಪ್ರಸಾದ್, ವಿದ್ಯುತ್ ಶಿವರಾಮಕೃಷ್ಣನ್, ಬಾಬಾ ಅಪರಾಜಿತ್, ಬಾಬಾ ಇಂದ್ರಜಿತ್, ಅನಿರುಧ್‌ ಶ್ರೀಕಾಂತ್, ಕೆ.ಬಿ. ಅರುಣ್ ಕಾರ್ತಿಕ್, ಸಮೀನಾ ಅನ್ವರ್, ಅಶ್ವಥ್ ಬೋಬೋ.

ತೆಲುಗು: ಹನುಮ ವಿಹಾರಿ, ವೆಂಕಟಪತಿ ರಾಜು, ಅಕ್ಷತ್ ರೆಡ್ಡಿ, ಆಶಿಶ್ ರೆಡ್ಡಿ, ಸಂದೀಪ್ ಬವನಕ, ಕಲ್ಯಾಣ್ ಕೊಲ್ಲಾರಪು, ಆರ್‌.ಜೆ. ಹೇಮಂತ್, ಪ್ರತ್ಯೂಷಾ, ಆರ್‌.ಜೆ. ಕೌಶಿಕ್, ಸುನಿತಾ ಆನಂದ್.

ಪಂಜಾಬಿ: ಸರಣ್‌ದೀಪ್ ಸಿಂಗ್, ರಾಹುಲ್ ಶರ್ಮಾ, ವಿ.ಆರ್‌.ವಿ. ಸಿಂಗ್, ರೀತೀಂದರ್ ಸಿಂಗ್ ಸೋಧಿ, ಚೇತನ್ ಶರ್ಮಾ, ಸುನಿಲ್ ತನೇಜಾ, ಗುರ್ಜಿತ್ ಸಿಂಗ್, ಬಲರಾಜ್ ಸೈಲ್.

ಹ್ಯಾಂಗ್‌ ಔಟ್‌: ವಿಪುಲ್ ಗೋಯಲ್, ಅಂಗದ್ ಸಿಂಗ್ ಆರ್, ಆದಿತ್ಯ ಕುಲಶ್ರೇಷ್ಠ, ಇಂದರ್ ಸಹಾನಿ, ಆಶಿಶ್ ಸೋಲಂಕಿ, ಶಶಿ ಧಿಮಾನ್, ಕುನಾಲ್ ಸಲೂಜಾ.

Read More
Next Story