ಐಪಿಎಲ್‌ 2024: ಆರ್‌ಸಿಬಿ ಸತತ  7ನೇ ಗೆಲುವು ಸಾಧಿಸುವುದೇ?
x
ಮೇ 18 ಶನಿವಾರದಂದು ಬೆಂಗಳೂರಿನಲ್ಲಿ ನಡೆದ ಐಪಿಎಲ್ 2024ರ ಪಂದ್ಯದಲ್ಲಿ ಸಿಎಸ್‌ಕೆ ವಿರುದ್ಧ ಜಯ ಸಾಧಿಸಿದ ಆರ್‌ಸಿಬಿ ಆಟಗಾರರು

ಐಪಿಎಲ್‌ 2024: ಆರ್‌ಸಿಬಿ ಸತತ 7ನೇ ಗೆಲುವು ಸಾಧಿಸುವುದೇ?


ಅಹಮದಾಬಾದ್, ಮೇ 21: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಮಾಡು ಇಲ್ಲವೇ ಮಡಿ ಐಪಿಎಲ್ ಎಲಿಮಿನೇಟರ್‌ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅವರ ರಾಜಸ್ಥಾನ್ ರಾಯಲ್ಸ್ ಕಠಿಣ ಪರೀಕ್ಷೆ ಎದುರಿಸಲಿದೆ.

ಲೀಗ್ ಹಂತದಲ್ಲಿ ಅಗ್ರ ಸ್ಥಾನವನ್ನು ಗಳಿಸಲು ಸಜ್ಜಾಗಿದ್ದ ರಾಯಲ್ಸ್‌ ತಂಡ, ಆನಂತರ 4‌ ಸೋಲು ಮತ್ತು ಕೆಕೆಆರ್‌ ವಿರುದ್ಧದ ಪಂದ್ಯ ಮಳೆಯಿಂದ ರದ್ದಾದ ಹಿನ್ನೆಲೆಯಲ್ಲಿ 3ನೇ ಸ್ಥಾನಕ್ಕೆ ಕುಸಿಯಿತು. ಮತ್ತೊಂದೆಡೆ, ಆರ್‌ಸಿಬಿ ಟೂರ್ನಿಯಿಂದ ಹೊರಹೋಗುವ ಸ್ಥಿತಿಯಿಂದ ಪ್ಲೇಆಫ್‌ ವರೆಗೆ ಬಂದಿದೆ. ಋತುವಿನಲ್ಲಿ ಮೊದಲ ಎಂಟು ಪಂದ್ಯ ಗಳಲ್ಲಿ ಏಳರಲ್ಲಿ ಸೋಲುಂಡ ನಂತರ, ಫಾಫ್ ಡು ಪ್ಲೆಸಿಸ್ ನೇತೃತ್ವದ ತಂಡ ಕನಸಿನ ಓಟವನ್ನು ಮುಂದುವರಿಸಿದೆ. ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಸೋಲಿಸಿ ಪ್ಲೇಆಫ್ ಸ್ಥಾನ ಗಳಿಸಿದೆ.

ಐಪಿಎಲ್‌ 2008 ರ ವಿಜೇತ ತಂಡವಾದ ಆ‌ರ್‌ ಆರ್‌, ಕೆಲವು ವಾರಗಳ ಹಿಂದೆ ಅಚ್ಚುಮೆಚ್ಚಿನ ತಂಡವಾಗಿತ್ತು. ಇದ್ದಕ್ಕಿದ್ದಂತೆ ದುರ್ಬಲ ವಾದಂತೆ ಕಾಣುತ್ತಿದೆ. ತೇಜಿಯಲ್ಲಿದ್ದಾಗ ರಾಜಸ್ಥಾನ್ ರಾಯಲ್ಸ್ ತಂಡ ಅಜೇಯ. ಆದರೆ, ಕೊನೆಯ ನಾಲ್ಕು ಪಂದ್ಯಗಳು ತಂಡದ ಬ್ಯಾಟಿಂ ಗ್ ಮತ್ತು ಬೌಲಿಂಗ್‌ನಲ್ಲಿರುವ ದೌರ್ಬಲ್ಯವನ್ನು ಬಹಿರಂಗಪಡಿಸಿವೆ. ಜೋಸ್ ಬಟ್ಲರ್ ಅವರ ನಿರ್ಗಮನದಿಂದ ಬ್ಯಾಟಿಂಗ್‌ ಶಕ್ತಿ ಕಡಿಮೆಯಾಗಿದೆ. ಕುಸಿತವನ್ನು ತಡೆಯಲು ಯಶಸ್ವಿ ಜೈಸ್ವಾಲ್ (348 ರನ್), ನಾಯಕ ಸಂಜು ಸ್ಯಾಮ್ಸನ್ (504) ಮತ್ತು ರಿಯಾನ್ ಪರಾಗ್ (531) ಅವರನ್ನು ಅವಲಂಬಿಸಿದೆ.

ಸ್ಯಾಮ್ಸನ್ ಮತ್ತು ಪರಾಗ್ ಮತ್ತೊಮ್ಮೆ ವಿಜೃಂಭಿಸುವ ನಿರೀಕ್ಷೆಯಿದೆ. ಇಂಗ್ಲೆಂಡ್‌ನ ಟಾಮ್ ಕೊಹ್ಲರ್ ಕ್ಯಾಡ್ಮೋರ್ ಅವರು ಜೈಸ್ವಾಲ್‌ಗೆ ಪಾಲುದಾರರಾಗುವ ನಿರೀಕ್ಷೆಯಿದೆ. ಈ ಜೋಡಿ ದುರ್ಬಲ ಆರಂಭಿಕ ಜೋಡಿಯಂತೆ ಕಾಣುತ್ತದೆ. ಕೆಳ ಕ್ರಮಾಂಕದಲ್ಲಿ ಗಟ್ಟಿತನ ನೀಡುವ ಶಿಮ್ರಾನ್ ಹೆಟ್ಮೆಯರ್ ಸ್ಪರ್ಧೆಗೆ ಲಭ್ಯರಾಗುವ ನಿರೀಕ್ಷೆಯಿದೆ.

ಅಹಮದಾಬಾದ್‌ ಸ್ಟೇಡಿಯಂ ಇತರ ಮೈದಾನಗಳಂತೆ ಬ್ಯಾಟಿಂಗ್ ಸ್ವರ್ಗವಲ್ಲ. ಕಡಿಮೆ ಅಂತರದ ಗಡಿರೇಖೆ ಮತ್ತು ಸಿದ್ಧಪಡಿಸಿದ ಟ್ರ್ಯಾಕ್‌ನಿಂದ ಬೌಲರ್‌ಗಳ ಕೆಲಸ ಕಠಿಣಗೊಳ್ಳಲಿದೆ. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಈ ಋತುವಿನ 12 ಇನ್ನಿಂಗ್ಸ್‌ಗಳಲ್ಲಿ ಎರಡು ಬಾರಿ ಮಾತ್ರ 200 ರನ್‌ಗಳ ಗಡಿಯನ್ನು ದಾಟಲಾಗಿದೆ. ಅಂದರೆ, ಶಿಸ್ತಿನ ಬೌಲಿಂಗ್ ದಾಳಿ ಮತ್ತು ಬಲಿಷ್ಠ ಬ್ಯಾಟಿಂಗ್ ಲೈನ್‌ಅಪ್ ಹೊಂದಿರುವ ತಂಡ ಇಲ್ಲಿ ಗೆಲ್ಲುವ ಸಾಧ್ಯತೆ ಹೆಚ್ಚು.

ಆರ್‌ಸಿಬಿಯ ವಿರಾಟ್ ಕೊಹ್ಲಿ 14 ಪಂದ್ಯಗಳಿಂದ 708 ರನ್‌ಗಳೊಂದಿಗೆ ಋತುವಿನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಫಾರ್ಮ್‌ನಲ್ಲಿದ್ದಾರೆ. ರಜತ್ ಪಾಟಿದಾರ್ (ಐದು ಅರ್ಧ ಶತಕ) ಮೇಲಿನ ಹಂತದಲ್ಲಿ ಗಟ್ಟಿ ಬುನಾದಿ ಹಾಕಬಲ್ಲರು. ಇಂಗ್ಲೆಂಡಿನ ವಿಲ್ ಜ್ಯಾಕ್ಸ್‌ ನಿರ್ಗಮನದಿಂದ ಆರ್‌ಸಿಬಿ ಮೇಲೆ ಹೆಚ್ಚು ಪರಿಣಾಮ ಆಗಿಲ್ಲ. ಅನುಭವಿ ದಿನೇಶ್ ಕಾರ್ತಿಕ್ ಕೆಳಹಂತದಲ್ಲಿ 195 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್‌ನೊಂದಿಗೆ ಉತ್ತಮ ಫಾರ್ಮ್‌ನಲ್ಲಿದ್ದಾರೆ.

ಎಡಗೈ ಸೀಮರ್ ಯಶ್ ದಯಾಲ್ ಅವರು ಸಿಎಸ್‌ಕೆ ವಿರುದ್ಧದ ಅಂತಿಮ ಓವರ್ ನಲ್ಲಿ ಆಟದ ದಿಕ್ಕು ಬದಲಿಸಿದರು. ಕಳೆದ ವರ್ಷ ಒಂದು ಓವರ್‌ನಲ್ಲಿ ಸತತ ಐದು ಸಿಕ್ಸರ್‌ ನೀಡಿದ್ದ ದಯಾಳ್, ಈ ವರ್ಷ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ.

ತಂಡಗಳು: ರಾಜಸ್ಥಾನ್ ರಾಯಲ್ಸ್- ಸಂಜು ಸ್ಯಾಮ್ಸನ್ (ನಾಯಕ-ವಿಕೆಟ್‌ ಕೀಪರ್), ಅಬಿದ್ ಮುಷ್ತಾಕ್‌, ಆವೇಶ್ ಖಾನ್, ಧ್ರುವ್ ಜುರೆಲ್, ಡೊನೊವನ್ ಫೆರೇರಾ, ಕುಲದೀಪ್ ಸೇನ್, ಕುನಾಲ್ ಸಿಂಗ್ ರಾಥೋಡ್, ನಾಂದ್ರೆ ಬರ್ಗರ್, ನವದೀಪ್ ಸೈನಿ, ರವಿಚಂದ್ರನ್ ಅಶ್ವಿನ್, ರಿಯಾನ್ ಪರಾಗ್, ಸಂದೀಪ್ ಶರ್ಮಾ, ಶಿಮ್ರಾನ್ ಹೆಟ್ಮಿಯರ್ , ಶುಭಂ ದುಬೆ, ರೋವ್‌ಮನ್ ಪೊವೆಲ್, ಟಾಮ್ ಕೊಹ್ಲರ್-ಕಾಡ್ಮೋರ್, ಟ್ರೆಂಟ್ ಬೌಲ್ಟ್, ಯಶಸ್ವಿ ಜೈಸ್ವಾಲ್, ಯುಜುವೇಂದ್ರ ಚಾಹಲ್, ತನುಷ್ ಕೋಟ್ಯಾನ್.

ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಾಫ್ ಡು ಪ್ಲೆಸಿಸ್ (ನಾಯಕ), ಗ್ಲೆನ್ ಮ್ಯಾಕ್ಸ್‌ವೆಲ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಅನುಜ್ ರಾವತ್, ದಿನೇಶ್ ಕಾರ್ತಿಕ್ (ವಿಕೆಟ್‌ ಕೀಪರ್), ಸುಯಶ್ ಪ್ರಭುದೇಸಾಯಿ, ವಿಲ್ ಜಾಕ್ಸ್, ಮಹಿಪಾಲ್ ಲೊಮ್ರೋರ್, ಕರ್ಣ್ ಶರ್ಮಾ, ಮನೋಜ್ ಭಾಂಡಗೆ, ಮಯಾಂಕ್ ದಾಗರ್, ವಿಜಯ್ ಕುಮಾರ್ ವೈಶಾಕ್ ಆಕಾಶ್ ದೀಪ್, ಮೊಹಮ್ಮದ್ ಸಿರಾಜ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ರಾಜನ್ ಕುಮಾರ್, ಕ್ಯಾಮೆರಾನ್ ಗ್ರೀನ್, ಅಲ್ಜಾರಿ ಜೋಸೆಫ್, ಯಶ್ ದಯಾಳ್, ಟಾಮ್ ಕುರ್ರನ್, ಲಾಕಿ ಫರ್ಗುಸನ್, ಸ್ವಪ್ನಿಲ್ ಸಿಂಗ್ ಮತ್ತು ಸೌರವ್ ಚೌಹಾನ್.

ಪಂದ್ಯ ಸಂಜೆ 7:30 ಕ್ಕೆ ಪ್ರಾರಂಭವಾಗುತ್ತ

Read More
Next Story