ಐಪಿಎಲ್‌ 2024:  ಆರ್ಸಿಬಿ ವಿರುದ್ಧ ಲಕ್ನೋಗೆ ಜಯ
x

ಐಪಿಎಲ್‌ 2024: ಆರ್ಸಿಬಿ ವಿರುದ್ಧ ಲಕ್ನೋಗೆ ಜಯ


ಏಪ್ರಿಲ್ 3- ಬೆಂಗಳೂರಿನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಕ್ವಿಂಟನ್ ಡಿ ಕಾಕ್ ಅವರ ಅಬ್ಬರದ ಅರ್ಧ ಶತಕ ಮತ್ತು ವೇಗಿ ಮಯಂಕ್ ಯಾದವ್ ಅವರ ಮಿಂಚಿನ ಚೆಂಡೆಸೆತದಿಂದ ಲಕ್ನೋ ಸೂಪರ್ ಜೈಂಟ್ಸ್ 28 ರನ್‌ ಜಯ ಸಾಧಿಸಿತು.

ಕಾಕ್ ಅವರ 81 (56 ಚೆಂಡು) ಮತ್ತು ನಿಕೋಲಸ್ ಪೂರನ್ ಅವರ ಅಜೇಯ 40 (21 ಚೆಂಡು)ರನ್‌ ನೆರವಿನಿಂದ ಲಕ್ನೋ 5 ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿತು. 13 ಎಸೆತಗಳಲ್ಲಿ 33 ರನ್ ಗಳಿಸಿದ ಮಹಿಪಾಲ್ ಲೊಮ್ರೋರ್ ಮೂಲಕ ಆರ್‌ಸಿಬಿ 182 ರನ್ ದಾಟುವ ಸಾಧ್ಯತೆ ಇದ್ದಿತ್ತು. ಆದರೆ, ಮಯಂಕ್ ಅವರ ಮಾರಕ ಬೌಲಿಂಗ್‌ (3/14) ನಿಂದ ಆತಿಥೇಯರು 153 ಕ್ಕೆ ಆಲೌಟ್ ಆದರು.

ಆರ್‌ ಸಿಬಿ ಚೇಸ್: ವಾಸ್ತವವೆಂದರೆ, ಆರ್‌ಸಿಬಿ ಸ್ವಂತ ಮೂರ್ಖತನದಿಂದ ಮತ್ತು ಭಾಗಶಃ ಲಕ್ನೋ ಬೌಲರ್‌ಗಳ ಶ್ರೇಷ್ಠ ಬೌಲಿಂಗ್‌ನಿಂದ ಗುರಿ ಮುಟ್ಟುವಲ್ಲಿ ವಿಫಲವಾಯಿತು ಎನ್ನಬಹುದು. ಮಣಿಮಾರನ್ ಸಿದ್ಧಾರ್ಥ್ ಮತ್ತು ಕೃನಾಲ್ ಪಾಂಡ್ಯ ಅವರ ಸ್ಪಿನ್‌ ದಾಳಿಯೊಂದಿಗೆ ಲಕ್ನೋ ಆಟ ಆರಂಭಿಸಿತು. ಫಾಫ್ ಡು ಪ್ಲೆಸಿಸ್ (13 ಎಸೆತಗಳಲ್ಲಿ 19) ಮತ್ತು ವಿರಾಟ್ ಕೊಹ್ಲಿ (16 ಎಸೆತಗಳಲ್ಲಿ 22) ಉತ್ತಮವಾಗಿ ಇನ್ನಿಂಗ್ಸ್‌ ಆರಂಭಿಸಿದರು. ಆದರೆ, ವೇಗಿ ನವೀನ್ಉಲ್‌ ಹಕ್ ಅವರನ್ನು ದಂಡಿಸಿದ ಕೊಹ್ಲಿ, ಬೌಲರ್‌ನ ತಲೆ ಮೇಲೆ ಚೆಂಡನ್ನು ಸಿಕ್ಸರ್‌ಗೆ ಅಟ್ಟಿದರು. ಎಡಗೈ ಸ್ಪಿನ್ನರ್ ಸಿದ್ಧಾರ್ಥ್ ಶೀಘ್ರವೇ ಕೊಹ್ಲಿ ವಿಕೆಟ್ ಪಡೆದರು; ದೇವದತ್ ಪಡಿಕ್ಕಲ್‌ ಸರಳವಾದ ಕ್ಯಾಚ್‌ ಹಿಡಿದರು. ಆರ್‌ಸಿಬಿ ಈ ಹಂತದಲ್ಲಿ ನಾಯಕ ಡು ಪ್ಲೆಸಿಸ್ ಅನ್ನು ರನೌಟ್‌ ಮೂಲಕ ಕಳೆದುಕೊಂಡಿತು. ಎಂಟನೇ ಓವರ್‌ನಲ್ಲಿ ಸ್ಕೋರ್‌ 4 ವಿಕೆಟ್‌ಗೆ 58 ರನ್ ಆಗಿತ್ತು. ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಕ್ಯಾಮರೂನ್ ಗ್ರೀನ್ ಅಂಕಣದಲ್ಲಿದ್ದರು.

ಮಯಂಕ್ ಅವರ ವೇಗ: ಮಯಂಕ್ ತಮ್ಮ ಮೂರು ಓವರ್‌ಗಳ ಸ್ಪೆಲ್‌ನಲ್ಲಿ ವೇಗವನ್ನು ಹೆಚ್ಚಿಸಿಕೊಂಡರು(3-0-13-2). ಮಯಂಕ್‌ ಗಂಟೆಗೆ 151 ಕಿಮೀ ವೇಗದಲ್ಲಿ ಎಸೆದ ಚೆಂಡನ್ನುಮ್ಯಾಕ್ಸ್‌ ವೆಲ್ ತಳ್ಳಲು ಯತ್ನಿಸಿದರು. ಆದರೆ, ಹೆಚ್ಚಿನ ವೇಗದಿಂದಾಗಿ ಪುಟಿದ ಚೆಂಡು ಶಾರ್ಟ್ ಮಿಡ್‌ ವಿಕೆಟ್‌ನಲ್ಲಿ ಪೂರನ್‌ ಕೈ ಸೇರಿತು.ಮಯಂಕ್‌ ರ ಕಚ್ಚಾ ವೇಗದಿಂದ ಗ್ರೀನ್ ಔಟಾದರು. ಆನಂತರ ರಜತ್ ಪಾಟಿದಾರ್ (27) ಅವರನ್ನು ಮಯಂಕ್‌ ಬಲೆಗೆ ಕೆಡವಿದರು. ಆರ್‌ಸಿಬಿ ಆರು ವಿಕೆಟ್‌ಗೆ 103 ರನ್‌ ಗಳಿಸಿತ್ತು.

ಡಿ ಕಾಕ್ ಅವರ ಬ್ಯಾಟಿಂಗ್: ಇದಕ್ಕೂ ಮೊದಲು ಡಿ ಕಾಕ್ ಅಸಾಧಾರಣ ಕೌಶಲದಿಂದ ಅರ್ಧ ಶತಕ ಗಳಿಸಿದರು. ಸೂಪರ್‌ ಜೈಂಟ್ಸ್‌ ತಂಡ ಮೂರು ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 32 ರನ್, ಆನಂತರ ಪವರ್ ಪ್ಲೇನಲ್ಲಿ 54 ರನ್ ಗಳಿಸಿತು. ಹೆಚ್ಚಿನ ರನ್‌ಗಳು ಡಿ ಕಾಕ್‌ ಅವರಿಂದ ಬಂದವು. ಅವರು ವೇಗಿ ಮೊಹಮ್ಮದ್ ಸಿರಾಜ್‌ ಅವರನ್ನು ದಂಡಿಸಿದರು. ಎರಡು ಓವರ್‌ಗಳಲ್ಲಿ ಮೂರು ಸಿಕ್ಸರ್‌ ಹೊಡೆದರು.

ಕೆ.ಎಲ್. ರಾಹುಲ್, ಮೊದಲ 10 ಎಸೆತಗಳಲ್ಲಿ ಕೇವಲ ಆರು ರನ್ ಗಳಿಸಿದರು. ಆನಂತರ, ಎಡಗೈ ವೇಗಿ ಯಶ್ ದಯಾಲ್ ಹಾಗೂ ಸ್ಪಿನ್ನರ್ ಮ್ಯಾಕ್ಸ್‌ ವೆಲ್ ಅವರನ್ನು ದಂಡಿಸಿದರು. ಆದರೆ, ಮ್ಯಾಕ್ಸ್‌ವೆಲ್ ಅವರ ಗುಡ್ ಲೆಂಗ್ತ್ ಎಸೆತವನ್ನು ಮಯಂಕ್ ದಾಗರ್ ಅವರ ಕೈಗೆ ಒಪ್ಪಿಸಿದರು. ಡಿ ಕಾಕ್ ಮತ್ತು ಮಾರ್ಕಸ್ ಸ್ಟೊಯಿನಿಸ್ (24, 15 ಚೆಂಡು) ಮೂರನೇ ವಿಕೆಟ್‌ಗೆ 30 ಎಸೆತಗಳಲ್ಲಿ 56 ರನ್‌ ಸೇರಿಸಿದರು.

ಆಗ ಲಕ್ನೋ 16.3 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ಗಳಿಗೆ 143 ರನ್ ಗಳಿಸಿತ್ತು. ಪೂರನ್‌ ಎಡಗೈ ಆಟಗಾರ ಟೋಪ್ಲಿ ಅವರನ್ನು 19ನೇ ಓವರ್‌ನಲ್ಲಿ ಸತತ ಮೂರು ಸಿಕ್ಸರ್‌ ಮತ್ತು ಮೊಹಮ್ಮದ್ ಸಿರಾಜ್ ಅವರ ಅಂತಿಮ ಓವರ್‌ನಲ್ಲಿ ಎರಡು ಸಿಕ್ಸರ್‌ ಸಿಡಿಸಿ, ಸವಾಲು ಎಸೆಯುವ ಮೊತ್ತ ಸೇರಿಸುವಲ್ಲಿ ಯಶಸ್ವಿಯಾದರು.

ಆರ್‌ ಸಿಬಿ: ವಿರಾಟ್ ಕೊಹ್ಲಿ ಸಿ ಪಡಿಕ್ಕಲ್ ಬಿ ಎಂ. ಸಿದ್ಧಾರ್ಥ್ 22, ಫಾಫ್ ಡು ಪ್ಲೆಸಿಸ್ ರನೌಟ್ (ಪಡಿಕ್ಕಲ್) 19, ರಜತ್ ಪಾಟಿದಾರ್ ಸಿ ಪಡಿಕ್ಕಲ್ ಬಿ ಮಯಂಕ್ ಯಾದವ್ 29, ಗ್ಲೆನ್ ಮ್ಯಾಕ್ಸ್‌ವೆಲ್ ಸಿ ಪೂರನ್ ಬಿ ಮಯಂಕ್ ಯಾದವ್ 0, ಕ್ಯಾಮರೂನ್ ಗ್ರೀನ್ ಬಿ ಮಯಂಕ್ 9, ಅನುಜ್‌ ರಾವತ್‌ ಸಿ ಪಡಿಕ್ಕಲ್‌ ಬಿ ಸ್ಟೋನಿಯಿಸ್‌ 11, ಮಹಿಪಾಲ್ ಲೊಮ್ರೋರ್ ಸಿ ಪೂರನ್ ಬಿ ಯಶ್ ಠಾಕೂರ್ 33, ದಿನೇಶ್ ಕಾರ್ತಿಕ್ ಸಿ ರಾಹುಲ್ ಬಿ ನವೀನ್-ಉಲ್-ಹಕ್ 4, ಮಯಂಕ್ ಡಾಗರ್ ರನೌಟ್ (ಪೂರನ್) 0, ರೀಸ್ ಟೋಪ್ಲಿ ಔಟಾಗದೆ 3, ಮೊಹಮ್ಮದ್ ಸಿರಾಜ್ ಸಿ ಪೂರನ್ ಬಿ ನವೀನ್-ಉಲ್-ಹಕ್ 12, ಎಕ್ಸ್‌ಟ್ರಾ 11 (ಎಲ್‌ಬಿ‌ 3 , ವೈಡ್ 8). ಒಟ್ಟು 153 (10 ವಿಕೆಟ್‌, 19.4 ಓವರ್‌).ವಿಕೆಟ್ ಪತನ: 40-1, 42-2, 43-3, 58-4, 94-5, 103-6, 136-7, 137-8, 138-9, 153-10.

ಬೌಲಿಂಗ್: ಮಣಿಮಾರನ್ ಸಿದ್ಧಾರ್ಥ್ 3-0-21-1, ಕೃನಾಲ್ ಪಾಂಡ್ಯ 1-0-10-0, ನವೀನ್-ಉಲ್-ಹಕ್ 3.4-0-25-2, ಮಯಂಕ್ ಯಾದವ್ 4-0-14-3, ರವಿ ಬಿಷ್ಣೋಯ್ 3-0 -33-0, ಯಶ್ ಠಾಕೂರ್ 4-0-38-1, ಮಾರ್ಕಸ್ ಸ್ಟೊಯಿನಿಸ್ 1-0-9-1.

ಲಕ್ನೋ ಸೂಪರ್ ಜೈಂಟ್ಸ್: ಕ್ವಿಂಟನ್ ಡಿ ಕಾಕ್ ಸಿ ಮಯಂಕ್ ಡಾಗರ್ ಬಿ ಆರ್ ಟಾಪ್ಲಿ 81, ಕೆಎಲ್ ರಾಹುಲ್ ಸಿ ಮಯಂಕ್ ಡಾಗರ್ ಬಿ ಮ್ಯಾಕ್ಸ್‌ವೆಲ್ 20, ದೇವದತ್ ಪಡಿಕ್ಕಲ್ ಸಿ ಅನುಜ್ ರಾವತ್ ಬಿ ಸಿರಾಜ್ 6, ಮಾರ್ಕಸ್ ಸ್ಟೊಯಿನಿಸ್ ಸಿ ಮಯಂಕ್ ಡಾಗರ್ ಬಿ ಮ್ಯಾಕ್ಸ್‌ವೆಲ್ 24, ನಿಕೋಲಸ್ ಪೂರನ್ ಔಟಾಗದೆ 40, ಆಯುಷ್‌ ಬಡೋನಿ ಔಟಾಗದೆ 40, ಯಶ್ ದಯಾಳ್ 0, ಕೃನಾಲ್ ಪಾಂಡ್ಯ ಔಟಾಗದೆ 0. ಎಕ್ಸ್‌ಟ್ರಾಗಳು:10 (ವೈಡ್‌ 10). ಒಟ್ಟು: (5 ವಿಕೆಟ್, 20 ಓವರ್‌) 181. ವಿಕೆಟ್‌ಗಳ ಪತನ: 53-1, 73-2, 129-3, 143-4, 148-5

ಬೌಲಿಂ‌ಗ್: ರೀಸ್ ಟೋಪ್ಲಿ 4-0-39-1, ಯಶ್ ದಯಾಳ್ 4-0-24-1, ಮೊಹಮ್ಮದ್ ಸಿರಾಜ್ 4-0-47-1, ಗ್ಲೆನ್ ಮ್ಯಾಕ್ಸ್‌ವೆಲ್ 4-0-23-2, ಮಯಂಕ್ ಡಾಗರ್ 2-0-23- 0, ಕ್ಯಾಮರೂನ್ ಗ್ರೀನ್ 2-0-25-0.

Read More
Next Story