ಐಪಿಎಲ್ 2024: ಪ್ರಶಸ್ತಿ ವಿಜೇತರ ಪಟ್ಟಿ, ಬಹುಮಾನ, ದಾಖಲೆ
ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್)ತಂಡವು ಐಪಿಎಲ್ 2024 ರ ಚಾಂಪಿಯನ್ ಆಗಿ ಹೊರಹೊಮ್ಮಿತು. ಅಂತಿಮ ಪಂದ್ಯದ ನಂತರ ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಹಲವು ವೈಯಕ್ತಿಕ ಪ್ರಶಸ್ತಿಗಳನ್ನು ನೀಡಲಾಯಿತು.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 17 ನೇ ಆವೃತ್ತಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಚಾಂಪಿಯನ್ ಆಗಿ ಹೊರಹೊಮ್ಮಿತು.
ಮೊದಲು ಬ್ಯಾಟ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ 18.3 ಓವರ್‌ಗಳಲ್ಲಿ 113 ರನ್‌ಗಳ ಅಲ್ಪ ಮೊತ್ತ ಗಳಿಸಿತು. ಪ್ರತಿಯಾಗಿ, ಕೆಕೆಆರ್ ಕೇವಲ 10.3 ಓವರ್‌ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು, ಮೂರನೇ ಬಾರಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
ಸಮಾರಂಭದಲ್ಲಿ ಹಲವು ಪ್ರಶಸ್ತಿಗಳನ್ನು ನೀಡಲಾಯಿತು.,
ಫೈನಲ್ ಆಟಗಾರ: ಮಿಚೆಲ್ ಸ್ಟಾರ್ಕ್ (ಕೆಕೆಆರ್), ಬಹುಮಾನ 5 ಲಕ್ಷ ರೂ., 3 ಓವರ್‌ಗಳಲ್ಲಿ 2/14
ಬ್ಯಾಟರ್: ವೆಂಕಟೇಶ್ ಅಯ್ಯರ್ (ಕೆಕೆಆರ್) - 1 ಲಕ್ಷ ರೂ. 23 ಎಸೆತಗಳಲ್ಲಿ ಔಟಾಗದೆ 56
ಫ್ಯಾಂಟಸಿ ಆಟಗಾರ: ಮಿಚೆಲ್ ಸ್ಟಾರ್ಕ್ 1 ಲಕ್ಷ ರೂ.
ಸೂಪರ್ ಸಿಕ್ಸರ್: ವೆಂಕಟೇಶ್ ಅಯ್ಯರ್ 1 ಲಕ್ಷ ರೂ.
ಬೌಂಡರಿಗಳು: ರಹಮಾನುಲ್ಲಾ ಗುರ್ಬಾಜ್ (ಕೆಕೆಆರ್) 1 ಲಕ್ಷ ರೂ. ಫೈನಲ್‌ನಲ್ಲಿ 5 ಬೌಂಡರಿ
ಗ್ರೀನ್ ಡಾಟ್ ಬಾಲ್‌ಗಳು: ಹರ್ಷಿತ್ ರಾಣಾ (ಕೆಕೆಆರ್) - 1 ಲಕ್ಷ ರೂ. 13 ಡಾಟ್ ಬಾಲ್
ಋತುವಿನ ಪ್ರಶಸ್ತಿಗಳು (ಟ್ರೋಫಿ ಜೊತೆಗೆ ಬಹುಮಾನದ ಹಣ):
ವಿಜೇತರು: ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್); ಬಹುಮಾನದ ಮೊತ್ತ 20 ಕೋಟಿ ರೂ.
ರನ್ನರ್ ಅಪ್: ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಎಚ್) 12.5 ಕೋಟಿ ರೂ.
ಫೇರ್ ಪ್ಲೇ ಪ್ರಶಸ್ತಿ: ಸನ್ ರೈಸರ್ಸ್ ಹೈದರಾಬಾದ್ (173 ಅಂಕ) 10 ಲಕ್ಷ ರೂ.
ಆರೆಂಜ್ ಕ್ಯಾಪ್: ವಿರಾಟ್ ಕೊಹ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ), 15 ಇನಿಂಗ್ಸ್‌ಗಳಲ್ಲಿ 741 ರನ್. ಸರಾಸರಿ: 61.75. ಸ್ಟ್ರೈಕ್ ರೇಟ್: 154.69. ಶತಕ 1, ಅರ್ಧಶತಕ 5, ಬೌಂಡರಿ 62, ಸಿಕ್ಸರ್ 38, ಔಟಾಗದೆ ಗರಿಷ್ಠ ಸ್ಕೋರ್ 113. 10 ಲಕ್ಷ ರೂ.
ಪರ್ಪಲ್ ಕ್ಯಾಪ್: ಹರ್ಷಲ್ ಪಟೇಲ್, ಪಂಜಾಬ್ ಕಿಂಗ್ಸ್ (ಪಿಬಿಕೆಎಸ್). 14 ಇನ್ನಿಂಗ್ಸ್‌ಗಳಲ್ಲಿ 24 ವಿಕೆಟ್, ಅತ್ಯುತ್ತಮ ಬೌಲಿಂಗ್ 3/15, ಸರಾಸರಿ 19.87, ಎಕಾನಮಿ 9.73, ಸ್ಟ್ರೈಕ್ ರೇಟ್ 12.25. 10 ಲಕ್ಷ ರೂ.
ಉದಯೋನ್ಮುಖ ಆಟಗಾರ: ನಿತೀಶ್ ರೆಡ್ಡಿ (ಸನ್‌ರೈಸರ್ಸ್). 11 ಇನ್ನಿಂಗ್ಸ್‌ಗಳಲ್ಲಿ 303 ರನ್ ಮತ್ತು 7 ಇನ್ನಿಂಗ್ಸ್‌ಗಳಲ್ಲಿ 3 ವಿಕೆಟ್. 10 ಲಕ್ಷ ರೂ.
ಅತ್ಯಮೂಲ್ಯ ಆಟಗಾರ: ಸುನಿಲ್ ನರೈನ್ (ಕೆಕೆಆರ್) 450 ಅಂಕ. 14 ಇನ್ನಿಂಗ್ಸ್‌ಗಳಲ್ಲಿ 488 ರನ್; 14 ಇನ್ನಿಂಗ್ಸ್‌ಗಳಲ್ಲಿ 17 ವಿಕೆಟ್. 10 ಲಕ್ಷ ರೂ.
ಅಲ್ಟಿಮೇಟ್ ಫ್ಯಾಂಟಸಿ ಆಟಗಾರ: ಸುನಿಲ್ ನರೈನ್ , 1,321 ಅಂಕಗಳು. 10 ಲಕ್ಷ ರೂ.
ಅತಿ ಹೆಚ್ಚು ಸಿಕ್ಸ್‌ಗಳು: ಅಭಿಷೇಕ್ ಶರ್ಮಾ (ಎಸ್‌ಆರ್‌ಹೆಚ್) 42 ಸಿಕ್ಸರ್. 10 ಲಕ್ಷ ರೂ.
ಅತಿ ಹೆಚ್ಚು ಬೌಂಡರಿಗಳು: ಟ್ರಾವಿಸ್ ಹೆಡ್ (ಎಸ್ಆರ್ಹೆಚ್) 64 ಬೌಂಡರಿ. 10 ಲಕ್ಷ ರೂ.
ಎಲೆಕ್ಟ್ರಿಕ್ ಸ್ಟ್ರೈಕರ್: ಜೇಕ್ ಫ್ರೇಸರ್ ಮೆಕ್‌ಗುರ್ಕ್ (ದೆಹಲಿ ಕ್ಯಾಪಿಟಲ್ಸ್). 9 ಇನ್ನಿಂಗ್ಸ್‌ಗಳಲ್ಲಿ 234.04 ಸ್ಟ್ರೈಕ್ ರೇಟ್‌ನಲ್ಲಿ 330 ರನ್. 10 ಲಕ್ಷ ರೂ.
ಕ್ಯಾಚ್: ರಮಣದೀಪ್ ಸಿಂಗ್ (ಕೆಕೆಆರ್), 10 ಲಕ್ಷ ರೂ.
ಪಿಚ್ ಮತ್ತು ಗ್ರೌಂಡ್ ಪ್ರಶಸ್ತಿ: ಹೈದರಾಬಾದಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ. 50 ಲಕ್ಷ ರೂ.
ಅಂಕಿಅಂಶಗಳು:
ಒಟ್ಟು ಸಿಕ್ಸರ್‌ಗಳ ಸಂಖ್ಯೆ: 1,260 ಸಿಕ್ಸರ್ (ಐಪಿಎಲ್‌ನ ಒಂದು ಋತುವಿನಲ್ಲಿ ಹೆಚ್ಚು)
ಒಟ್ಟು ಬೌಂಡರಿಗಳು: 2,174 ಬೌಂಡರಿಗಳು
ಗರಿಷ್ಠ ವೈಯಕ್ತಿಕ ಸ್ಕೋರ್: ಮಾರ್ಕಸ್ ಸ್ಟೊಯಿನಿಸ್ (ಲಕ್ನೋ ಸೂಪರ್ ಜೈಂಟ್ಸ್) . ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 124 ಔಟಾಗದೆ
ಅತ್ಯುತ್ತಮ ಬೌಲಿಂಗ್: ಸಂದೀಪ್ ಶರ್ಮಾ (ರಾಜಸ್ಥಾನ್ ರಾಯಲ್ಸ್). ಜೈಪುರದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 4 ಓವರ್‌ಗಳಲ್ಲಿ 5/೧೮
ಹೆಚ್ಚು ಡಾಟ್ ಬಾಲ್: ಜಸ್ಪ್ರೀತ್ ಬುಮ್ರಾ (ಮುಂಬೈ ಇಂಡಿಯನ್ಸ್). 13 ಇನ್ನಿಂಗ್ಸ್‌ಗಳಲ್ಲಿ 149 ಡಾಟ್ ಬಾಲ್
ಹೆಚ್ಚು ಮೇಡನ್: ಭುವನೇಶ್ವರ್ ಕುಮಾರ್, ಖಲೀಲ್ ಅಹ್ಮದ್ (ತಲಾ 2 ಮೇಡನ್)
ಹೆಚ್ಚು ರನ್: ಮೋಹಿತ್ ಶರ್ಮಾ (ಗುಜರಾತ್ ಟೈಟಾನ್ಸ್). ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 4 ಓವರ್‌ಗಳಲ್ಲಿ 0/73
ಕೆಲವು ದಾಖಲೆಗಳು:
ಸನ್ ರೈಸರ್ಸ್ ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ಮೊತ್ತ ಗಳಿಸಿತು. ಬೆಂಗಳೂರಿನಲ್ಲಿ ಆರ್‌ಸಿಬಿ ವಿರುದ್ಧ 287/3.
ಪಂಜಾಬ್ ಕಿಂಗ್ಸ್ ಈಡನ್ ಗಾರ್ಡನ್ಸ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧ 262 ರನ್ ಬೆನ್ನಟ್ಟಿದ್ದರು. ಇದು ಟಿ20 ಇತಿಹಾಸದಲ್ಲಿ ಗರಿಷ್ಠ ಯಶಸ್ವಿ ರನ್ ಚೇಸ್.
ಪಂಜಾಬ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಪಂದ್ಯವು ವಿಶ್ವ ದಾಖಲೆಯ 42 ಸಿಕ್ಸರ್‌ಗಳಿಗೆ ಸಾಕ್ಷಿಯಾಗಿದೆ. ಇದು ಟಿ20 ಪಂದ್ಯದಲ್ಲಿ ಗರಿಷ್ಠ.
ಬೆಂಗಳೂರಿನಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ವಿರುದ್ಧ ಸನ್ ರೈಸರ್ಸ್ ಪಂದ್ಯದಲ್ಲಿ 549 ರನ್ ಗರಿಷ್ಠ ಮೊತ್ತ ದಾಖಲಾಗಿದೆ. ಸನ್ ರೈಸರ್ಸ್ 287/3 ಸ್ಕೋರ್ ಮತ್ತು ರಾಯಲ್ ಚಾಲೆಂಜರ್ಸ್ 262/7.
ಎಸ್‌ಆರ್‌ಹೆಚ್ ಅತ್ಯಂತ ಕಡಿಮೆ ರನ್ ದಾಖಲಿಸಿದೆ- 113 ಆಲೌಟ್.
ವಿರಾಟ್ ಕೊಹ್ಲಿ (ಆರ್‌ಸಿಬಿ) ಐಪಿಎಲ್ ಇತಿಹಾಸದಲ್ಲಿ 8,000 ರನ್ ಪೂರೈಸಿದ ಮೊದಲ ಬ್ಯಾಟರ್ ಎನಿಸಿಕೊಂಡರು.244 ಇನ್ನಿಂಗ್ಸ್‌ಗಳಲ್ಲಿ (252 ಪಂದ್ಯ) 8 ಶತಕ ಮತ್ತು 55 ಅರ್ಧ ಶತಕಗಳೊಂದಿಗೆ 8,004 ರನ್ ಗಳಿಸಿದ್ದಾರೆ.
ಯುಜುವೇಂದ್ರ ಚಹಾಲ್ (ರಾಜಸ್ಥಾನ್ ರಾಯಲ್ಸ್) ಐಪಿಎಲ್ ಇತಿಹಾಸದಲ್ಲಿ 200 ವಿಕೆಟ್ ಗಳಿಸಿದ ಮೊದಲ ಬೌಲರ್ ಎನಿಸಿಕೊಂಡರು. ಅವರು 159 ಇನ್ನಿಂಗ್ಸ್‌ಗಳಲ್ಲಿ (160 ಪಂದ್ಯ) 205 ವಿಕೆಟ್ ಗಳಿಸಿದ್ದಾರೆ. ಅವರ ಅತ್ಯುತ್ತಮ ಬೌಲಿಂಗ್ 5/40.
ಈ ಋತುವಿನಲ್ಲಿ 200+ ಮೊತ್ತ - 41
ವೈಯಕ್ತಿಕ 100 ಸ್ಕೋರ್ - 14
ವಿಜೇತ ಕೆಕೆಆರ್ ತಂಡ: ಶ್ರೇಯಸ್ ಅಯ್ಯರ್ (ನಾಯಕ), ಫಿಲ್ ಸಾಲ್ಟ್, ಕೆಎಸ್ ಭರತ್, ರಹಮಾನುಲ್ಲಾ ಗುರ್ಬಾಜ್, ರಿಂಕು ಸಿಂಗ್, ಆಂಗ್‌ಕ್ರಿಶ್ ರಘುವಂಶಿ, ಶೆರ್ಫಾನ್ ರುದರ್‌ಫೋರ್ಡ್, ಮನೀಶ್ ಪಾಂಡೆ, ಆಂಡ್ರೆ ರಸೆಲ್, ನಿತೀಶ್ ರಾಣಾ, ವೆಂಕಟೇಶ್ ಅಯ್ಯರ್, ಅನುಕುಲ್ ರಾಯ್, ರಮಣದೀಪ್ ಸಿಂಗ್, ವರುಣ್ ಚಕ್ರವರ್ತಿ, ವರುಣ್ ಚಕ್ರವರ್ತಿ , ಚೇತನ್ ಸಕರಿಯಾ, ಹರ್ಷಿತ್ ರಾಣಾ, ಸುಯಶ್ ಶರ್ಮಾ, ಮಿಚೆಲ್ ಸ್ಟಾರ್ಕ್, ದುಷ್ಮಂತ ಚಮೀರಾ, ಸಾಕಿಬ್ ಹುಸೇನ್ ಮತ್ತು ಮುಜೀಬ್ ಉರ್ ರೆಹಮಾನ್.