IndiGo Flight Suffers Bird Hit While Landing in Rishikesh 186 Passengers Safe After Close Call
x

ಸಾಂದರ್ಭಿಕ ಚಿತ್ರ

ಲ್ಯಾಂಡಿಂಗ್ ವೇಳೆ ಇಂಡಿಗೋ ವಿಮಾನಕ್ಕೆ ಹಕ್ಕಿ ಡಿಕ್ಕಿ; ಕೂದಲೆಳೆ ಅಂತರದಲ್ಲಿ 186 ಪ್ರಯಾಣಿಕರು ಪಾರು!

ಡೆಹ್ರಾಡೂನ್‌ನ ಜಾಲಿ ಗ್ರಾಂಟ್ ವಿಮಾನ ನಿಲ್ದಾಣದಲ್ಲಿ (Jolly Grant Airport) ಈ ಘಟನೆ ವರದಿಯಾಗಿದೆ. ಮುಂಬೈನಿಂದ ಆಗಮಿಸಿದ್ದ ಇಂಡಿಗೋ ಸಂಸ್ಥೆಯ 'ಐಜಿಒ 5032' (Indigo flight IGO 5032) ವಿಮಾನವು ಸಂಜೆ 6.45ರ ಸುಮಾರಿಗೆ ರನ್‌ವೇಯಲ್ಲಿ ಲ್ಯಾಂಡ್ ಆಗಿತ್ತು.


Click the Play button to hear this message in audio format

ಮುಂಬೈನಿಂದ ಉತ್ತರಾಖಂಡದ ಋಷಿಕೇಶಕ್ಕೆ ಬಂದಿಳಿದ ಇಂಡಿಗೋ ವಿಮಾನವೊಂದಕ್ಕೆ ಹಕ್ಕಿ ಡಿಕ್ಕಿ ಹೊಡೆದ ಘಟನೆ ಭಾನುವಾರ ಸಂಜೆ ನಡೆದಿದೆ. ಅದೃಷ್ಟವಶಾತ್ ಪೈಲಟ್ ಸಮಯಪ್ರಜ್ಞೆಯಿಂದ ಭಾರೀ ಅವಘಡವೊಂದು ತಪ್ಪಿದ್ದು, ವಿಮಾನದಲ್ಲಿದ್ದ ಎಲ್ಲ 186 ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ.

ಮುಂಬೈನಿಂದ ಬಂದಿದ್ದ ವಿಮಾನ

ಡೆಹ್ರಾಡೂನ್‌ನ ಜಾಲಿ ಗ್ರಾಂಟ್ ವಿಮಾನ ನಿಲ್ದಾಣದಲ್ಲಿ (Jolly Grant Airport) ಈ ಘಟನೆ ವರದಿಯಾಗಿದೆ. ಮುಂಬೈನಿಂದ ಆಗಮಿಸಿದ್ದ ಇಂಡಿಗೋ ಸಂಸ್ಥೆಯ 'ಐಜಿಒ 5032' (Indigo flight IGO 5032) ವಿಮಾನವು ಸಂಜೆ 6.45ರ ಸುಮಾರಿಗೆ ರನ್‌ವೇಯಲ್ಲಿ ಲ್ಯಾಂಡ್ ಆಗಿತ್ತು. ಲ್ಯಾಂಡಿಂಗ್ ಆದ ಕೆಲವೇ ಕ್ಷಣಗಳಲ್ಲಿ ಹಕ್ಕಿಯೊಂದು ವಿಮಾನದ ಮುಂಭಾಗಕ್ಕೆ (Nose area) ಬಲವಾಗಿ ಅಪ್ಪಳಿಸಿದೆ.

ವಿಮಾನದ ಮುಂಭಾಗಕ್ಕೆ ಹಾನಿ

ಹಕ್ಕಿ ಡಿಕ್ಕಿ ಹೊಡೆದ ರಭಸಕ್ಕೆ ವಿಮಾನದ ಮುಂಭಾಗದ ಕೋನ್ (Nose cone) ಭಾಗಕ್ಕೆ ಹಾನಿಯಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಘಟನೆಯಿಂದಾಗಿ ವಿಮಾನದಲ್ಲಿದ್ದ ಪ್ರಯಾಣಿಕರಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಆದರೂ, ವಿಮಾನ ಸುರಕ್ಷಿತವಾಗಿ ನಿಂತಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

186 ಪ್ರಯಾಣಿಕರು ಸುರಕ್ಷಿತ

ಘಟನೆ ಸಂಭವಿಸಿದಾಗ ವಿಮಾನದಲ್ಲಿ ಒಟ್ಟು 186 ಪ್ರಯಾಣಿಕರಿದ್ದರು. ಎಲ್ಲ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗಿದೆ ಎಂದು ಏರ್‌ಲೈನ್ಸ್ ಮೂಲಗಳು ತಿಳಿಸಿವೆ. ಘಟನೆ ನಡೆದ ತಕ್ಷಣವೇ ವಿಮಾನ ನಿಲ್ದಾಣದ ಅಧಿಕಾರಿಗಳು ಮತ್ತು ತಾಂತ್ರಿಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ರನ್‌ವೇಯನ್ನು ಕೂಲಂಕಷವಾಗಿ ಪರಿಶೀಲಿಸಿದರು ಹಾಗೂ ಸುರಕ್ಷತಾ ಆಡಿಟ್ (Safety Audit) ನಡೆಸಿದರು.

Read More
Next Story