2036 ರಲ್ಲಿ ದೇಶದಲ್ಲಿ ಒಲಿಂಪಿಕ್ಸ್ ಗೇಮ್ಸ್ :ಪ್ರಧಾನಿ
x
2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲಿರುವ ಭಾರತೀಯ ಅಥ್ಲೀಟ್‌ಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸಿದರು.

2036 ರಲ್ಲಿ ದೇಶದಲ್ಲಿ ಒಲಿಂಪಿಕ್ಸ್ ಗೇಮ್ಸ್ :ಪ್ರಧಾನಿ


ಹೊಸದಿಲ್ಲಿ, ಜು.5- 2026ರಲ್ಲಿ ಒಲಿಂಪಿಕ್ಸ್‌ ಆಯೋಜಿಸುವ ಭಾರತದ ಪ್ರಯತ್ನ ಯಶಸ್ವಿಯಾಗಲಿದೆ ಎಂದು ಪ್ರಧಾನಿ ಮೋದಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ತಿಂಗಳು ‌ಪ್ಯಾರಿಸ್‌ ಗೇಮ್ಸ್ ಗೆ ತೆರಳಲಿರುವ ಕ್ರೀಡಾಪಟುಗಳೊಂದಿಗೆ ಮುಖಾಮುಖಿ ಹಾಗೂ ಆನ್‌ ಲೈನ್‌ ನಲ್ಲಿ ಗುರುವಾರ ಸಂವಾದ ನಡೆಸಿದ ಅವರು, ಫ್ರಾನ್ಸ್‌ ರಾಜಧಾನಿಯಲ್ಲಿನ ವ್ಯವಸ್ಥೆಗಳ ಕುರಿತು ಅಭಿಪ್ರಾಯಗಳನ್ನು ಹಂಚಿಕೊಳ್ಳುವಂತೆ ಕೋರಿದರು.

ಪ್ಯಾರಿಸ್‌ ಕ್ರೀಡಾಕೂಟದ ಅನುಭವಗಳನ್ನು ಹಂಚಿಕೊಂಡರೆ, ದೇಶಕ್ಕೆ ದೊಡ್ಡ ಸೇವೆ ಮಾಡಿದಂತೆ ಆಗಲಿದೆ. ನಾವು 2036ರಲ್ಲಿ ಒಲಿಂಪಿಕ್ಸ್ ಅನ್ನು ಆಯೋಜಿಸಲು ಪ್ರಯತ್ನಿಸುತ್ತಿದ್ದೇವೆ. ಇದರಿಂದ ದೇಶದಲ್ಲಿ ಕ್ರೀಡಾ ವಾತಾವರಣವನ್ನು ಸೃಷ್ಟಿಸಲು ಸಹಾಯ ಆಗುತ್ತದೆ.ಒಲಿಂಪಿಕ್ಸ್‌ ಗೆ ಮೂಲಸೌಕರ್ಯಗಳನ್ನು ಸಿದ್ಧಪಡಿಸುವ ಕೆಲಸ ಪ್ರಗತಿಯಲ್ಲಿದೆ,ʼ ಎಂದು ಹೇಳಿದರು. ಸಂವಾದದಲ್ಲಿ ರಾಷ್ಟ್ರೀಯ ಪುರುಷರ ಹಾಕಿ ತಂಡ, ಶೂಟಿಂಗ್ ತಂಡ, ನೀರಜ್ ಚೋಪ್ರಾ, ಬಾಕ್ಸರ್‌ಗಳು, ಟ್ರ್ಯಾಕ್ ಮತ್ತು ಫೀಲ್ಡ್ ತಾರೆಗಳು ಪಾಲ್ಗೊಂಡಿದ್ದರು.

ಸಂವಾದದ ಸಂಪೂರ್ಣ ವಿಡಿಯೋವನ್ನು ಪ್ರಧಾನ ಮಂತ್ರಿ ಕಚೇರಿ ಶುಕ್ರವಾರ ಹಂಚಿಕೊಂಡಿದೆ.

ʻಈವೆಂಟ್‌ಗಳ ನಡುವೆ ಬಿಡುವಿರುವಾಗ ವ್ಯವಸ್ಥೆಯನ್ನು ಗಮನಿಸಿ. ನಿಮ್ಮ ಒಳಸುರಿಗಳು 2036ಕ್ಕೆ ಕ್ರೀಡಾಕೂಟ ನಡೆಸಬೇಕೆಂಬ ಪ್ರಯತ್ನಕ್ಕೆ ನೆರವಾಗುತ್ತವೆ. ಇದರಿಂದ ಉತ್ತಮವಾಗಿ ಸಿದ್ಧವಾಗಬಹುದು,ʼ ಎಂದು ಹೇಳಿದರು.

ಪ್ಯಾರಿಸ್‌ ಗೇಮ್ಸ್ ಜುಲೈ 26 ರಿಂದ ಆಗಸ್ಟ್ 11 ರವರೆಗೆ ನಡೆಯಲಿದೆ. ಟೋಕಿಯೋ ಗೇಮ್ಸ್‌ನಲ್ಲಿ ಚೋಪ್ರಾ ಅವರ ಐತಿಹಾಸಿಕ ಜಾವೆಲಿನ್ ಥ್ರೋ ಚಿನ್ನ ಸೇರಿದಂತೆ ಏಳು ಪದಕಗಳ ಸಾಧನೆಯನ್ನು ಉತ್ತಮಗೊಳಿಸಲು ಇಂಡಿಯ ಪ್ರಯತ್ನಿಸುತ್ತಿದೆ.

21 ಶೂಟರ್‌ಗಳು ಸೇರಿದಂತೆ 100 ಕ್ಕೂ ಹೆಚ್ಚು ಕ್ರೀಡಾಪಟುಗಳು ಕ್ರೀಡಾಕೂಟಕ್ಕೆ ಅರ್ಹತೆ ಪಡೆದಿದ್ದಾರೆ.

Read More
Next Story