ಪ್ರೇಯಸಿಯನ್ನು ಭೇಟಿಯಾಗಲು ಗಡಿ ದಾಟಿದ ವ್ಯಕ್ತಿ ಪಾಕಿಸ್ತಾನದಲ್ಲಿ ಬಂಧನ
ಬಾಬು ಫೇಸ್‌ಬುಕ್ ಪ್ರೇಯಸಿಯನ್ನು ವಿವಾಹವಾಗಲು ದಾಟಿ ಬಂದಿದ್ಧೇನೆ ಎಂದು ಅಲ್ಲಿನ ಪೊಲೀಸರಿಗೆ ತಿಳಿಸಿದ್ದಾನೆ. ಪೊಲೀಸರು ವಿಚಾರಣೆ ನಡೆಸಿದಾಗ ತನಗೆ ಬಾಬುನನ್ನು ಮದುವೆಯಾಗಲು ಮನಸ್ಸಿಲ್ಲ ಎಂದು ಹೇಳಿದ್ದಾಳೆ.
30 ವರ್ಷದ ಭಾರತೀಯನೊಬ್ಬ ಫೇಸ್ಬುಕ್ ಮೂಲಕ ಪರಿಚಿತವಾಗಿದ್ದ ಮಹಿಳೆಯನ್ನು ಮದುವೆಯಾಗಲು ಪಾಕಿಸ್ತಾನಕ್ಕೆ ಅಕ್ರಮವಾಗಿ ಪ್ರವೇಶಿಸಿ ಅಲ್ಲಿ ಸಿಕ್ಕಿ ಬಿದ್ದ ಘಟನೆ ನಡೆದಿದೆ. ಪ್ರೇಯಸಿಯ ಕರೆಯಂತೆ ಹೋಗಿದ್ದರೂ ಆಕೆ ಅಲ್ಲಿ ಮನಸ್ಸು ಬದಲಾಯಿಸಿದ್ದಳು. ಹೀಗಾಗಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಉತ್ತರ ಪ್ರದೇಶದ ಅಲೀಗಢ ಜಿಲ್ಲೆಯ ಬಾದಲ್ ಬಾಬು ಬಂಧಿತ ವ್ಯಕ್ತಿ. ಕಳೆದ ವಾರ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮಂಡಿ ಬಹಾದ್ದಿನ್ ಜಿಲ್ಲೆಯ ಮೂಲಕ (ಲಾಹೋರ್‌ನಿಂದ ಸುಮಾರು 240 ಕಿಮೀ) ಅಕ್ರಮವಾಗಿ ಗಡಿ ದಾಟಿದ ಬಳಿಕ ಬಂಧನಕ್ಕೆ ಒಳಗಾಗಿದ್ದ.
ಬಾಬು ಫೇಸ್‌ಬುಕ್ ಪ್ರೇಯಸಿಯನ್ನು ವಿವಾಹವಾಗಲು ದಾಟಿ ಬಂದಿದ್ಧೇನೆ ಎಂದು ಅಲ್ಲಿನ ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ವಿಚಾರಣೆ ನಡೆಸಿದಾಗ ತನಗೆ ಬಾಬುನನ್ನು ಮದುವೆಯಾಗಲು ಮನಸ್ಸಿಲ್ಲ ಎಂದು ಹೇಳಿದ್ದಾಳೆ. .
ಪಂಜಾಬ್ ಪೊಲೀಸರು ಫೇಸ್ಬುಕ್ ಸ್ನೇಹಿತೆ 21 ವರ್ಷದ ಸನಾ ರಾನಿ ಎಂಬಾಕೆ ಹೇಳಿಕೆ ದಾಖಲಿಸಿದ್ದಾರೆ. “ಬಾಬು ಮತ್ತು ತಾವು ಕಳೆದ ಎರಡು-ಅರ್ಧ ವರ್ಷಗಳಿಂದ ಫೇಸ್ಬುಕ್ ಸ್ನೇಹಿತರಾಗಿದ್ದೇವೆ. ಆದರೆ, ನನಗೆ ಮದುವೆಯಾಗಲು ಆಸಕ್ತಿ ಇಲ್ಲ," ಎಂದು ಸನಾ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಬು ಅಕ್ರಮವಾಗಿ ಗಡಿ ದಾಟಿ ಮಣ್ಡಿ ಬಹೌದ್ದೀನ್ ಜಿಲ್ಲೆಯ ಮೂಂಗ್ ಗ್ರಾಮದ ಸನಾ ರಾನಿ ಮನೆಗೆ ಹೋಗಿದ್ದಾಗ ಅಲ್ಲಿನ ಪೊಲೀಸರು ಬಂಧಿಸಿದ್ದರು. ಬಾಬು ನೇರವಾಗಿ ರಾನಿಯನ್ನು ಭೇಟಿಯಾಗಿದ್ದಾನಾ ಎಂಬ ಪ್ರಶ್ನೆಗೆ ಪೊಲೀಸರು ಉತ್ತರ ನೀಡಿಲ್ಲ .
ಪ್ರೀತಿಯ ಕಥೆ ಹೇಳಿದ ಬಾಬು
ಬಂಧಿತನಾದ ಬಾಬು ತಮ್ಮ "ಪ್ರೀತಿ ಕಥೆಯನ್ನು" ಪೊಲೀಸರಿಗೆ ವಿವರಿಸಿದ್ದಾನೆ. ಪಾಕಿಸ್ತಾನದ ವಿದೇಶಿ ಕಾಯ್ದೆಯ ಸೆಕ್ಷನ್ 13 ಮತ್ತು 14 ಅಡಿ, ಕಾನೂನು ಪಡಿತರ ದಾಖಲೆಗಳಿಲ್ಲದೆ ಪ್ರಯಾಣಿಸಿದ್ದಕ್ಕಾಗಿ ಅವರನ್ನು ಬಂಧಿಸಲಾಗಿದೆ.
ನಂತರ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿದೆ. ಮುಂದಿನ ವಿಚಾರಣೆ ಜನವರಿ 10 ರಂದು ನಡೆಯಲಿದೆ.
ಇದು ಫೇಸ್ಬುಕ್ ಮುಂತಾದ ಸೋಶಿಯಲ್ ಮೀಡಿಯಾ ಮೂಲಕ ಪ್ರೀತಿ ಬೆಳೆಸಿ ಗಡಿ ದಾಟಿದ ಮೊದಲ ಪ್ರಕರಣವಲ್ಲ. ಇಂಥ ಹಲವಾರು ಪ್ರಕರಣಗಳು ಈ ಹಿಂದೆಯೂ ನಡೆದಿದೆ.
ಹಿಂದೆ, "ಅಂಜು" ಎಂಬ ಭಾರತೀಯ ಮಹಿಳೆ ಪಾಕಿಸ್ತಾನಕ್ಕೆ ತನ್ನ ಪ್ರೇಮಿಯನ್ನು ಭೇಟಿ ಮಾಡಲು ಬಂದಿದ್ದಳು. ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಪಾಕಿಸ್ತಾನದ ನಸ್ರುಲ್ಲಾ ಎಂಬಾತನನ್ನು ಮದುವೆಯಾಗಿದ್ದಳು.
ಹಿಂದಿನ ವರ್ಷ, ಪಾಕ್‌ನ ಸೀಮಾ ಹೈದರ್ ಎಂಬ ಮಹಿಳೆ ಪಬ್‌ಜಿ ಮೂಲಕ ಭಾರತೀಯ ವ್ಯಕ್ತಿಯೊಂದಿಗೆ ಸ್ನೇಹ ಬೆಳೆಸಿದ್ದಳು. ತನ್ನ ನಾಲ್ಕು ಮಕ್ಕಳೊಂದಿಗೆ ನೇಪಾಳ ಮಾರ್ಗವಾಗಿ ಭಾರತಕ್ಕೆ ಪ್ರವೇಶಿಸಿ, ನಂತರ ಅವನನ್ನು ಮದುವೆಯಾಗಿದ್ದಳು.
ಅದೇ ರೀತಿ ಒಮ್ಮೆ19 ವರ್ಷದ ಪಾಕಿಸ್ತಾನಿ ಹುಡುಗಿ ಇಕ್ಬಾಲಾ ಜೀವಾನಿ 25 ವರ್ಷದ ಭಾರತೀಯ ಮುಲಾಯಂ ಸಿಂಗ್ ಯಾದವ್ ಜೊತೆಗೆ ಆನ್‌ಲೈನ್ ಗೇಮ್ ಮೂಲಕ ಸ್ನೇಹ ಬೆಳೆಸಿ ನೇಪಾಳದಲ್ಲಿ ಮದುವೆಯಾಗಿದ್ದಳು.