ಪಾಕಿಸ್ತಾನದ ಕಿರಾನಾ ಹಿಲ್ಸ್‌ನಲ್ಲಿ ಅಣು ಸೌಲಭ್ಯದ ಮೇಲೆ ದಾಳಿ ನಡೆಸಿಲ್ಲ: ಭಾರತೀಯ ಸೇನೆ ಸ್ಪಷ್ಟನೆ
x

ಪಾಕಿಸ್ತಾನದ ಕಿರಾನಾ ಹಿಲ್ಸ್‌ನಲ್ಲಿ ಅಣು ಸೌಲಭ್ಯದ ಮೇಲೆ ದಾಳಿ ನಡೆಸಿಲ್ಲ: ಭಾರತೀಯ ಸೇನೆ ಸ್ಪಷ್ಟನೆ

ಸ್ಪಷ್ಟಪಡಿಸಿದ್ದಾರೆ. ಕಿರಾನಾ ಹಿಲ್ಸ್‌ನಲ್ಲಿ ಅಣು ಸೌಲಭ್ಯ ಇದೆ ಎಂಬ ಮಾಹಿತಿಯನ್ನು ಮಾಧ್ಯಮಗಳ ಮೂಲಕ ತಾವು ತಿಳಿದುಕೊಂಡಿರುವುದಾಗಿ ಎಂದು ಹೇಳಿದ ಅವರು, ಆ ಸ್ಥಳವು ಭಾರತವು ಗುರಿಯಾಗಿಸಿದ ಪಟ್ಟಿಯಲ್ಲಿ ಇರಲಿಲ್ಲ ಎಂದು ಖಚಿತಪಡಿಸಿದರು.


'ಆಪರೇಷನ್ ಸಿಂದೂರ್' ಕಾರ್ಯಾಚರಣೆಯ ಸಂದರ್ಭದಲ್ಲಿ ಭಾರತೀಯ ಸೇನೆಯು ಪಾಕಿಸ್ತಾನದ ಕಿರಾನಾ ಹಿಲ್ಸ್‌ನಲ್ಲಿ ಇರುವ ಅಣು ಸೌಲಭ್ಯದ ಮೇಲೆ ದಾಳಿ ನಡೆಸಿದೆ ಎಂಬ ಆರೋಪ ಮತ್ತು ಊಹಾಪೋಹಗಳನ್ನು ಭಾರತೀಯ ಸೇನೆಯು ಸ್ಪಷ್ಟವಾಗಿ ನಿರಾಕರಿಸಿದೆ. ನವದೆಹಲಿಯಲ್ಲಿ ಆಪರೇಷನ್ ಸಿಂದೂರ್ ಕುರಿತು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಏರ್ ಮಾರ್ಷಲ್ ಎ.ಕೆ. ಭಾರತಿ ಅವರು, ಈ ಕುರಿತು ಹರಡಿದ್ದ ವದಂತಿಗಳಿಗೆ ತೆರೆ ಎಳೆದಿದ್ದಾರೆ.

"ನಾವು ಕಿರಾನಾ ಹಿಲ್ಸ್ ಮೇಲೆ ಯಾವುದೇ ದಾಳಿ ನಡೆಸಿಲ್ಲ," ಎಂದು ಏರ್ ಮಾರ್ಷಲ್ ಎ.ಕೆ. ಭಾರತಿ ಅವರು ಸ್ಪಷ್ಟಪಡಿಸಿದ್ದಾರೆ. ಕಿರಾನಾ ಹಿಲ್ಸ್‌ನಲ್ಲಿ ಅಣು ಸೌಲಭ್ಯ ಇದೆ ಎಂಬ ಮಾಹಿತಿಯನ್ನು ಮಾಧ್ಯಮಗಳ ಮೂಲಕ ತಾವು ತಿಳಿದುಕೊಂಡಿರುವುದಾಗಿ ಎಂದು ಹೇಳಿದ ಅವರು, ಆ ಸ್ಥಳವು ಭಾರತವು ಗುರಿಯಾಗಿಸಿದ ಪಟ್ಟಿಯಲ್ಲಿ ಇರಲಿಲ್ಲ ಎಂದು ಖಚಿತಪಡಿಸಿದರು.

ಪಾಕಿಸ್ತಾನದ ಸರ್ಗೋಧಾ ಏರ್ ಬೇಸ್ ಸಮೀಪದಲ್ಲಿರುವ ಕಿರಾನಾ ಹಿಲ್ಸ್ ಪ್ರದೇಶವು ಪಾಕಿಸ್ತಾನದ ಅಣು ಶಸ್ತ್ರಾಸ್ತ್ರಗಳ ಸಂಗ್ರಹಣಾ ಸ್ಥಳವಾಗಿರಬಹುದು ಎಂಬ ವರದಿಗಳಿವೆ. ಇದಲ್ಲದೆ, ಪಾಕಿಸ್ತಾನದ ಕೆಲವು ಭಾಗಗಳಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕಂಪದ ವೇಳೆಯೂ ಅಣು ಘಟಕಕ್ಕೆ ದಾಳಿ ಎಂದು ಬಿಂಬಿಸಲಾಗಿತ್ತು. ಅಮೆರಿಕ ಮತ್ತು ಈಜಿಪ್ಟ್‌ಗೆ ಸೇರಿದ ಸೇನಾ ವಿಮಾನಗಳು ಪಾಕಿಸ್ತಾನದ ವಾಯುಪ್ರದೇಶದಲ್ಲಿ ಕಾಣಿಸಿಕೊಂಡಿವೆ ಎಂದು ಹೇಳಿಕೊಂಡ ನಂತರ ಕಿರಾನಾ ಹಿಲ್ಸ್ ಸುತ್ತಲಿನ ಊಹಾಪೋಹಗಳು ಇನ್ನಷ್ಟು ತೀವ್ರಗೊಂಡಿದ್ದವು.

'ಆಪರೇಷನ್ ಸಿಂದೂರ್' ಅಡಿಯಲ್ಲಿ ಭಾರತವು ಪಾಕಿಸ್ತಾನದ ವಾಯು ಸಾಮರ್ಥ್ಯಕ್ಕೆ ಸಂಬಂಧಿಸಿದ ಮೂಲಸೌಕರ್ಯ ಸೇರಿದಂತೆ ಆಯ್ದ ಸೇನಾ ಗುರಿಗಳ ಮೇಲೆ ದಾಳಿ ನಡೆಸಿದೆ ಎಂದು ಅಧಿಕೃತವಾಗಿ ದೃಢಪಡಿಸಿದೆ. ಆದರೆ, ಎಲ್ಲಾ ಕ್ರಮಗಳು "ಸಮತೋಲಿತ ಮತ್ತು ವಿಶ್ವಾಸಾರ್ಹ ಗುಪ್ತಚರ ಮಾಹಿತಿಯ ಆಧಾರದ ಮೇಲೆ" ನಡೆದಿವೆ ಎಂದು ಪದೇ ಪದೇ ಸ್ಪಷ್ಟಪಡಿಸಿದೆ.

Read More
Next Story