India Post: ಬುಕ್ ಪೋಸ್ಟ್ ಸೇವೆ ನಿಲ್ಲಿಸಿದ ಅಂಚೆ ಇಲಾಖೆ; ಪುಸ್ತಕ ಪ್ರೇಮಿಗಳು, ಪ್ರಕಾಶಕರಿಗೆ ಆಘಾತ
x
ಅಂಚೆ ಇಲಾಖೆ ಪ್ರಾತಿನಿಧಿಕ ಚಿತ್ರ.

India Post: ಬುಕ್ ಪೋಸ್ಟ್ ಸೇವೆ ನಿಲ್ಲಿಸಿದ ಅಂಚೆ ಇಲಾಖೆ; ಪುಸ್ತಕ ಪ್ರೇಮಿಗಳು, ಪ್ರಕಾಶಕರಿಗೆ ಆಘಾತ

India Post: ಹಠಾತ್ ನಿರ್ಧಾರವು ಪುಸ್ತಕಗಳನ್ನು ಕಳುಹಿಸುವ ವೆಚ್ಚವನ್ನು ಹೆಚ್ಚಿಸುತ್ತದೆ. ಓದುವ ಸಂಸ್ಕೃತಿಗೆ ಅಪಾಯ ಮತ್ತು ಶಿಕ್ಷಣ ಮತ್ತು ಜ್ಞಾನ ಪ್ರಸಾರದ ಮೇಲೆ ಪರಿಣಾಮ ಬೀರಲಿದೆ.


ಭಾರತೀಯ ಅಂಚೆ ಇಲಾಖೆಯು ತನ್ನ 'ಬುಕ್ ಪೋಸ್ಟ್' ಸೇವೆಯನ್ನು ಅಧಿಕೃತವಾಗಿ ನಿಲ್ಲಿಸಿದೆ. ಈ ಬೆಳವಣಿಗೆ ಪುಸ್ತಕ ಪ್ರಿಯರು ಮತ್ತು ಪ್ರಕಾಶನ ಉದ್ಯಮವನ್ನು ಬೆಚ್ಚಿಬೀಳಿಸಿದೆ.

ಶಿಕ್ಷಣ ಮತ್ತು ಓದುವ ಅಭ್ಯಾಸ ಉತ್ತೇಜಿಸಲು ಈ ಸೇವೆಯನ್ನು ಆರಂಭಿಸಲಾಗಿತ್ತು. ಇದು ಪುಸ್ತಕಗಳನ್ನು ಅತ್ಯಂತ ಕಡಿಮೆ ದರದಲ್ಲಿ ಕಳುಹಿಸಲು ಅನುಕೂಲ ಮಾಡಿತ್ತು. ಐದು ಕೆ.ಜಿ ಪುಸ್ತಕಗಳನ್ನು ಕಳುಹಿಸಲು ಕೇವಲ 80 ರೂಪಾಯಿ ವೆಚ್ಚವಿತ್ತು. ಇದು ಇತರ ಕೊರಿಯರ್‌ ಸೇವೆಗೆ ಹೋಲಿಸಿದರೆ ಅತ್ಯಂತ ಕನಿಷ್ಠ ದರವಾಗಿತ್ತು.

ಅಂಚೆ ಇಲಾಖೆಯ ವ್ಯಾಪಕ ಜಾಲವು ತ್ವರಿತವಾಗಿ ಅಂಚೆಗಳನ್ನು ವಿತರಣೆ ಮಾಡುತ್ತಿದೆ. ದೇಶದ ಯಾವುದೇ ಮೂಲೆಗೆ ಒಂದು ವಾರದೊಳಗೆ ಪಾರ್ಸೆಲ್‌ ತಲುಪಿಸುತ್ತಿದೆ. ನಗರಗಳ ನಡುವೆಯಾದರೆ ಮರುದಿನವೇ ತಲುಪಿಸುವ ವ್ಯವಸ್ಥೆ ಹೊಂದಿದೆ. ಓದುವಿಕೆಯನ್ನು ಉತ್ತೇಜಿಸಲು ಸರ್ಕಾರವು ಈ ಕಡಿಮೆ ದರಗಳನ್ನು ನಿಗಿದ ಮಾಡಿದ್ದು, ಪುಸ್ತಕಗಳ ಜತೆ ನಿಯತಕಾಲಿಕೆಗಳು ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದವು.

ಮುನ್ಸೂಚನೆ ಇಲ್ಲದೇ ರದ್ದು

ಯಾವುದೇ ಮುನ್ಸೂಚನೆಯಿಲ್ಲದೆ ಬುಧವಾರ (ಡಿಸೆಂಬರ್ 18) ಸೇವೆಯನ್ನು ಇದ್ದಕ್ಕಿದ್ದಂತೆ ತೆಗೆದುಹಾಕಲಾಗಿದೆ ಎಂದು ವರದಿಗಳು ತಿಳಿಸಿವೆ. ಪಾಲುದಾರರನ್ನು ಸಂಪರ್ಕಿಸಲಾಗಿಲ್ಲ. ಮಧ್ಯರಾತ್ರಿಯಲ್ಲಿ, ಆರ್‌ಬಿಪಿಯನ್ನು ಅಂಚೆ ಸಾಫ್ಟ್‌ವೇರ್‌ನಿಂದ ತೆಗೆದು ಹಾಕಲಾಗಿತ್ತು. ಈ ಸೇವೆ ಇನ್ನು ಮುಂದೆ ಲಭ್ಯವಿಲ್ಲ ಎಂದು ತಿಳಿದು ಗ್ರಾಹಕರು ಆಘಾತಕ್ಕೊಳಗಾಗಿದ್ದಾರೆ.

ಅಂಚೆ ಇಲಾಖೆಯ ನಿರ್ಧಾರವು ಪ್ರಕಾಶನ ಉದ್ಯಮಕ್ಕೆ ಹಾನಿ ಮಾಡಿದೆ. ಸಾಗಾಟ ವೆಚ್ಚಗಳು ಈಗ ಹೆಚ್ಚಾಗಲಿದೆ. ಅನೇಕ ಓದುಗರು 100 ರೂಪಾಯಿ ಪುಸ್ತಕಕ್ಕೆ 78 ರೂ.ಗಳ ಅಂಚೆ ಪಾವತಿಸಬೇಕಾಗುತ್ತದೆ. ಈಗಾಗಲೇ ದುರ್ಬಲವಾಗಿರುವ ಭಾರತದ ಓದುವ ಸಂಸ್ಕೃತಿಯನ್ನು ಹಾನಿಗೊಳಿಸುವ ಅಪಾಯವಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ಇತರ ಪಾರ್ಸೆಲ್‌ ಸೇವೆ ಹಾಗೂ ಬುಕ್‌ ಪೋಸ್ಟ್‌ ವೆಚ್ಚದ ವ್ಯತ್ಯಾಸ ದೊಡ್ಡದಿದೆ. ಬುಕ್‌ ಪೋಸ್ಟ್‌ ಮೂಲಕ ಒಂದು ಕೆ.ಜಿ ಕಳುಹಿಸಲು 32 ರೂಪಾಯಿ ಆಗಿದ್ದರೆ, , 'ರಿಜಿಸ್ಟರ್‌ ಪೋಸ್ಟ್‌ ' ಅಡಿಯಲ್ಲಿ ಇದರ ಬೆಲೆ 78 ರೂ. 80 ರೂಪಾಯಿಗಳಾಗಿವೆ. ಐದು ಕಿಲೋಗ್ರಾಂ ಪ್ಯಾಕೇಜ್ ಈಗ 229 ರೂ.ಗೆ ಏರಿಕೆಯಾಗಿದೆ. .

ಮಾದರಿ ಪುಸ್ತಕಗಳ ಮೇಲೆ 5% ತೆರಿಗೆ

ಸ್ಯಾಂಪಲ್‌ ಪುಸ್ತಕಗಳ ಮೇಲೆ ಶೇಕಡಾ 5 ರಷ್ಟು ಸುಂಕ ಸರ್ಕಾರ ಪರಿಚಯಿಸಿದೆ. ವಿದೇಶಿ ಪ್ರಕಾಶಕರು ಅನೇಕ ವೇಳೆ ಪೂರಕ ಅನುವಾದಗಳನ್ನು ಕಳುಹಿಸುತ್ತಾರೆ. ಇವುಗಳಿಗೆ ಈಗ ತೆರಿಗೆ ವಿಧಿಸಲಾಗಿದೆ. ವಾಣಿಜ್ಯ ಪುಸ್ತಕ ಆಮದಿಗೆ ತೆರಿಗೆ ವಿಧಿಸುವುದು ಅರ್ಥಪೂರ್ಣವಾಗಿದ್ದರೂ, ವಾಣಿಜ್ಯೇತರ ಸ್ಯಾಂಪಲ್‌ಗಳ ಮೇಲೆ ತೆರಿಗೆ ವಿಧಿಸುವುದು ಅನ್ಯಾಯ ಎಂದು ಉದ್ಯಮ ತಜ್ಞರು ಹೇಳುತ್ತಾರೆ.

ಇದು ಸಾಕ್ಷರತೆ ಮತ್ತು ಶಿಕ್ಷಣ ಪ್ರಯತ್ನಗಳನ್ನು ಹಿಮ್ಮೆಟ್ಟಿಸುವ ಸರ್ಕಾರದ ಮತ್ತೊಂದು ನಿರಂಕುಶ ನಿರ್ಧಾರವಾಗಿದೆ ಎಂದು ವಿಮರ್ಶಕರು ಅಭಿಪ್ರಾಯಪಟ್ಟಿದ್ದಾರೆ.

Read More
Next Story