
ನಿತೀಶ್ ಕುಮಾರ್ ಅವರನ್ನು ಪ್ರಧಾನಿ ಮಾಡಲು ಹೊರಟಿದ್ದ ಇಂಡಿಯಾ ಕೂಟ?
ಜೆಡಿಯು ಪಕ್ಷದ ಅಧ್ಯಕ್ಷ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಪ್ರಧಾನ ಮಂತ್ರಿಯಾಗಿ ಮಾಡಲು INDIA ಬಣ ಪ್ರಸ್ತಾಪಿಸಿದೆ ಎಂಬ ಪಕ್ಷದ ವಕ್ತಾರ ಕೆ.ಸಿ. ತ್ಯಾಗಿ ಅವರ ಹೇಳಿಕೆಯನ್ನು ನಿತೀಶ್ ಆಪ್ತ ಸಂಜಯ್ ಝಾ ಅಲ್ಲಗಳೆದಿದ್ದಾರೆ.
ಬಿಜೆಪಿಯೊಂದಿಗಿನ ಮೈತ್ರಿ ಮುರಿದರೆ ನಿತೀಶ್ ಕುಮಾರ್ ಅವರಿಗೆ ಈ ಹುದ್ದೆಯನ್ನು ನೀಡುವ ಪ್ರಸ್ತಾಪವಿದೆ ಎಂಬ ಹೇಳಿಕೆ ನೀಡಿದ ತ್ಯಾಗಿ ಅವರು ರಾಜಕೀಯ ವಲಯದಲ್ಲಿ ಕೋಲಾಹಲ ಸೃಷ್ಟಿಸಿದ್ದರು. ಆದರೆ ಜೆಡಿಯು ಈ ಪ್ರಸ್ತಾಪವನ್ನು ತಿರಸ್ಕರಿಸಿ ಮತ್ತು ನರೇಂದ್ರ ಮೋದಿ ಅವರನ್ನು ಮುಂದಿನ ಪ್ರಧಾನಿಯಾಗಿ ಅನುಮೋದಿಸಿತು ಎಂದು ಝಾ ಹೇಳಿದರು.
ನಮ್ಮ ಪಕ್ಷಕ್ಕೆ ಅಂತಹ ಯಾವುದೇ ಮಾಹಿತಿ ಇಲ್ಲ.ಇದೆಲ್ಲ ಮುಖ್ಯಮಂತ್ರಿಗಳಿಗೂ ತಿಳಿದಿಲ್ಲ. ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ(NDA()ದ ಸಭೆಯಲ್ಲಿ ಕುಮಾರ್ ಮೋದಿಯನ್ನು ಸ್ಪಷ್ಟವಾಗಿ ಅನುಮೋದಿಸಿದ್ದಾರೆ, ಬಿಹಾರದ 40 ಲೋಕಸಭಾ ಸ್ಥಾನಗಳಲ್ಲಿ 30 ಸ್ಥಾನಗಳನ್ನು ಗೆದ್ದಿರುವ ಚುನಾವಣಾ ಪೂರ್ವ ಮೈತ್ರಿ ಇದಾಗಿದೆ ಎಂದು ಝಾ ಹೇಳಿದರು.
ನಿತೀಶ್ ಅವರನ್ನು ತಮ್ಮ ಮೈತ್ರಿಕೂಟದ ಸಂಚಾಲಕರನ್ನಾಗಿ ಮಾಡಲು ಬಯಸದ ಇಂಡಿಯಾ ಕೂಟ ಈಗ ಅವರನ್ನು ಪ್ರಧಾನಿ ಮಾಡಲು ಮುಂದಾಗಿದೆ. ಆದರೆ ಪಕ್ಷದ ನಾಯಕತ್ವವು ಈ ಪ್ರಸ್ತಾಪವನ್ನು ತಿರಸ್ಕರಿಸಿದ್ದಕ್ಕೆ ಸಂತೋಷವಾಗಿದೆ ಎಂದು ಹೇಳಿದ್ದರು.

