ಗಾಜಾದಲ್ಲಿ ಕರ್ನಲ್ ಸಾವು: ಶವ ತರಲು ಸರ್ಕಾರದಿಂದ ಸಕಲ ಪ್ರಯತ್ನ
ಗಾಜಾದಲ್ಲಿ ವಿಶ್ವ ಸಂಸ್ಥೆ (ಯುಎನ್) ಜೊತೆ ಕೆಲಸ ಮಾಡುತ್ತಿದ್ದ ಭಾರತೀಯ ಪ್ರಜೆ, ಕರ್ನಲ್ (ನಿವೃತ್ತ) ವೈಭವ್ ಅನಿಲ್ ಕಾಳೆ ಅವರ ಸಾವಿನಿಂದ ದೇಶ ʻತೀವ್ರ ದುಃಖಿತವಾಗಿದೆʼ ಎಂದು ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.
ಸೋಮವಾರ (ಮೇ 13) ಗಾಜಾದ ರಫಾ ಪ್ರದೇಶದಲ್ಲಿ ಅವರು ಪ್ರಯಾಣಿಸುತ್ತಿದ್ದ ವಾಹನದ ಮೇಲೆ ದಾಳಿ ನಡೆದಿತ್ತು. ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ), ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಖಾಯಂ ಮಿಷನ್, ಟೆಲ್ಅವಿವ್ ಮತ್ತು ರಾಮಲ್ಲಾದಲ್ಲಿನ ಅದರ ಕಚೇರಿಗಳು ಕಾಳೆ ಅವರ ಶರೀರವನ್ನು ದೇಶಕ್ಕೆ ತರಲು ಸಹಾಯ ಮಾಡುತ್ತಿವೆ ಎಂದು ಹೇಳಿದೆ.
ಎಂಇಎ ಹೇಳಿಕೆ: ಗಾಜಾದಲ್ಲಿ ಯುಎನ್ ಸುರಕ್ಷತೆ ಮತ್ತು ಭದ್ರತೆ (ಡಿಎಸ್ಎಸ್) ಇಲಾಖೆಯ ಭದ್ರತಾ ಸಮನ್ವಯ ಅಧಿಕಾರಿ ಕರ್ನಲ್ ವೈಭವ್ ಅನಿಲ್ ಕಾಳೆ (ನಿವೃತ್ತ) ಅವರ ಸಾವಿನಿಂದ ತೀವ್ರ ದುಃಖಿತರಾಗಿದ್ದೇವೆ ಎಂದು ಎಂಇಎ ಹೇಳಿದೆ.
ʻಅವರ ಕುಟುಂಬ ಮತ್ತು ಆತ್ಮೀಯರಿಗೆ ಸಂತಾಪ ಸಲ್ಲಿಸುತ್ತೇವೆ. ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಖಾಯಂ ಮಿಷನ್, ಟೆಲ್ಅವಿವ್ ಮತ್ತು ರಾಮಲ್ಲಾದಲ್ಲಿನ ಅದರ ಕಚೇರಿಗಳು ಕಾಳೆ ಅವರ ಶರೀರವನ್ನು ದೇಶಕ್ಕೆ ತರಲು ನೆರವಾಗುತ್ತಿವೆ. ಘಟನೆಯ ತನಿಖೆಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ಧೇವೆʼ ಎಂದು ಎಂಇಎ ಹೇಳಿಕೆಯಲ್ಲಿ ತಿಳಿಸಿದೆ.