ಭಾರತ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿಲ್ಲ,ಸಲ್ಲಿಸುವುದಿಲ್ಲ: ಆಂಡಿ ಫ್ಲವರ್
ಅಹಮದಾಬಾದ್, ಮೇ 23- ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮುಖ್ಯ ಕೋಚ್ ಆಂಡಿ ಫ್ಲವರ್ ಅವರು ಭಾರತ ತಂಡದ ಕೋಚ್ ಹುದ್ದೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ.
ಜಿಂಬಾಬ್ವೆಯ ಮಾಜಿ ನಾಯಕ ಐಪಿಎಲ್ ಪ್ಲೇ ಆಫ್‌ನಿಂದ ತಂಡ ನಿರ್ಗಮಿಸಿದ ಮಾತನಾಡಿ,ʻಕೋಚ್ ಹುದ್ದೆಗೆ ನಾನು ಅರ್ಜಿ ಸಲ್ಲಿಸಿಲ್ಲ; ಸಲ್ಲಿಸುವುದೂ ಇಲ್ಲ. ಸದ್ಯಕ್ಕೆ ಫ್ರಾಂಚೈಸಿ ಆಟದಲ್ಲಿ ಪಾಲ್ಗೊಳ್ಳುವಿಕೆಯಿಂದ ಸಂತೋಷವಾಗಿದ್ದೇನೆ,ʼ ಎಂದು ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಹೇಳಿದರು.
ಟಿ20 ವಿಶ್ವಕಪ್ ನಂತರ ರಾಹುಲ್ ದ್ರಾವಿಡ್ ಅವಧಿ ಮುಗಿಯಲಿದ್ದು, ಬಿಸಿಸಿಐ ಹೊಸ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಮೇ 27 ಕೊನೆಯ ದಿನಾಂಕ.
ಇಂಗ್ಲೆಂಡಿನ ರೆಡ್ ಬಾಲ್ ತರಬೇತುದಾರರಾಗಿದ್ದ ಫ್ಲವರ್(56), 2012ರಲ್ಲಿ ಅಲೆಸ್ಟರ್ ಕುಕ್ ನೇತೃತ್ವದ ತಂಡಕ್ಕೆ ಭಾರತದಲ್ಲಿ ಟೆಸ್ಟ್ ಸರಣಿ ಗೆಲುವಿಗೆ ಮಾರ್ಗದರ್ಶನ ನೀಡಿದ್ದರು. ಈ ಹಿಂದೆ ಲಕ್ನೋ ಸೂಪರ್ ಜೈಂಟ್ಸ್‌ಗೆ ತರಬೇತಿ ನೀಡಿದ್ದರು ಮತ್ತು ಜಗತ್ತಿನೆಲ್ಲೆಡೆಯ ಹಲವು ಫ್ರಾಂಚೈಸಿಗಳ ಭಾಗವಾಗಿದ್ದರು. ʻರಾಷ್ಟ್ರೀಯ ತಂಡಕ್ಕೆ ವರ್ಷಕ್ಕೆ 10 ತಿಂಗಳು ಸಮಯ ನೀಡಬೇಕಾಗುತ್ತದೆ. ತರಬೇತಿ ನೀಡುವಿಕೆ ಆಸಕ್ತಿದಾಯಕ ವಿಷಯ. ನಾನು ಕೆಲವು ಅದ್ಭುತ ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತಿದ್ದು,ನಿಜವಾಗಿಯೂ ಸಂತೋಷವಾಗಿದ್ದೇನೆ,ʼ ಎಂದು ಹೇಳಿದರು.
ಗೌತಮ್ ಗಂಭೀರ್ ಸ್ಪರ್ಧೆಯಲ್ಲಿಲ್ಲ ಎನ್ನಲಾಗಿದೆ. ಆದರೆ, ಅವರು ಅಥವಾ ಬಿಸಿಸಿಐ ಅಧಿಕಾರಿಗಳು ಈ ಬೆಳವಣಿಗೆಯನ್ನು ಖಚಿತಪಡಿಸಿಲ್ಲ.