ಮಹಾರಾಷ್ಟ್ರ ಚುನಾವಣೆಯಲ್ಲಿ ಇವಿಎಂ ತಿರುಚುವಿಕೆ ಆರೋಪ; ಸುಪ್ರೀಂ ಮೆಟ್ಟಿಲೇರಲು ಇಂಡಿಯಾ ಬಣ ನಿರ್ಧಾರ
x
ಶರದ್​ ಪವಾರ್​

ಮಹಾರಾಷ್ಟ್ರ ಚುನಾವಣೆಯಲ್ಲಿ ಇವಿಎಂ ತಿರುಚುವಿಕೆ ಆರೋಪ; ಸುಪ್ರೀಂ ಮೆಟ್ಟಿಲೇರಲು ಇಂಡಿಯಾ ಬಣ ನಿರ್ಧಾರ

ಎನ್ಸಿಪಿ ಸೇರಿದಂತೆ ಪ್ರತಿಪಕ್ಷಗಳು ಮಹಾರಾಷ್ಟ್ರದಲ್ಲಿ ಅವಮಾನಕರ ಸೋಲನ್ನು ಕಂಡಿದೆ. ಇದೀಗ ದೆಹಲಿಯಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ಹೀಗಾಗಿ ಮುಂಚಿತವಾಗಿ ಕೋರ್ಟ್ ಮೆಟ್ಟಿಲೇರಲು ಇಂಡಿಯಾ ಬಣದ ನಾಯಕರು ಮುಂದಾಗಿದ್ದಾರೆ.


ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಇವಿಎಂ ತಿರುಚಲಾಗಿದೆ ಎಂಬ ಆರೋಪದ ಬಗ್ಗೆ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಲು ಇಂಡಿಯಾ ಮೈತ್ರಿಕೂಟ ಸಜ್ಜಾಗಿದೆ.

ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್, ದೆಹಲಿಯ ಮಾಜಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಮತ್ತು ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಖ್ಯಾತ ವಕೀಲ ಅಭಿಷೇಕ್ ಸಿಂಘ್ವಿ ಬುಧವಾರ ಸಂಜೆ ನಡೆದ ಸಭೆಯಲ್ಲಿ ಅರ್ಜಿ ಸಲ್ಲಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಎನ್ಸಿಪಿ ಸೇರಿದಂತೆ ಪ್ರತಿಪಕ್ಷಗಳು ಮಹಾರಾಷ್ಟ್ರದಲ್ಲಿ ಅವಮಾನಕರ ಸೋಲನ್ನು ಕಂಡಿದೆ. ಇದೀಗ ದೆಹಲಿಯಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ಹೀಗಾಗಿ ಮುಂಚಿತವಾಗಿ ಕೋರ್ಟ್ ಮೆಟ್ಟಿಲೇರಲು ಇಂಡಿಯಾ ಬಣದ ನಾಯಕರು ಮುಂದಾಗಿದ್ದಾರೆ.

ಕೇಜ್ರಿವಾಲ್ ಅವರ ಎಎಪಿ ದೆಹಲಿಯಲ್ಲಿ ಕಳೆದ ಎರಡು ವಿಧಾನಸಭಾ ಚುನಾವಣೆಗಳನ್ನು ಗೆದ್ದಿದೆ. ಆದರೆ ಈ ಬಾರಿ ಅನೇಕ ಎಎಪಿ ನಾಯಕರು ಬಿಜೆಪಿಯ ಸ್ಪರ್ಧೆಯನ್ನು ಒಪ್ಪಿಕೊಂಡಿದ್ದಾರೆ. ಕೇಜ್ರಿವಾಲ್ ಸೇರಿದಂತೆ ಆಡಳಿತ ಪಕ್ಷದ ನಾಯಕರ ವಿರುದ್ಧದ ಭ್ರಷ್ಟಾಚಾರ ಆರೋಪಗಳನ್ನು ಲಾಭ ಮಾಡಿಕೊಳ್ಳಲು ಬಿಜೆಪಿ ಆಶಿಸುತ್ತಿದೆ ಎಂದು ಹೇಳಿದ್ದಾರೆ.

ಎನ್​ಸಿಪಿ -ಶರದ್ ಪವಾರ್ ನಾಯಕ ಪ್ರಶಾಂತ್ ಜಗತಾಪ್ ಈ ನಿರ್ಧಾರವನ್ನು ಬಹಿರಂಗಪಡಿಸಿದ್ದಾರೆ. ಜಗತಾಪ್ ಅವರು ಪುಣೆಯ ಹಡಪ್ಸರ್ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದಾರೆ.

ಸಭೆಯಲ್ಲಿ, ಮತದಾನದ ದಿನಕ್ಕೆ ಮೂರು ದಿನಗಳ ಮೊದಲು ಮಹಾರಾಷ್ಟ್ರದಲ್ಲಿ ಮತದಾರರ ಹೆಸರುಗಳನ್ನು ಅಳಿಸಿ ಸೇರಿಸಲಾಗಿದೆ ಎಂದು ಜಗತಾಪ್ ಆರೋಪಿಸಿದ್ದಾರೆ. "ನಮ್ಮ ಹೇಳಿಕೆಯನ್ನು ಬೆಂಬಲಿಸಲು ನಮ್ಮ ಬಳಿ ದಾಖಲೆಗಳು ಇವೆ " ಎಂದು ಜಗತಾಪ್ ಹೇಳಿದ್ದಾರೆ.

ಇವಿಎಂಗೆ ಸುಪ್ರೀಂ ಬೆಂಬಲ

ಸುಪ್ರೀಂ ಕೋರ್ಟ್ ಹಲವಾರು ತೀರ್ಪುಗಳಲ್ಲಿ ವಿದ್ಯುನ್ಮಾನ ಮತದಾನ ಯಂತ್ರಗಳ ಕಾರ್ಯವೈಖರಿಯನ್ನು ಸಮರ್ಥಿಸಿದೆ.

ಇತ್ತೀಚಿನ ವಿಚಾರಣೆಯ ಸಮಯದಲ್ಲಿ, ಇವಿಎಂ ತಿರುಚುವಿಕೆಯ ಆರೋಪ ಮಾಡಿದ್ದ ಅರ್ಜಿದಾರರನ್ನು ಟೀಕಿಸಿದ ನ್ಯಾಯಾಧೀಶರು, ಗೆದ್ದಾಗ ಇವಿಎಂಗಳ ಬಗ್ಗೆ ಚಕಾರ ಎತ್ತುವುದಿಲ್ಲ ಯಾಕೆ ಎಂದು ಪ್ರಶ್ನಿಸಿದ್ದರು.

"ಇವಿಎಂಗಳು ಗಮನಾರ್ಹ ಪ್ರಯೋಜನಗಳನ್ನು ನೀಡುತ್ತವೆ. ಮತದಾನದ ಪ್ರಮಾಣವನ್ನು ನಿಮಿಷಕ್ಕೆ ನಾಲ್ಕು ಮತಗಳಿಗೆ ಸೀಮಿತಗೊಳಿಸುವ ಮುಲಕ ಮತದಾನ ಪ್ರಕ್ರಿಯೆನ್ನು ಸಮರ್ಪಕಗೊಳಿಸಲಾಗಿದೆ. ಇವಿಎಂಗಳು ಅಮಾನ್ಯ ಮತಗಳನ್ನು ಆತಂಕವನ್ನೂ ಕಡಿಮೆ ಮಾಡಿದೆ. ಬ್ಯಾಲೆಟ್​ ಓಟಿಂಗ್​ನಲ್ಲಿ ಇದು ಪ್ರಮುಖ ವಿಷಯವಾಗಿತ್ತು. ಎಣಿಕೆ ಪ್ರಕ್ರಿಯೆಯ ಸಮಯದಲ್ಲಿ ಆಗಾಗ್ಗೆ ವಿವಾದಗಳನ್ನು ಹುಟ್ಟುಹಾಕಿತ್ತು ಎಂದು ನ್ಯಾಯಾಲಯ ಹೇಳಿದೆ.

ಇತ್ತೀಚೆಗೆ ಮುಕ್ತಾಯಗೊಂಡ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ವೋಟರ್ ವೆರಿಫೈಯಬಲ್ ಪೇಪರ್ ಆಡಿಟ್ ಟ್ರಯಲ್ (ವಿವಿಪ್ಯಾಟ್) ಸ್ಲಿಪ್​​ಗಳ ಕಡ್ಡಾಯ ಎಣಿಕೆಯ ಸಮಯದಲ್ಲಿ ಯಾವುದೇ ವ್ಯತ್ಯಾಸಗಳು ಕಂಡುಬಂದಿಲ್ಲ ಎಂದು ಚುನಾವಣಾ ಆಯೋಗ ಮಂಗಳವಾರ ದೃಢಪಡಿಸಿದೆ.

ಸೋಲಿನ ಬೇಸರ

ಇವಿಎಂಗಳು ಪ್ರತಿಪಕ್ಷಗಳಾದ ಬಿಜೆಪಿ ಬಣ ಮತ್ತು ಇಂಡಿಯಾ ಬಣದ ನಡುವೆ ಆರೋಪ ಮತ್ತು ಪ್ರತ್ಯಾರೋಪದ ವಿಷಯವಾಗಿದೆ. ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಳಲ್ಲಿ ಇವಿಎಂಗಳನ್ನು ತಿರುಚಿ ಸರ್ಕಾರಕ್ಕೆ ಅನುಕೂಲ ಮಾಡಿಕೊಟ್ಟಿದೆ ಎಂದು ಪ್ರತಿಪಕ್ಷಗಳು ಆರೋಪಿಸಿದ್ದವು.

ಹರಿಯಾಣದಲ್ಲಿ, ಚುನಾವಣೋತ್ತರ ಸಮೀಕ್ಷೆಗಳು ಪ್ರತಿಪಕ್ಷಗಳಿಗೆ ಭಾರಿ ಜನಾದೇಶ ಊಹಿಸಿದ್ದವು. 90 ಸದಸ್ಯರ ವಿಧಾನಸಭೆಯಲ್ಲಿ ಬಿಜೆಪಿ 48 ಸ್ಥಾನಗಳನ್ನು ಪಡೆದರೆ, ಕಾಂಗ್ರೆಸ್ ಕೇವಲ 37 ಸ್ಥಾನಗಳನ್ನು ಗಳಿತ್ತು.

ಲೋಕಸಭಾ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡಿದ್ದ ಪಕ್ಷವು ಹರಿಯಾಣದಲ್ಲಿ ಎರಡನೇ ಅತ್ಯುತ್ತಮ ಪಕ್ಷವಾಗಿ ಹೊರಹೊಮ್ಮಿತು. ಮಹಾರಾಷ್ಟ್ರದಲ್ಲೂ ಚುನಾವಣೋತ್ತರ ಸಮೀಕ್ಷೆಗಳು ರಾಜ್ಯದಲ್ಲಿ ನಿಕಟ ಸ್ಪರ್ಧೆ ನಡೆಯಲಿದೆ ಎಂದು ಭವಿಷ್ಯ ನುಡಿದಿದ್ದವು. 288 ಸದಸ್ಯರ ವಿಧಾನಸಭೆಯಲ್ಲಿ 235 ಸ್ಥಾನಗಳನ್ನು ಗೆಲ್ಲುವ ಮೂಲಕ ಮಹಾಯುತಿ ಪ್ರಚಂಡ ಬಹುಮತದೊಂದಿಗೆ ಅಧಿಕಾರಕ್ಕೆ ಮರಳಿತ್ತು.

Read More
Next Story