ಭಾರತ-ಆಸ್ಟ್ರಿಯ ಬಾಂಧವ್ಯ ಸದೃಢ: ಪ್ರಧಾನಿ ಮೋದಿ
x

ಭಾರತ-ಆಸ್ಟ್ರಿಯ ಬಾಂಧವ್ಯ ಸದೃಢ: ಪ್ರಧಾನಿ ಮೋದಿ

ಪ್ರಧಾನಿ ಮೋದಿ ಅವರ ಭೇಟಿ ಸಮಯದಲ್ಲಿ ಉಭಯ ದೇಶಗಳು ತಮ್ಮ ಸಂಬಂಧವನ್ನು ಮತ್ತಷ್ಟು ದೃಢಗೊಳಿ ಸುವ ಮಾರ್ಗಗಳನ್ನು ಅನ್ವೇಷಿಸುತ್ತವೆ ಮತ್ತು ವಿವಿಧ ಭೌಗೋಳಿಕ ರಾಜಕೀಯ ಸವಾಲುಗಳಿಗೆ ನಿಕಟ ಸಹಕಾರವನ್ನು ಮುಂದುವರಿಸುತ್ತವೆ.


ಪ್ರಧಾನಿ ಮೋದಿ ಅವರು ಆಸ್ಟ್ರಿಯಕ್ಕೆ ಎರಡು ದಿನಗಳ ಭೇಟಿಗಾಗಿ, ಮಾಸ್ಕೋದಿಂದ ವಿಯೆನ್ನಾಕ್ಕೆ ಮಂಗಳವಾರ ಆಗಮಿಸಿದರು. ಆಸ್ಟ್ರಿಯದ ಚಾನ್ಸೆಲರ್ ಕಾರ್ಲ್ ನೆಹಮ್ಮರ್ ಅವರು ಆತಿಥ್ಯ ವಹಿಸಿದ್ದರು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಭಾರತ-ಆಸ್ಟ್ರಿಯದ ಸ್ನೇಹ ಸದೃಢವಾಗಿದೆ. ಮುಂಬರುವ ದಿನಗಳಲ್ಲಿ ಅದು ಇನ್ನಷ್ಟು ಬಲಗೊಳ್ಳುತ್ತದೆ ಎಂದು ಪ್ರಧಾನಿ ಮೋದಿ ಅವರು ಬುಧವಾರ ತಮ್ಮ ಅಧಿಕೃತ ಮಾತುಕತೆಗೆ ಮುನ್ನ ಚಾನ್ಸೆಲರ್ ನೆಹಮ್ಮರ್ ಅವರ ಭೇಟಿ ವೇಳೆ ಹೇಳಿದರು.

ʻಭಾರತ-ಆಸ್ಟ್ರಿಯ ಪಾಲುದಾರಿಕೆಯಲ್ಲಿ ಒಂದು ಪ್ರಮುಖ ಮೈಲಿಗಲ್ಲು! ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಡನೆ ಆಸ್ಟ್ರಿಯದ ಚಾನ್ಸೆ ಲರ್ ಖಾಸಗಿ ಭೇಟಿ ಆಯೋಜಿಸಿದ್ದಾರೆ. ಉಭಯ ನಾಯಕರ ನಡುವಿನ ಮೊದಲ ಭೇಟಿ ಇದಾಗಿದೆ. ದ್ವಿಪಕ್ಷೀಯ ಪಾಲುದಾರಿಕೆಯ ಸಂಪೂರ್ಣ ಸಾಮರ್ಥ್ಯವನ್ನು ಅರಿತುಕೊಳ್ಳುವ ಕುರಿತು ಚರ್ಚೆಗಳು ಮುಂದೆ ನಡೆಯಲಿವೆ,ʼ ಎಂದು ಎಂಇಎ ವಕ್ತಾರ ರಣಧೀರ್ ಜೈಸ್ವಾಲ್ ಎಕ್ಸ್‌ನಲ್ಲಿ ಬರೆದಿದ್ದಾರೆ. ವಿಯೆನ್ನಾದಲ್ಲಿ ಇಬ್ಬರು ನಾಯಕರು ಒಟ್ಟಿಗೆ ಇರುವ ಫೋಟೋಗಳನ್ನುಹಾಕಿದ್ದಾರೆ.

ಅಪ್ಪುಗೆ ಮತ್ತು ಸೆಲ್ಫಿ: ಮೋದಿ ಅವರು ನೆಹಮ್ಮರ್ ಅವರನ್ನು ಅಪ್ಪಿಕೊಳ್ಳುತ್ತಿರುವ ಮತ್ತು ಆಸ್ಟ್ರಿಯದ ಚಾನ್ಸೆಲರ್ ಮೋದಿ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸುತ್ತಿರುವ ಫೋಟೋ ಪೋಸ್ಟ್‌ ಮಾಡಲಾಗಿದೆ.

ನೆಹಮ್ಮರ್ ಎಕ್ಸ್‌ ನಲ್ಲಿ ತಮ್ಮ ಮತ್ತು ಮೋದಿಯವರ ಫೋಟೋ ಪೋಸ್ಟ್ ಮಾಡಿದ್ದಾರೆ. ʻವಿಯೆನ್ನಾಕ್ಕೆ ಸ್ವಾಗತ. ಆಸ್ಟ್ರಿಯಕ್ಕೆ ನಿಮ್ಮನ್ನು ಸ್ವಾಗತಿಸಲು ಸಂತೋಷ ಮತ್ತು ಗೌರವದ ವಿಷಯ. ಆಸ್ಟ್ರಿಯ ಮತ್ತು ಭಾರತ ದೇಶಗಳು ಸ್ನೇಹಿತರು ಮತ್ತು ಪಾಲುದಾರರು. ನಿಮ್ಮ ಭೇಟಿ ಸಮಯದಲ್ಲಿ ರಾಜಕೀಯ ಮತ್ತು ಆರ್ಥಿಕ ಚರ್ಚೆಗಳನ್ನು ಎದುರು ನೋಡುತ್ತಿದ್ದೇನೆ,ʼ

ಪ್ರಧಾನಿ ಮೋದಿ ಅವರು ಆಸ್ಟ್ರಿಯದ ಚಾನ್ಸೆಲರ್‌ಗೆ ಧನ್ಯವಾದ ಅರ್ಪಿಸಿದ್ದು, ನಾಳೆಯ ಚರ್ಚೆಗಳನ್ನುಎದುರು ನೋಡುತ್ತಿರುವುದಾಗಿ ಹೇಳಿದ್ದಾರೆ. ʻನಮ್ಮ ರಾಷ್ಟ್ರಗಳು ಜಾಗತಿಕ ಒಳಿತಿಗಾಗಿ ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತವೆ,ʼ ಎಂದು ಬರೆದಿದ್ದಾರೆ.

75 ನೇ ವಾರ್ಷಿಕೋತ್ಸವ: ಮೋದಿ ಅವರನ್ನು ಆಸ್ಟ್ರಿಯದ ವಿದೇಶಾಂಗ ಸಚಿವ ಅಲೆಕ್ಸಾಂಡರ್ ಶಾಲೆನ್‌ಬರ್ಗ್ ಅವರು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು.

ಎಕ್ಸ್‌ ನ ಪೋಸ್ಟ್‌ನಲ್ಲಿ ಎಂಇಎ ವಕ್ತಾರರು, ʻಈ ವರ್ಷ ಎರಡು ದೇಶಗಳು ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 75 ನೇ ವಾರ್ಷಿಕೋತ್ಸವ ಆಗಿರುವುದರಿಂದ, ಈ ಮಹತ್ವದ ಭೇಟಿಯು ಭಾರತ-ಆಸ್ಟ್ರಿಯ ಸಂಬಂಧಗಳಿಗೆ ಹೊಸ ವೇಗವನ್ನು ನೀಡುತ್ತದೆ.ʼ ಮೋದಿ ಅವರು ಆಸ್ಟ್ರಿಯದ ಅಧ್ಯಕ್ಷ ಅಲೆಕ್ಸಾಂಡರ್ ವ್ಯಾನ್ ಡೆರ್ ಬೆಲ್ಲೆನ್ ಅವರನ್ನು ಭೇಟಿ ಮಾಡಲಿದ್ದಾರೆ.

ಪ್ರಧಾನಿ ಮತ್ತು ಚಾನ್ಸೆಲರ್‌ ಭಾರತ ಮತ್ತು ಆಸ್ಟ್ರಿಯದ ಉದ್ಯಮಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಹಂಚಿಕೊಂಡ ಮೌಲ್ಯಗಳು: ಆಸ್ಟ್ರಿಯ ಭೇಟಿಗೆ ಮುನ್ನ ಮೋದಿ ಅವರು, ಪ್ರಜಾಪ್ರಭುತ್ವ, ಸ್ವಾತಂತ್ರ್ಯ ಮತ್ತು ಕಾನೂನಿನ ಆಡಳಿತದ ಹಂಚಿಕೊಂಡ ಮೌಲ್ಯಗಳು ಎರಡು ದೇಶಗಳ ನಿಕಟ ಪಾಲುದಾರಿಕೆಯ ತಳಹದಿಯನ್ನು ರೂಪಿಸುತ್ತವೆ ಎಂದು ಹೇಳಿದರು.

ನೆಹಮ್ಮರ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಒಂದು ದಿನದ ನಂತರ ಮೋದಿ ಅವರ ಹೇಳಿಕೆ ಬಂದಿದೆ: ʻವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮುಂದಿನ ವಾರ ವಿಯೆನ್ನಾದಲ್ಲಿ ಸ್ವಾಗತಿಸಲು ಎದುರು ನೋಡುತ್ತಿದ್ದೇನೆ.40 ವರ್ಷಗಳ ನಂತರ ಭಾರತದ ಪ್ರಧಾನಿಯ ಮೊದಲ ಭೇಟಿ ಮತ್ತು ಭಾರತದೊಂದಿಗೆ 75 ವರ್ಷಗಳ ರಾಜತಾಂತ್ರಿಕ ಸಂಬಂಧಗಳನ್ನು ಆಚರಿಸುತ್ತಿರುವಾಗ ಮಹತ್ವದ ಮೈಲಿಗಲ್ಲು,ʼ ಎಂದು ಹೇಳಿದರು.

ನೆಹಮ್ಮರ್‌ಗೆ ಪ್ರತಿಕ್ರಿಯಿಸಿದ ಮೋದಿ, ʻಧನ್ಯವಾದಗಳು ಚಾನ್ಸೆಲರ್. ಆಸ್ಟ್ರಿಯಕ್ಕೆ ಭೇಟಿ ನೀಡುವುದು ನಿಜಕ್ಕೂ ಗೌರವ. ನಮ್ಮ ರಾಷ್ಟ್ರಗಳ ನಡುವಿನ ಬಾಂಧವ್ಯವನ್ನು ಬಲಪಡಿಸುವ ಮತ್ತು ಸಹಕಾರದ ಹೊಸ ಮಾರ್ಗಗಳನ್ನು ಅನ್ವೇಷಿಸುವ ಚರ್ಚೆಯನ್ನು ಎದುರು ನೋಡುತ್ತಿದ್ದೇನೆ. ಪ್ರಜಾಪ್ರಭುತ್ವ, ಸ್ವಾತಂತ್ರ್ಯ ಮತ್ತು ಕಾನೂನಿನ ಹಂಚಿಕೆಯ ಮೌಲ್ಯಗಳ ತಳಹದಿಯಲ್ಲಿ ನಿಕಟ ಪಾಲುದಾರಿಕೆಯನ್ನು ನಿರ್ಮಿಸೋಣ,ʼ ಎಂದು ಬರೆದಿದ್ದರು.

Read More
Next Story